Advertisement

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

11:22 PM Jan 08, 2025 | Team Udayavani |

ವಡೋದರ: ದೇಶಿ ಏಕದಿನ ಕ್ರಿಕೆಟ್‌ ಪಂದ್ಯಾವಳಿಯಾದ “ವಿಜಯ್‌ ಹಜಾರೆ ಟ್ರೋಫಿ’, ಲೀಗ್‌ ಹಂತವನ್ನು ಮುಗಿಸಿ ನಾಕೌಟ್‌ ಹಂತಕ್ಕೆ ಕಾಲಿಟ್ಟಿದೆ. ಗುರುವಾರ ವಡೋದರದಲ್ಲಿ ನಡೆಯುವ ಪ್ರಿಲಿಮಿನರಿ ಕ್ವಾರ್ಟರ್‌ ಫೈನಲ್‌ನಲ್ಲಿ ರಾಜಸ್ಥಾನ- ತಮಿಳುನಾಡು ಮತ್ತು ಹರಿಯಾಣ- ಬಂಗಾಲ ತಂಡಗಳು ಎದುರಾಗಲಿವೆ.

Advertisement

ಉಳಿದಂತೆ ಗ್ರೂಪ್‌ ಹಂತದಲ್ಲಿ ಅಗ್ರ ಸ್ಥಾನ ಪಡೆದ ಕರ್ನಾಟಕ, ಗುಜರಾತ್‌, ಮಹಾ ರಾಷ್ಟ್ರ, ವಿದರ್ಭ ಮತ್ತು ಬರೋಡಾ ತಂಡ ಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ತಲುಪಿವೆ.

ನಾಕೌಟ್‌ ಆಕರ್ಷಣೆ
ನಾಕೌಟ್‌ ಹಂತದ ಆಕರ್ಷಣೆಯೆಂದರೆ ಬಹಳಷ್ಟು ತಾರಾ ಆಟಗಾರರು ಈ ದೇಶಿ ಪಂದ್ಯಾವಳಿಯಲ್ಲಿ ಆಡಲಿಳಿಯುವುದು. ಇವರಲ್ಲಿ ಪ್ರಮುಖರೆಂದರೆ ಕರ್ನಾಟಕದ ದೇವದತ್ತ ಪಡಿಕ್ಕಲ್‌, ಪ್ರಸಿದ್ಧ್ ಕೃಷ್ಣ, ತಮಿಳುನಾಡಿನ ವಾಷಿಂಗ್ಟನ್‌ ಸುಂದರ್‌ ಮತ್ತು ಬಂಗಾಲದ ಅಭಿಮನ್ಯು ಈಶ್ವರನ್‌. ಆಸ್ಟ್ರೇಲಿಯ ಪ್ರವಾಸದಲ್ಲಿದ್ದ ಕಾರಣ ಇವರಿಗೆ ಲೀಗ್‌ ಹಂತದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಆಸ್ಟ್ರೇಲಿಯ ಸರಣಿಯಲ್ಲಿ ಎಲ್ಲ 5 ಟೆಸ್ಟ್‌ ಪಂದ್ಯ ಗಳನ್ನಾಡಿದ ಕಾರಣ ಕೆ.ಎಲ್‌. ರಾಹುಲ್‌ ಬ್ರೇಕ್‌ ಪಡೆದಿದ್ದಾರೆ.

ಪ್ರಸಿದ್ಧ್ ಕೃಷ್ಣ ಮತ್ತು ದೇವದತ್ತ ಪಡಿಕ್ಕಲ್‌ ಜ. 10ರಂದು ನಡೆಯುವ ಬರೋಡಾ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಲಭ್ಯರಾಗುವುದು ಖಚಿತಗೊಂಡಿದೆ. ಆದರೆ ವಾಷಿಂಗ್ಟನ್‌ ಸುಂದರ್‌, ತಮಿಳುನಾಡು ತಂಡ ಸೆಮಿಫೈನಲ್‌ ತಲುಪಿದರಷ್ಟೇ ಆಯ್ಕೆಗೆ ಸಿಗಲಿದ್ದಾರೆ ಎನ್ನಲಾಗಿದೆ.

ಅಭಿಮನ್ಯು ಮಿಥುನ್‌ ಆಸ್ಟ್ರೇಲಿಯದಿಂದ ಒಂದು ದಿನ ಮುಂಚಿತವಾಗಿ ಹೊರಟಿರುವ ಕಾರಣ ಹರಿಯಾಣ ವಿರುದ್ಧದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

Advertisement

ನಿತೀಶ್‌ ರೆಡ್ಡಿ ರಣಜಿ ಆಟ
ಆಸ್ಟ್ರೇಲಿಯ ಪ್ರವಾಸದಲ್ಲಿ ಮಿಂಚಿದ ನಿತೀಶ್‌ ಕುಮಾರ್‌ ರೆಡ್ಡಿ ಬುಧವಾರ ತವರಿನತ್ತ ಹೊರಟಿದ್ದಾರೆ. ಆದರೆ ಆಂಧ್ರಪ್ರದೇಶ ನಾಕೌಟ್‌ ಸುತ್ತು ಪ್ರವೇಶಿಸಲು ವಿಫ‌ಲವಾದ ಕಾರಣ ಇವರಿಗೆ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವ ಅವಕಾಶ ತಪ್ಪಿದೆ. ಇದರ ಬದಲು ದ್ವಿತೀಯ ಸುತ್ತಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ಒಂದು ರಣಜಿ ಪಂದ್ಯದಲ್ಲಷ್ಟೇ ನಿತೀಶ್‌ ಆಡಿದ್ದರು.

ಪ್ರಸಕ್ತ ಋತುವಿನಲ್ಲಿ ಆಂಧ್ರಪ್ರದೇಶಕ್ಕೆ 2 ರಣಜಿ ಪಂದ್ಯಗಳಷ್ಟೇ ಬಾಕಿ ಇದೆ. 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next