Advertisement
ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ, ಸದಸ್ಯೆ ಸವಿತಾ ಹುರಕಡ್ಲಿ ಅವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 15 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ವಿವಾಹ, ಸಾಮಾಜಿಕ ಹೋರಾಟಗಳ ಮೂಲಕ ನಿರಂತರ ಜನಸೇವೆ ಸಲ್ಲಿಸುತ್ತಿರುವ ಚನಬಸು ಹುರಕಡ್ಲಿಯವರ ಸಾಮಾಜಿಕ ಸೇವಾಕಾರ್ಯ ಮಾದರಿ ಮತ್ತು ಶ್ಲಾಘನೀಯ.
Related Articles
Advertisement
ಮೂಡಲಗಿ ಸಾಹಿತಿ ಬಾಲಶೇಖರ ಬಂದಿ, ಸಾನಿಧ್ಯ ವಹಿಸಿದ್ದ ಸಹಜಾನಂದ ಸ್ವಾಮೀಜಿ, ಶಿವಶಂಕರ ಸ್ವಾಮಿಜಿ, ಕಂಕನವಾಡಿ ಮಾರುತಿ ಶರಣರು, ಪತ್ರಕರ್ತ ಚಂದ್ರಶೇಖರ ಮೋರೆ, ಅದ್ವೀತಾ ಬಡಿಗೇರ ಮಾತನಾಡಿದರು. ನೇತ್ರಾಧಿಕಾರಿ ಡಾ| ವಿಜಯ ಡೋಮನಾಳ, ಡಾ|ಅಜೀತ ಕನಕರಡ್ಡಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಭಾಗವಹಿಸಿದ್ದರು.
ಉಚಿತ ಆರೋಗ್ಯ ಶಿಬಿರ: ಸಿ.ಎಂ.ಹುರಕಡ್ಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ರಬಕವಿ-ಬನಹಟ್ಟಿ, ಮುಧೋಳ, ಜಮಖಂಡಿ, ಗೋಕಾಕ, ರಾಯಭಾಗ, ಮೂಡಲಗಿ ಸೇರಿದಂತೆ ಆರು ತಾಲೂಕಿನಿಂದ ಆಗಮಿಸಿದ್ದ 500ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆಗೆ ಮಾಡಲಾಯಿತು.
ಇದರಲ್ಲಿ 56 ಅಂಗವಿಕಲರಿಗೆ ಕೃತಕ ಕೈಕಾಲು ಜೋಡಣೆ, 55 ಜನರಿಂದ ರಕ್ತದಾನ, 75 ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ, 10 ಜನರಿಗೆ ಉಚಿತ ಕ್ಯಾನ್ಸರ್ ಔಷಧ ವಿತರಿಸಲಾಯಿತು. ಧಾರವಾಡದ ಬಸವಾನಂದ ಸ್ವಾಮಿಜಿ 93ನೇ, ದಾವಣಗೆರೆಯ ಶಿವಕುಮಾರ ಸ್ವಾಮೀಜಿ 92ನೇ ಬಾರಿಗೆ ರಕ್ತದಾನ ಮಾಡಿ ಗಮನ ಸೆಳೆದರು.ಚನ್ನಬಸು ಹುರಕಡ್ಲಿ, ಸವಿತಾ ಹುರಕಡ್ಲಿ, ಸೌಮ್ಯ ಹುರಕಡ್ಲಿ, ಬಸವರಾಜ ಹುರಕಡ್ಲಿ, ರವಿ ಜವಳಗಿ, ಸಿದ್ದು ಧಡೂತಿ, ಬಸವರಾಜ ಗಿರಿಸಾಗರ,ಮಹಾಂತೇಶ ಪಾತ್ರೋಟ, ಅನಂತ ಮನವಾಡೆ, ಸಂಜು ಬಾರಕೋಲ, ಶಿವಾನಂದ ಬಿದರಿ ಇದ್ದರು.