Advertisement
ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕಾರಣ ಗಳಲ್ಲೊಂದಾಗಿರುವ ಅರಣ್ಯದೊಳಗೆ ನೀರಿನ ಸಮಸ್ಯೆಯನ್ನು ನೀಗಿಸಲು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಬೋರ್‌ವೆಲ್ ಕೊರೆಯಿಸಿ ಸೌರವಿದ್ಯುತ್ ಬಳಕೆಯ ಮೋಟಾರ್ ಪಂಪ್‌ನ್ನು ಅಳವಡಿಸಿ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ನೀರು ಪೂರೈಸುತ್ತಿದೆ.
Related Articles
Advertisement
ಈಗಾಗಲೆ ಎರೆಕಟ್ಟೆಯ ಹೂಳನ್ನೆತ್ತಿದ್ದು, ಬಿಸಿಲಿನ ಸಮಯದಲ್ಲಿ ಎರಡು ಇಂಚಿಗೂ ಹೆಚ್ಚು ನೀರು ಹರಿಯುತ್ತಿದೆ. ಇನ್ನು 15 ದಿನದಲ್ಲಿ ಕಟ್ಟೆ ತುಂಬಲಿದೆ, ಈ ಕಟ್ಟೆ ತುಂಬಿದ ನಂತರ ಹತ್ತಿರದ ಹಿತ್ತಲುಗುಂಡಿಕಟ್ಟೆಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುವುದು, ಅಲ್ಲದೆ ಸುತ್ತಮುತ್ತ ಸ್ವಲ್ಪ ದೂರದಲ್ಲಿ ಗುಂಡಿ ತೋಡಿ, ಪೈಪ್ ಲೈನ್ ಅಳವಡಿಸಿ ಗುಂಡಿಗಳಿಗೂ ನೀರು ತುಂಬಿಸಿ ಪ್ರಾಣಿಗಳ ದಾಹ ಇಂಗಿಸುವ ಪ್ರಯತ್ನ ಇಲ್ಲಿನ ಅಧಿಕಾರಿಗಳದ್ದು, ಈಗಾಗಲೆ ನಾಗರಹೊಳೆ ಮುಖ್ಯರಸ್ತೆಯಲ್ಲಿನ ಮರಳುಕಟ್ಟೆಗೆ ಕಳೆದೆರಡು ತಿಂಗಳಿನಿಂದ ಖಾಸಗಿ ರೈತರ ಜಮೀನಿನ ಪಂಪ್‌ಸೆಟ್‌ನಿಂದ ನೀರು ತುಂಬಿಸಲಾಗುತ್ತಿದೆ.
ಲಕ್ಷ್ಮಣತೀರ್ಥ ಖಾಲಿ: ಉದ್ಯಾನದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಿಂದ ಈಗಾಗಲೆ ಜನರೇಟರ್ ಬಳಸಿ ಹಾಲುದೊಡ್ಡಿಕೊಳ, ಮಂಡಳ್ಳಿಕೆರೆ, ಪಾರದಕೊಳಕ್ಕೆ ನೀರು ತುಂಬಿಸಲಾಗಿದೆ. ಅಲ್ಲದೆ ಮೂರ್ಕಲ್ ಬೋರ್‌ವೆಲ್‌ನಿಂದ ಬಿದಿರುಕಟ್ಟೆ, ಚನ್ನಮ್ಮನಕಟ್ಟೆಗೂ ನೀರು ತುಂಬಿಸಿದ್ದು, ಈ ಬಾಗದಲ್ಲಿ ಸೌರ ಪಂಪ್‌ಸೆಟ್ ಅಳವಡಿಸುವ ಯೋಚನೆ ಇದೆ. ಇದೀಗ ನದಿಯಲ್ಲೂ ನೀರಿಲ್ಲ. ಹೀಗಾಗಿ ಸೌರ ಪಂಪ್‌ಸೆಟ್ ಅತ್ಯವಶ್ಯವಾಗಿದೆ. ರಾಜೇಗೌಡನಕಟ್ಟೆಯ ಕಾಂಕ್ರಿಟ್ ತೊಟ್ಟಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದರು.
ಹುಣಸೂರು, ಆನೆಚೌಕೂರು ವಲಯಗಳ ಬಹುತೇಕ ಕೆರೆ- ಕಟ್ಟೆಗಳಲ್ಲೂ ನೀರಿಲ್ಲ, ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ನೀರಿಗೆ ತೊಂದರೆ ಇರುವೆಡೆಗಳಲ್ಲಿ ಬೋರ್‌ವೆಲ್ ಕೊರೆಯಿಸಿ ಸೌರಪಂಪ್ ಅಳವಡಿಸಿ ನೀರು ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೇಗ ಮಳೆ ಆರಂಭವಾಗದಿದ್ದಲ್ಲಿ ಬೋರ್ ವೆಲ್ ನಲ್ಲಿಯೂ ನೀರು ಕಡಿಮೆಯಾಗಲಿದೆ.-ಪ್ರಸನ್ನಕುಮಾರ್, ಎಸಿಎಫ್ * ಸಂಪತ್ ಕುಮಾರ್