Advertisement
ನಂತೂರು ವೃತ್ತ ಟೀಮ್ ಇನ್‌ಸ್ಪಿರೇಶನ್ ಹಾಗೂ ಅಮೃತ ಸಂಜೀವಿನಿ ತಂಡದ ಯುವ ಕರು ನಂತೂರು ವೃತ್ತದಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಂಡಿದ್ದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ ರಾಜಗೋಪಾಲ ರೈ ಹಾಗೂ ಸತೀಶ್ ಪ್ರಭು ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಪೊಲೀಸ್ ಅಧಿಕಾರಿ ಮದನ್ ನೇತೃತ್ವದಲ್ಲಿ ಯುವಕರು ಬಸ್ ತಂಗುದಾಣಕ್ಕೆ ಅಂಟಿಸಿದ್ದ ಭಿತ್ತಿ ಚಿತ್ರಗಳನ್ನು ತೆಗೆದು ಶುಚಿಗೊಳಿಸಿ ಸುಂದರವಾಗಿ ಬಣ್ಣ ಬಳಿದರು. ವೃತ್ತದ ಸುತ್ತ ಮುತ್ತಲಿನ ಪ್ರದೇಶಗಳ ಬೀದಿಗಳನ್ನು ಶುಚಿಗೊಳಿಸಿದರು. ಮಿಥುನ್, ಕೀರ್ತನ ಶೆಟ್ಟಿ , ಸಾಹಿಲ್, ರಕ್ಷಿತ್, ಕಾರ್ತಿಕ್ ಸಹಿತ ನೂರಕ್ಕೂ ಅಧಿಕ ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಂದೂ ವಾರಿಯರ್ಸ್ ತಂಡದ ವತಿಯಿಂದ ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದ ರಸ್ತೆ ಹಾಗೂ ಆಸುಪಾಸಿನಲ್ಲಿ ಸ್ವತ್ಛತಾ ಕಾರ್ಯ ಕ್ರಮ ಜರಗಿತು. ಸ್ವತ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ಹಾಗೂ ಯೋಗೀಶ್ ಕಾಯರ್ತಡ್ಕ ಚಾಲನೆ ನೀಡಿದರು. ಪೊಲೀಸ್ ವರಿಷ್ಠಾ ಧಿಕಾರಿ ಕಾರ್ಯಾಲಯದ ಮುಖ್ಯ ದ್ವಾರದಿಂದ ಪ್ರಾರಂಭಿಸಿ ಸ್ಟೇಟ್ ಬ್ಯಾಂಕ್ ವರೆಗಿನ ರಸ್ತೆ, ಫುಟ್‌ಪಾತ್ ಹಾಗೂ ಮಾರ್ಗ ವಿಭಾಜಕಗಳನ್ನು ಶುಚಿಗೊಳಿಸಿದರು. ವಿದ್ಯುತ್ ದೀಪದ ಕಂಬಗಳಿಗೆ ಹಾಕಿದ್ದ ಹಳೆಯ ಪೋಸ್ಟರ್ ಕಿತ್ತು ಸ್ವತ್ಛಗೊಳಿಸಿದರು. ಶ್ರೀನಿವಾಸ ಸರಪಾಡಿ, ಗಣೇಶ ಪಾಂಗಳ, ಸುಮಾ ಸಹಿತ ವಾರಿಯರ್ಸ್ ತಂಡ ಸ್ವತ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿತ್ತು. ಮುಳಿಹಿತ್ಲು
ಶ್ರೀ ಅಂಬಾಮಹೇಶ್ವರಿ ಭಜನ ಮಂಡಳಿಯ ಸದಸ್ಯರಿಂದ ಮುಳಿಹಿತ್ಲು ಟೈಲರಿ ರಸ್ತೆಯಲ್ಲಿ ಸ್ವತ್ಛತೆ ನಡೆಸ ಲಾಯಿತು. ಪ್ರಕಾಶ್ ಶೆಟ್ಟಿ ಉದ್ಘಾಟಿಸಿ ದರು. ಈ ಹಿಂದೆ ತ್ಯಾಜ್ಯ ಹಾಕಲಾಗುತ್ತಿದ್ದ ಸ್ಥಳವನ್ನು ಪುಟ್ಟ ಉದ್ಯಾನವನ್ನಾಗಿ ರೂಪಿಸಲಾಗಿದೆ. ಇಂದು ಅವೆರಡನ್ನೂ ಸ್ವತ್ಛಗೊಳಿಸಿ ನಿರ್ವಹಣೆ ಮಾಡಲಾ ಯಿತು. ಟೈಲರಿ ರಸ್ತೆ ಹಾಗೂ ತೋಡು ಗಳನ್ನು ಸ್ವತ್ಛಗೊಳಿಸಲಾಯಿತು. ಬೋಳಾರ ಮುಳಿಹಿತ್ಲು ರಸ್ತೆಯೊಂದರಲ್ಲಿ ತ್ಯಾಜ್ಯ ಹಾಕಲಾಗುತ್ತಿದ್ದ ಸ್ಥಳವನ್ನು ಕಳೆದ ಮೂರು ವಾರಗಳಿಂದ ಶುಚಿಗೊಳಿಸ ಲಾಗಿತ್ತು. ಆ ಜಾಗಕ್ಕೆ ಮಣ್ಣು ತುಂಬಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಯಿತು. ಕಾರ್ತಿಕ್, ಭುಜಂಗ್ ಶೆಟ್ಟಿ ಹಾಗೂ ಕೂಸಪ್ಪ ಮತ್ತಿತರರು ಭಾಗವಹಿಸಿದರು.
