Advertisement

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

05:40 PM Jan 06, 2025 | Team Udayavani |

ಮಣಿಪಾಲ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಭಾರತ ಸರ್ಕಾರದ ಅನುದಾನಿತ ಯಂಗ್ ಡಯಾಬಿಟಿಸ್ ರಿಜಿಸ್ಟ್ರಿ (YDR) ಹಂತ III ಮತ್ತು ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ವಿಭಾಗ ಮತ್ತು ಮಕ್ಕಳ ಎಂಡೋಕ್ರೈನಾಲಜಿ ಕ್ಲಿನಿಕ್ ಇದರ ಸಹಯೋಗದಲ್ಲಿ ಮಧುಮೇಹಿ ಮಕ್ಕಳ ಕುರಿತಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಕ್ರಮವನ್ನು(ಜ4) ಆಯೋಜಿಸಲಾಯಿತು.

Advertisement

ಅನೇಕ ಮಧುಮೇಹಿ ಮಕ್ಕಳು (2-25 ವರ್ಷ) ತಮ್ಮ ಪೋಷಕರೊಂದಿಗೆ ಭಾಗವಹಿಸಿದ್ದರು. ಖಾಲಿ ಹೊಟ್ಟೆಯ ರಕ್ತದ ಸಕ್ಕರೆ (FBS) ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1c), ಆಂಥ್ರೊಪೊಮೆಟ್ರಿಕ್ ಮತ್ತು ಪ್ರಮುಖ ನಿಯತಾಂಕಗಳ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.

ಮಣಿಪಾಲದ ಕೆಎಂಸಿಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವೈಡಿಆರ್ III ರ ಪ್ರಭಾರಿ ಡಾ.ಶಿವಶಂಕರ ಕೆ.ಎನ್ ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್ ಅವರ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕೆಎಂಸಿ, ಮಣಿಪಾಲ ಸಹ ಪ್ರಾಧ್ಯಾಪಕರು ಮತ್ತು ಮಕ್ಕಳ ಹಾರ್ಮೋನ್ ತಜ್ಞ ಡಾ. ಕೌಶಿಕ್ ಉರಾಳ ಹೆಚ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು . ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೌರವಾನ್ವಿತ ಅತಿಥಿಯಾಗಿ ಕೆಎಂಸಿ ಮಣಿಪಾಲದ ಸಹ ಡೀನ್ ಡಾ.ಎಸ್.ಎಸ್. ಪ್ರಸಾದ್ ಪಾಲ್ಗೊಂಡಿದ್ದರು.

ಡಾ ಅವಿನಾಶ್ ಶೆಟ್ಟಿ, ಆರಂಭಿಕ ಶಿಕ್ಷಣದ ಪ್ರಾಮುಖ್ಯತೆ ಮತ್ತು ಮಧುಮೇಹಿ ಮಕ್ಕಳಿಗೆ ನಿರಂತರ ಬೆಂಬಲದ ಅಗತ್ಯತೆಯನ್ನು ಎತ್ತಿ ತೋರಿಸಿದರು, “ದೀರ್ಘಾವಧಿಯ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಜಾಗೃತಿ ಮತ್ತು ಪೂರ್ವಭಾವಿ ನಿರ್ವಹಣೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ” ಎಂದರು.

Advertisement

ಡಾ.ಎಸ್.ಎಸ್.ಪ್ರಸಾದ್, ಮಧುಮೇಹಿ ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಸಮಗ್ರ ಶೈಕ್ಷಣಿಕ ಕಾರ್ಯಕ್ರಮಗಳ ಅಗತ್ಯವನ್ನು ಮತ್ತು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಗ ಕೇಂದ್ರದ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್, ಮಾಹೆ , ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗ, ಫಿಸಿಯೋಥೆರಪಿ ವಿಭಾಗ , ಮನಃ ಶಾಸ್ತ್ರ ಮತ್ತು ನೇತ್ರಶಾಸ್ತ್ರ ವಿಭಾಗಗಳ ಸಹಾಯದಿಂದ ಶೈಕ್ಷಣಿಕ ಕಾರ್ಯಕ್ರಮ ನಡೆಸಲಾಯಿತು ಮತ್ತು ನಂತರ ಉಚಿತ ಯೋಗ ಸಮಾಲೋಚನೆ ಹಾಗೂ ಪ್ರದರ್ಶನ, ಸಂಪೂರ್ಣ ವೈಜ್ಞಾನಿಕ ಪೌಷ್ಟಿಕಾಂಶದ ಆಹಾರಕ್ರಮದ ಸಮಾಲೋಚನೆ ಹಾಗೂ ಪ್ರದರ್ಶನ, ಮಧುಮೇಹ ಪಾದದ ಆರೈಕೆಯ ಅರಿವು ಮತ್ತು ಮಧುಮೇಹ ಸಂಬಂಧಿತ ಕಣ್ಣಿನ ತೊಂದರೆಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.

ಮಧುಮೇಹಿ ಮಕ್ಕಳ ಅನುಭವ ಹಾಗೂ ಸ್ಪೂರ್ತಿದಾಯಕ ಮಾತುಗಳು, ಆಯೋಜಿಸಿದ್ದ ಆಟಗಳಲ್ಲಿ ಭಾಗವಹಿಸುವಿಕೆ, ರಸಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಭಾಗವಾಗಿತ್ತು, ಇದು ಮಧುಮೇಹಿಗಳನ್ನು ಹುರಿದುಂಬಿಸಲು ಸಹಾಯ ಮಾಡಿತು.

ಮಧುಮೇಹ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಪೌಷ್ಠಿಕಾಂಶವುಳ್ಳ ಪಥ್ಯ ಆಹಾರವನ್ನು ನೀಡಲಾಯಿತು. ಮಕ್ಕಳ ಎಂಡೋಕ್ರಿನೊಲೊಜಿಸ್ಟ್ ಡಾ.ಕೌಶಿಕ್ ಉರಾಳ ಸಂಯೋಜಿಸಿದ ಕಾರ್ಯಕ್ರಮಕ್ಕೆ ಮಣಿಪಾಲದ ಕೆಎಂಸಿಯ ವೈದ್ಯಕೀಯ ವಿಭಾಗದ ಐಸಿಎಂಆರ್ ವೈಡಿಆರ್ III ರ ಸಂಶೋಧನಾ ಅಧಿಕಾರಿ ಡಾ. ಅಜಿತ್ ಸಿಂಗ್ ಮತ್ತು ಸಂಶೋಧನಾ ಸಹಾಯಕಿ ಜ್ಯೋತಿ ನಾಯ್ಕ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next