Advertisement

ಮಂಗಳೂರು ಕಂಬಳ: 171 ಜತೆ ಕೋಣಗಳು ಭಾಗಿ

12:40 AM Dec 30, 2024 | Team Udayavani |

ಮಂಗಳೂರು: ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ| ಬ್ರಿಜೇಶ್‌ ಚೌಟ ನೇತೃತ್ವದಲ್ಲಿ ಬಂಗ್ರಕೂಳೂರು ಗೋಲ್ಡ್‌ಫಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಜರಗಿದ 8ನೇ ವರ್ಷದ ಮಂಗಳೂರು ಕಂಬಳ ರವಿವಾರ ಸಂಜೆ ಸಮಾರೋಪಗೊಂಡಿತು.

Advertisement

ಮಂಗಳೂರು ಕಂಬಳದಲ್ಲಿ ಒಟ್ಟು 171 ಜತೆ ಕೋಣಗಳು ಭಾಗವಹಿಸಿದ್ದವು. ಇವುಗಳಲ್ಲಿ ಕನೆಹಲಗೆ 7 ಜತೆ, ಅಡ್ಡಹಲಗೆ 8 ಜತೆ, ಹಗ್ಗ ಹಿರಿಯ 20 ಜತೆ, ನೇಗಿಲು ಹಿರಿಯ 32 ಜತೆ, ಹಗ್ಗ ಕಿರಿಯ 23 ಜತೆ, ನೇಗಿಲು ಕಿರಿಯ 81 ಜತೆ ಇದ್ದವು.

ಕನೆಹಲಗೆ ವಿಭಾಗದಲ್ಲಿ ಭಾಗವಹಿಸಿದ 7 ಜತೆ ಕೋಣಗಳಿಗೆ ಸಮಾನ ಬಹುಮಾನ ದೊರೆಯಿತು. ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್‌ (ಹಲಗೆ ಮೆಟ್ಟಿದವರು: ಭಟ್ಕಳ ಪಾಂಡು), ಕಾಂತಾವರ ಬೇಲಾಡಿ ಬಾವ ಅಶೋಕ್‌ ಶೆಟ್ಟಿ (ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್‌ ದೇವಾಡಿಗ) ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ (ಹಲಗೆ ಮೆಟ್ಟಿದವರು: ಭಟ್ಕಳ ಪಾಂಡು), ವಾಮಂಜೂರು ತಿರುವೈಲುಗುತ್ತು ಅಭಿಷೇಕ್‌ ನವೀನ್‌ಚಂದ್ರ ಆಳ್ವ (ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ಬೋಳಾರ ತ್ರಿಶಾಲ್ ಕೆ. ಪೂಜಾರಿ (ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ ನಾಯ್ಕ), ಬಾರ್ಕೂರು ಶಾಂತಾರಾಮ ಶೆಟ್ಟಿ (ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) ನಿಡ್ಡೋಡಿ ಕಾನ ರಾಮ ಸುವರ್ಣ (ಹಲಗೆ ಮೆಟ್ಟಿದವರು: ಕೊಕ್ಕರ್ಣೆ ವಡಾಪಿ ಸುರೇಶ್‌ ನಾಯ್ಕ) ಬಹುಮಾನ ಪಡೆದರು.

ಅಡ್ಡ ಹಲಗೆ
ಪ್ರಥಮ-ನಾರಾವಿ ಯುವರಾಜ್‌ ಜೈನ್‌ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಎ’ (ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್‌), ದ್ವಿತೀಯ- ನಾರಾವಿ ಯುವರಾಜ್‌ ಜೈನ್‌ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಬಿ’. (ಹಲಗೆ ಮೆಟ್ಟಿದವರು- ಭಟ್ಕಳ ಹರೀಶ್‌).

ಹಗ್ಗ ಹಿರಿಯ
ಪ್ರಥಮ-ನಂದಳಿಕೆ ಶ್ರೀಕಾಂತ್‌ ಭಟ್‌ ಎ. (ಓಡಿಸಿದ ವರು: ಬಂಬ್ರಾಣಬೈಲು ವಂದಿತ್‌ ಶೆಟ್ಟಿ), ದ್ವಿತೀಯ- ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್‌ ಬಿ. (ಓಡಿಸಿ ದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್‌ ಗೌಡ)

Advertisement

ಹಗ್ಗ ಕಿರಿಯ
ಪ್ರಥಮ- ಮಾಳ ಕಲ್ಲೇರಿ ಭರತ್‌ ಶರತ್‌ ಶೆಟ್ಟಿ (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ), ದ್ವಿತೀಯ- 80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್‌ ಶೆಟ್ಟಿ ಬಿ. (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)

ನೇಗಿಲು ಹಿರಿಯ
ಪ್ರಥಮ-ಬೋಳದಗುತ್ತು ಸತೀಶ್‌ ಶೆಟ್ಟಿ ಬಿ. (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ದ್ವಿತೀಯ- ಬಜಾಲ… ಶೈಲೇಶ್‌ ಶೆಟ್ಟಿ (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್‌ ಗೌಡ).

ನೇಗಿಲು ಕಿರಿಯ
ಪ್ರಥಮ- ಎರ್ಮಾಳ್‌ ಪುಚ್ಚೊಟ್ಟುಬೀಡು ಬಾಲ ಚಂದ್ರ ಲೋಕಯ್ಯ ಶೆಟ್ಟಿ ಎ. (ಓಡಿಸಿದವರು: ಪಟ್ಟೆ ಗುರುಚರಣ್‌), ದ್ವಿತೀಯ-ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಎ. (ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್‌).

2 ಜತೆಗೆ ಕೋಣಗಳ ಸಾಧನೆಯ ಓಟ!

ಪ್ರಸಕ್ತ ಕಂಬಳ ಋತುವಿನಲ್ಲಿ ಒಟ್ಟು 4 (ಕಕ್ಕೆಪದವು, ಕೊಡಂಗೆ, ಮೂಲ್ಕಿ, ಮಂಗಳೂರು) ಆಧುನಿಕ ಕಂಬಳಗಳು ನಡೆದಿವೆ. ಈ ಎಲ್ಲ ಕೂಟದ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್‌ ಭಟ್‌ “ಎ’ ಕೋಣಗಳು ಪ್ರಥಮ ಬಹುಮಾನ ಗಳಿಸುವ ಮೂಲಕ ಒಟ್ಟು 4 ಚಿನ್ನದ ಪದಕ ಗಳಿಸಿದೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಎ. ಕೋಣಗಳು 11.21 (100 ಮೀಟರ್‌ಗೆ ಹೋಲಿಸಿದಾಗ 8.96) ಸೆಕೆಂಡ್‌ನ‌ಲ್ಲಿ ಓಡುವ ಮೂಲಕ ಮಂಗಳೂರು ಕಂಬಳದಲ್ಲಿ ಗುರುತಿಸುವಂತೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next