Advertisement

ಜನ ಪಾತ್ರ ಗುರುತಿಸಿದರೆ ಅದೇ ಮನ್ನಣೆ

09:20 AM Apr 16, 2019 | Lakshmi GovindaRaju |

“ಅಮ್ಮ ಐ ಲವ್‌ ಯು’, “ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿಶ್ವಿ‌ಕಾ ನಾಯ್ಡು ಈಗ ಬಿಝಿ ನಟಿ. ಕೈ ತುಂಬಾ ಸಿನಿಮಾಗಳಿರುವ ಮೂಲಕ ನಿಶ್ವಿ‌ಕಾ ಖುಷಿಯಾಗಿದ್ದಾರೆ. ಸದ್ಯ ನಿಶ್ವಿ‌ಕಾ ನಾಯಕಿಯಾಗಿರುವ “ಪಡ್ಡೆಹುಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ನಿಶ್ವಿ‌ಕಾ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದಾರೆ.

Advertisement

ಹಾಡುಗಳಲ್ಲಿ ಜೋಶ್‌ ಆಗಿ ಸ್ಟೆಪ್‌ ಹಾಕಿದ್ದಾರೆ. ಈ ಸಿನಿಮಾ ಮೂಲಕ ಮತ್ತೂಂದಷ್ಟು ಸಿನಿಮಾ ಸಿಗುವ ನಿರೀಕ್ಷೆ ನಿಶ್ವಿ‌ಕಾ ಅವರಿಗಿದೆ. ತಮಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ಮಾತನಾಡುವ ನಿಶ್ವಿ‌ಕಾ, “ಇಲ್ಲಿಯವರೆಗೆ ನನಗೆ ಸಿಕ್ಕಿರುವ ಪ್ರತಿ ಚಿತ್ರದ ಪಾತ್ರ ಕೂಡ ಹೊಸದಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕ್ಯಾರೆಕ್ಟರ್‌ಗಳು ಸಿಗುತ್ತಿವೆ.

ಪ್ರತಿ ಕ್ಯಾರೆಕ್ಟರ್‌ ಕೂಡ ನನಗೆ ಹೊಸದು, ಅನ್ನೋದನ್ನ ಮನಸ್ಸಿನಲ್ಲಿ ಇಟ್ಟುಕೊಂಡು, ಅದಕ್ಕೆ ಬೇಕಾದ ಪ್ರಿಪರೇಷನ್‌ ಮಾಡಿಕೊಂಡು ಅಭಿನಯಿಸುತ್ತೇನೆ. ಹಾಗಾಗಿ ಇಲ್ಲಿಯವರೆಗೆ ಮಾಡಿರುವ ಯಾವ ಪಾತ್ರಗಳು ನನಗೆ ರಿಪೀಟ್‌ ಅನಿಸಲಿಲ್ಲ’ ಅನ್ನೋದು ನಿಶ್ವಿ‌ಕಾ ಮಾತು.

ಸದ್ಯ ನಿಶ್ವಿ‌ಕಾ ನಾಯ್ಡು, ಪ್ರಜ್ವಲ್‌ ದೇವರಾಜ್‌ ಜೊತೆ “ಜಂಟಲ್‌ಮೆನ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿಶ್ವಿ‌ಕಾ ಅತ್ಯಂತ ಶಿಸ್ತುಬದ್ಧ ಜೀವನ ನಡೆಸುವಂಥ ತಪಸ್ವಿನಿ ಎಂಬ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋಗೆ ಸಂಪೂರ್ಣ ವಿರುದ್ಧವಾದ ಪಾತ್ರವಂತೆ.

ಇನ್ನು “ರಾಮಾರ್ಜುನ’ ಚಿತ್ರದಲ್ಲಿ ಅನೀಶ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಲಾ ಸ್ಟುಡೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. “ಒಂದು ವರ್ಷದಲ್ಲೇ ಇಷ್ಟೊಂದು ಅವಕಾಶ ಸಿಕ್ಕಿರುವುದರ ಬಗ್ಗೆ ಖುಷಿ ಇದೆ. “ವಾಸು ನಾನು ಪಕ್ಕಾ ಕಮರ್ಷಿಯಲ್‌’ ನಡೆಯುತ್ತಿರುವಾಗಲೇ, “ಅಮ್ಮ ಐ ಲವ್‌ ಯು’ ಸಿನಿಮಾ ಸಿಕ್ಕಿತು.

Advertisement

ನಂತರ ಪಡ್ಡೆಹುಲಿ ಸಿನಿಮಾ ಸಿಕ್ಕಿತು. ಒಂದು ಸಿನಿಮಾದಿಂದ ಮತ್ತೂಂದು ಸಿಗುತ್ತಿದೆ. ಸದ್ಯ ಸಿನಿಮಾ ಕೆರಿಯರ್‌ನಲ್ಲಿ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಅದನ್ನ ಕಾಪಾಡಿಕೊಂಡು ಹೋಗುವುದರ ಮೇಲೆ ಮುಂದಿನ ಕೆರಿಯರ್‌ ನಿಂತಿದೆ’ ಅನ್ನೋದು ನಿಶ್ವಿ‌ಕಾ ಮಾತು.

ನ್ನು ನಿಶ್ವಿ‌ಕಾ ಅವರನ್ನು ಜನ ಅವರು ನಿರ್ವಹಿಸಿರುವ ಪಾತ್ರಗಳ ಮೂಲಕವೇ ಹೆಚ್ಚಾಗಿ ಗುರುತಿಸುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ನಿಶ್ವಿ‌ಕಾ, “ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’ ರಿಲೀಸ್‌ ಆದಾಗ ಜನ ಅದೇ ಬೋಲ್ಡ್‌ ಹುಡುಗಿಯ ಕ್ಯಾರೆಕ್ಟರ್‌ನಲ್ಲಿ ಗುರುತಿಸುತ್ತಿದ್ದರು. “ಅಮ್ಮ ಐ ಲವ್‌ ಯು’ ರಿಲೀಸ್‌ ಆದಾಗಲೂ ಅದೇ ಮಹಾಲಕ್ಷ್ಮೀ ಕ್ಯಾರೆಕ್ಟರ್‌ನಲ್ಲಿ ಗುರುತಿಸುತ್ತಿದ್ದರು.

ಇತ್ತೀಚೆಗೆ ಪಡ್ಡೆಹುಲಿ ರಿಲೀಸ್‌ ಆಗಲಿದ್ದು, ಆ ಸಿನಿಮಾದ ಸಂಗೀತಾ ಕ್ಯಾರೆಕ್ಟರ್‌ನಲ್ಲಿ ಗುರುತಿಸುವ ನಿರೀಕ್ಷೆ ಇದೆ. ನನ್ನ ಪ್ರಕಾರ, ಒಬ್ಬ ನಟಿಗೆ ನಿಜವಾದ ಮಾನ್ಯತೆ – ಮನ್ನಣೆ ಸಿಗೋದು ಅಂದ್ರೆ, ಅವರು ಅಭಿನಯಿಸಿದ ಕ್ಯಾರೆಕ್ಟರ್‌ಗಳಲ್ಲಿ ಜನ ಅವರನ್ನು ಗುರುತಿಸಿದಾಗ. ಅಂಥದ್ದೊಂದು ಮಾನ್ಯತೆ – ಮನ್ನಣೆ ನನಗೆ ಸಿಗುತ್ತಿರುವುದು ಖುಷಿಯಾಗುತ್ತಿದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next