Related Articles
ಶ್ರೀ ಚಕ್ರಪಾಣಿ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ ದೇವ ಸ್ಥಾನದಲ್ಲಿ ಸ್ವತ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಗುಲದ ಒಳಾಂಗಣ, ಹೊರಾಂಗಣಗಳನ್ನು ಶುಚಿಗೊಳಿಸಲಾಯಿತು. ದೇವಸ್ಥಾನದ ಕೆರೆಯನ್ನು ಶುಚಿಗೊಳಿಸಿ, ಹೊರಾವರಣ ದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ಕಡಿಯಲಾಯಿತು. ಶ್ರೀ ಪತಂಜಲಿ ಯೋಗ ಸಂಸ್ಥೆ, ಎಂ. ವಿ. ಫ್ರೆಂಡ್ಸ್ ಸಹಿತ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿ ದವು. ಸುಮಾರು ನೂರಕ್ಕೂ ಅಧಿಕ ಕಾರ್ಯಕರ್ತರು ಸುಮಾರು ಎರಡು ಗಂಟೆಗಳ ಕಾಲ ಸ್ವತ್ಛತೆ ನಡೆಸಿದರು.
Advertisement
ಕೆಪಿಟಿಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿ ಗಳಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಕಾಲೇಜಿನ ಮುಂಭಾಗದಲ್ಲಿ ಸ್ವತ್ಛತಾ ಅಭಿಯಾನ ಜರಗಿತು. ಸತತವಾಗಿ 7 ನೇ ವಾರದ ಅಭಿಯಾನವನ್ನು ಪ್ರತೀûಾ ಹಾಗೂ ರಿತೇಶ್ ಆರಂಭಗೊಳಿಸಿದರು. ಹೆದ್ದಾರಿ ಹಾಗೂ ಪಕ್ಕದಲ್ಲಿರುವ ಕಾಲುದಾರಿಯನ್ನು ಸ್ವತ್ಛಗೊಳಿಸಿ, ಬದಿಯ ಹುಲ್ಲು ಹಾಗೂ ಕಸವನ್ನು ತೆಗೆಯಲಾಯಿತು. ಮತ್ತೂಂದು ತಂಡ ಪಾಲಿಟೆಕ್ನಿಕ್ ಮುಂಭಾಗದ ವಿದ್ಯುತ್ ದೀಪಗಳಿಗೆ ತೂಗುಹಾಕಿದ್ದ ಪೋಸ್ಟರ್, ಬ್ಯಾನರ್‌ಗಳನ್ನು ಕಿತ್ತು ಶುಚಿಗೊಳಿಸಿದರು. ಅನಂತರ ರಸ್ತೆ ಹಾಗೂ ಪುಟ್‌ಪಾತ್ ಗುಡಿಸಿ ಸ್ವತ್ಛಗೊಳಿಸಲಾಯಿತು. ರಾಜೇಂದ್ರ ಹಾಗೂ ಅಂಕುಶಕುಮಾರ ಹೂಡೆ ಅಭಿಯಾನವನ್ನು ಸಂಘಟಿಸಿದರು. ಚಿಲಿಂಬಿ
ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಂದ ಚಿಲಿಂಬಿ ಯಲ್ಲಿ ಸ್ವತ್ಛತಾ ಕಾರ್ಯಕ್ರಮ ನಡೆ ಯಿತು. ಕೆ. ವಿ. ಸತ್ಯನಾರಾಯಣ ಹಾಗೂ ಮೆಹಬೂಬ್ ಚಾಲನೆ ನೀಡಿದರು. ಚಿಲಿಂಬಿ ಶಾರದಾ ನಿಕೇತನದ ಸುತ್ತಮುತ್ತ ಹಾಗೂ ಮುಖ್ಯರಸ್ತೆ ಹಾಗೂ ಕಾಲುದಾರಿ ಯನ್ನು ಶುಚಿಗೊಳಿಸಲಾಯಿತು. ವಿದ್ಯಾ ರ್ಥಿನಿಯರು ಚಿಲಿಂಬಿ ಪರಿಸರದ ಮನೆ ಗಳಿಗೆ ಕರಪತ್ರ ಹಂಚಿ ಸ್ವತ್ಛತೆಯ ಜಾಗೃತಿ ಮೂಡಿಸಲಾಯಿತು. ಸುಬ್ರಾಯ ಭಟ್ ಅಭಿಯಾನವನ್ನು ಸಂಯೋಜಿಸಿದರು. ಗಣೇಶಪುರ
ಜೆಸಿಐ ಗಣೇಶಪುರದ ಸದಸ್ಯರಿಂದ ಗಣೇಶಪುರದಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಪ್ರಕಾಶ್ ಸಾಲ್ಯಾನ್ ಹಾಗೂ ವಿಜಯಾ ಬಾಕೂìರ್ ಹಸಿರು ನಿಶಾನೆ ತೋರಿಸಿದರು. ಗಣೇಶಪುರ ವೃತ್ತ ಹಾಗೂ ಮಂಗಳಪೇಟೆ ಸುತ್ತಮುತ್ತ ಸ್ವತ್ಛ ಗೊಳಿಸಲಾಯಿತು. ಅಂಚೆಕಚೇರಿ ಆವರಣ ಗೋಡೆ ಹಾಗೂ ರಸ್ತೆ ವಿಭಾಜಕಗಳನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು. ಶ್ರೀಶ ಕರ್ಮರನ್, ವನಿತಾ ಅಂಚನ್, ಪ್ರಿಯಾ ಮತ್ತಿತರರಿದ್ದರು. ಈ ಅಭಿಯಾನಗಳಿಗೆ ಎಂಆರ್‌ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿವೆ.