Advertisement

ರೈತರ ಆತ್ಮಹತ್ಯೆಗೆ ರಾಜ್ಯ ಸರಕಾರ ಕಾರಣ 

07:00 AM Mar 28, 2018 | |

ದಾವಣಗೆರೆ: 5 ವರ್ಷದಲ್ಲಿ ಕರ್ನಾಟಕದಲ್ಲಿ 3,750 ಕ್ಕೂ ಹೆಚ್ಚು ಅನ್ನದಾತರ ಆತ್ಮಹತ್ಯೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ರೈತ ವಿರೋಧಿ ನೀತಿಯೇ ಪ್ರಮುಖ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದರು.

Advertisement

ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಮಂಗಳವಾರ ಮುಷ್ಟಿಧಾನ್ಯ ಅಭಿಯಾನ, ಕರುನಾಡ ಜಾಗೃತಿ ಯಾತ್ರೆ, ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಷ್ಟೊಂದು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಒಳಗಾಗಿ ದ್ದರೂ ಸಿದ್ದರಾಮಯ್ಯ ಸರ್ಕಾರ ಕಿಂಚಿತ್ತೂ ಗಮನ ನೀಡುತ್ತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಂತಹ ನಿಸ್ಸೀಮ, ನಿರ್ಲಕ್ಷದ ಸರ್ಕಾರವನ್ನು ನೋಡಿಯೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. 

ಇದೇ ವೇಳೆ, ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ರೈತ ಬಂಧು ಎಂದು ಕರೆಯುವುದು ಎಲ್ಲ ದೃಷ್ಟಿಯಿಂದ ಸರಿಯಾಗಿಯೇ ಇದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ರೈತರಿಗೆ ಅಚ್ಚೆ ದಿನ್‌ ಬರಲಿವೆ. ತೆಂಗು, ಅಡಕೆ, ಕಾಫಿ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ರೋಗದ ಬಗ್ಗೆ ಸಂಶೋಧನೆ ನಡೆಸಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಮೀಪದಲ್ಲಿ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಮಠಾಧೀಶರ ಜತೆ ಮಾತುಕತೆ
ಚಿತ್ರದುರ್ಗ: “ಮಠಮಾನ್ಯಗಳ ತವರೂರು’ ಎಂದೇ ಹೆಸರು ಪಡೆದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ಮಠಗಳಿಗೆ ಭೇಟಿ ನೀಡಿ ವಿವಿಧ ಮಠಾಧೀಶರ ಜತೆ ಸಮಾಲೋಚನೆ ನಡೆಸಿದರು. ದಾವಣಗೆರೆ ಜಿಲ್ಲೆ ಯಿಂದ
ಮೊದಲಿಗೆ ಸಿರಿಗೆರೆ ತರಳಬಾಳು ಮಠಕ್ಕೆ ಭೇಟಿ ನೀಡಿದ ಶಾ, ತರಳಬಾಳು ಜಗದ್ಗುರು ಡಾ|ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿಯ ವರಿಂದ ಆಶೀರ್ವಾದ ಪಡೆದರು. ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಮಧ್ಯಾಹ್ನ 3:05ಕ್ಕೆ ಆಗಮಿಸಿದ ಶಾ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು. ಬಳಿಕ ಇಲ್ಲಿಯೇ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮಠಾಧೀಶ ರಾದ ಹೊಸದುರ್ಗ ಕುಂಚಿಟಿಗ  ಮಹಾಸಂಸ್ಥಾನ ಮಠದ ಡಾ|ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿಫಿರಾಮೇಶ್ವರ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಜತೆ ಹೆಚ್ಚು ಕಾಲ
ಸಮಾಲೋಚನೆ ನಡೆಸಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮನವಿ: ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಶಿಫಾರಸು ಮಾಡಿದೆ. ಅದನ್ನು ಜಾರಿಗೊಳಿಸಲು ತಮ್ಮ ಪಕ್ಷದ ವತಿಯಿಂದ ಪ್ರಯತ್ನಿಸಬೇಕು ಎಂದು  ಡಾ| ಶಿವಮೂರ್ತಿ ಮುರುಘಾ ಶರಣರು ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ. 

Advertisement

ಸಿರಿಗೆರೆ ಶ್ರೀಗಳೊಂದಿಗೆ ಗೌಪ್ಯ ಚರ್ಚೆ:
ಮಧ್ಯ ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಪ್ರಮುಖ ಮಠವಾದ ಸಿರಿಗೆರೆಯ ತರಳಬಾಳು ಮಠದ  ಡಾ|ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯವರ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೆಲ ಹೊತ್ತು ಗೌಪ್ಯ ಚರ್ಚೆ ನಡೆಸಿ, ಶಾಂತಿವನದಲ್ಲಿ ಭೋಜನ ಸವಿದರು.

ರೈತರ ಋಣ ನಮ್ಮ ಮೇಲಿದೆ
ಮುಷ್ಟಿ ಧಾನ್ಯ ಅಭಿಯಾನದಲ್ಲಿ ಸಂಗ್ರಹಿಸಿದ ಅಕ್ಕಿಯನ್ನು ತಾಲೂಕು ಕೇಂದ್ರದ ದೇವಸ್ಥಾನ ಇತರೆಡೆ ಅಡುಗೆ ಮಾಡಿ, ಸಾಮೂಹಿಕ ಭೋಜನ ಮಾಡಲಾಗುವುದು. ಅದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ರಕ್ತದಲ್ಲಿ ಅಂತರ್ಗತವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಮಿತ್‌ ಶಾ ಹೇಳಿದರು. ಗ್ರಾಮದ 5 ಮನೆಯಲ್ಲಿ  ಮುಷ್ಟಿ ಧಾನ್ಯ ಸಂಗ್ರಹಿಸಿದರು.

ಕರ್ನಾಟಕದಲ್ಲಿ ರೈತ ಬಂಧು ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ರೈತ ಮಿತ್ರ ನರೇಂದ್ರ ಮೋದಿ, ಕರ್ನಾಟಕದಲ್ಲಿ ರೈತ ಬಂಧು ಯಡಿಯೂರಪ್ಪನವರ ಅಧಿಕಾರದಲ್ಲಿ ರೈತರಿಗೆ ಅಚ್ಚೆದಿನ್‌ ಬರಲಿವೆ. 
● ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next