Advertisement
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕೋತ್ಸವದಲ್ಲಿ 300 ಮಳಿಗೆಗಳು ತೆರೆಯುವ ಸಾಧ್ಯತೆ ಇದ್ದು, ಇದರಲ್ಲಿ 50 ರಿಂದ 100 ಕನ್ನಡ ಪುಸಕ್ತ ಮಳಿಗೆಗಳಿಗೆ ಸ್ಥಳಾವಕಾಶ ದೊರೆಯಲಿದೆ. ಆದರೆ, ಇಲ್ಲಿಯವರೆಗೂ ಕನ್ನಡದ ಪ್ರಕಾಶಕರು ಮತ್ತು ಲೇಖಕರಿಂದ ಮಳಿಗೆಗಾಗಿ ಕೇವಲ 30 ಅರ್ಜಿಗಳು ಮಾತ್ರ ಬಂದಿವೆ. ಆದರೆ, ಉತ್ತರ ಭಾರತದ ಪ್ರಕಾಶಕರಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ.
Related Articles
Advertisement
ಖಾಸಗಿ ಪ್ರಕಾಶನ ಸಂಸ್ಥೆಗಳು ಶೇ.20 ರಿಂದ 35ರಷ್ಟು ರಿಯಾಯಿತಿ ದರದಲ್ಲಿ ಕೃತಿಗಳನ್ನು ಮಾರಾಟ ಮಾಡಲಿವೆ. ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ ನಿಗದಿ ಮಾಡುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರಕ್ಕೆ ಕನ್ನಡ ಪ್ರಕಾಶಕರಿಗೆ ಮಳಿಗೆಗಳನ್ನು ಒದಗಿಸಿ ಆ ಮೊತ್ತವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಭರಿಸಲಿದೆ.
ಹೆಚ್ಚು ಅರ್ಜಿ ಬರದಿರಲು ಕಾರಣ: ಬೆಂಗಳೂರು ಪುಸ್ತಕೋತ್ಸವ ನಡೆಯುವ ಸಂದರ್ಭದಲ್ಲಿಯೇ ದಸರಾ ಮಹೋತ್ಸವ ಇರುವುದರಿಂದ ಬಹುತೇಕ ಕನ್ನಡದ ಪುಸ್ತಕ ಮಳಿಗೆಗಳು ಮೈಸೂರಿನಲ್ಲಿರಲಿವೆ. ಹೀಗಾಗಿ ಪುಸ್ತಕೋತ್ಸವದಲ್ಲಿ ಮಳಿಗೆಗಾಗಿ ಹೆಚ್ಚು ಅರ್ಜಿ ಬಂದಿಲ್ಲ ಕಾರ್ಯಕ್ರಮ ಆಯೋಜಕ ಎ.ಎನ್. ರಾಮಚಂದ್ರ ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಸಲುವಾಗಿ ಪುಸ್ತಕೋತ್ಸವ ನೆರವಾಗಲಿದೆ. ಈ ಪುಸ್ತಕೋತ್ಸವಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