ಬೆಂಗಳೂರು: ರೇಣುಕಾಸ್ವಾಮಿಯ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಇರುವ ಫೋಟೋ ಪೊಲೀಸರಿಗೆ ಸಿಕ್ಕಿದೆ. ಅದನ್ನು ಎಫ್ಎಸ್ಎಲ್ ರಿಪೋರ್ಟ್ಗೆ ಹೈದರಾಬಾದ್ಗೆ ಕಳುಹಿಸಿದ್ದೇವೆ. ಯಾರೋ ಜತೆಯಲ್ಲಿದ್ದವನು ವೀಡಿಯೋ ಮಾಡಿಕೊಂಡಿದ್ದ. ಅದನ್ನು ಕೋರ್ಟ್ಗೆ ಸಲ್ಲಿಸಿ, ಜಾಮೀನು ರದ್ದತಿಗೆ ಮನವಿ ಮಾಡಬೇಕು. ಅನಂತರ ಮುಂದಿನ ಕ್ರಮ ಆಗಬೇಕು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ದರ್ಶನ್ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಮುಂದಿನ 2 ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡದೇ ಇದ್ದರೆ ಬೆನ್ನುಮೂಳೆ ಮುರಿದು ಹೋಗುತ್ತದೆ ಎಂದು ಹೇಳಿದ್ದರು. ಆದರೆ ಇಷ್ಟು ದಿನ ಕಳೆದರೂ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಲ್ಲ. ಇದರ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.