ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದ ಜನರಿಗೆ ಗುರುಕುಲ ಪದ್ಧತಿಯಡಿ ಉತ್ತಮ ಶಿಕ್ಷಣ ನೀಡುತ್ತಿರುವ ತಾಲೂಕಿನ ತಪಸಿಹಳ್ಳಿ ಶ್ರೀ ಪುಷ್ಪಾಂಡಜ ಆಶ್ರಮಕ್ಕೆ ಅಗತ್ಯ ನಿವೇಶನ ಹಾಗೂ ಅನುದಾನ ನೀಡಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಅಖೀಲ ಭಾರತ ತೊಗಟವೀರ ಕ್ಷತ್ರಿಯ ಸಂಘಗಳ ಮಹಾ ಮಂಡಳಿ ಮತ್ತು ಶ್ರೀ ಪುಷ್ಪಾಂಡಜ ಮಹರ್ಷಿ ಗುರುಪೀಠದ ನೇತೃ ತ್ವದಲ್ಲಿ ತಾಲೂಕಿನ ಪುಷ್ಪಾಂಡಜ ಮಹರ್ಷಿ ಗುರುಕುಲ ಶಾಲೆಯಲ್ಲಿ ನಡೆದ ಶಾಲೆಯ ಮೊದಲ ವಾರ್ಷಿಕೋತ್ಸವ ಮತ್ತು ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
5 ಲಕ್ಷ ರೂ.ಅನುದಾನದ ಭರವಸೆ: ಶ್ರೀ ಪುಷ್ಪಾಂಡಜ ಆಶ್ರಮ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಾರದ ಕಾರಣ ಶಾಸನ ಬದ್ಧವಾಗಿ ಅನುದಾನ ಮತ್ತು ಭೂಮಿ ಮಂಜೂರು ಮಾಡಲು ನನಗೆ ಸಾಧ್ಯವಿಲ್ಲ. ಹೀಗಾಗಿ, ದೇವನಹಳ್ಳಿ ಶಾಸಕ ಮತ್ತು ನಾನು ಜೊತೆ ಗೂಡಿ 5ರಿಂದ 10 ಎಕರೆ ಭೂಮಿಯನ್ನು ಆಶ್ರಮದ ಶಿಕ್ಷಣ ಸಂಸ್ಥೆಗೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗೂ ಶಾಸಕರ ನಿಧಿಯಿಂದ 5ಲಕ್ಷ ರೂ. ನೀಡು ವುದಾಗಿ ಭರವಸೆ ನೀಡಿದರು.
ಭೂಮಿ ನೀಡಲು ಪ್ರಯತ್ನ: ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತ ನಾಡಿ, ಶ್ರೀ ಪುಷ್ಪಾಂಡಜ ಮಹರ್ಷಿ ಗುರು ಪೀಠ ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗೆ ಅಗತ್ಯ ಭೂಮಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ನಿಧಿಯಿಂದ 10 ಲಕ್ಷ ರೂ.ನೀಡು ವುದಾಗಿ ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರ: ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿ ಜನ್ಮದಿನಾಚರಣೆ ಅಂಗವಾಗಿ ಸ್ವಾಮೀಜಿ ಅವರನ್ನು ನಗರದ ಪ್ರವಾಸಿ ಮಂದಿರದ ವೃತ್ತದಿಂದ ತಪಸೀ ಹಳ್ಳಿಯ ಪುಷ್ಟಾಂಡಜ ಮಹರ್ಷಿ ಆಶ್ರಮ ದವರೆಗೆ ಪುಷ್ಟ ವೃಷ್ಠಿಯೊಂದಿಗೆ ಆಶ್ರಮದ ಭಕ್ತಾದಿಗಳು ಮೆರವಣಿಗೆ ನಡೆಸಿದರು. ಸ್ವಾಮಿಗಳ ಜನ್ಮದಿನಾಚರಣೆ ಅಂಗವಾಗಿ ಅಭಿಷೇಕ್ ನೇತ್ರಧಾಮದಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. ಮಾನಸ ಆಸ್ಪತ್ರೆ ಮತ್ತು ಆಪೆಲ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿ ಕೊಳ್ಳಲಾಗಿತ್ತು. ಸ್ವಾಮಿಗಳ ಜನ್ಮ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್‌ನಿಂದ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಆಶ್ರಮದ ಭಕ್ತಾದಿಗಳು ರಕ್ತದಾನ ಮಾಡಿದರು.
ಭಕ್ತರಿಂದ ಲಕ್ಷಾಂತರ ರೂ. ದೇಣಿಗೆ: ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿಗೆ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಕೆಲ ಗಣ್ಯರು ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿ, ಸ್ವಾಮಿಗಳ ಆಶೀ ರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಆಶ್ರ ಮದ ಭಕ್ತರು ಲಕ್ಷ ರೂ. ಅಂದಾಜಿನಲ್ಲಿ ದೇಣಿಗೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವಾಮಿಗಳ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಪುಷ್ಪಾಂಡಜ ಮಹರ್ಷಿ ಗುರುಪೀಠ ಟ್ರಸ್ಟ್ ಅಧ್ಯಕ್ಷ ಸಿ.ಅಶ್ವ ತ್ಥನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜಿಲ್ಲಾ ಪಂಚಾಯಿತಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಅಪ್ಪಯಣ್ಣ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಶ್ರೀ ಪುಷ್ಪಾಂಡಜ ಮಹರ್ಷಿ ಗುರುಪೀಠ ಟ್ರಸ್ಟ್‌ನ ಸಮಸ್ತ ಪದಾಧಿಕಾರಿಗಳು, ಆಶ್ರಮದ ಭಕ್ತಾದಿಗಳು ಪಾಲ್ಗೊಂಡಿದ್ದರು.