Advertisement

ಸಮಸ್ಯೆ ಪರಿಹಾರದತ್ತ ನವೋದ್ಯಮಗಳ ಚಿಂತನೆ ಅಗತ್ಯ

12:46 AM Apr 27, 2019 | Team Udayavani |

ಬೆಂಗಳೂರು: ನವೋದ್ಯಮಗಳು ದೇಶದ ಗ್ರಾಮೀಣ ಸಮಸ್ಯೆಗಳ ಪರಿಹಾರದತ್ತ ಗಮನಹರಿಸಬೇಕಿದೆ ಎಂದು ನೀತಿ ಆಯೋಗದ ಅಟಲ್‌ ಇನ್ನೋವೇಷನ್‌ ಮಿಷನ್‌ ನಿರ್ದೇಶಕ ಆರ್‌. ರಮಣನ್‌ ತಿಳಿಸಿದರು.

Advertisement

ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಬೆಂಗಳೂರು (ಐಐಎಂಬಿ) ಸಭಾಂಗಣದಲ್ಲಿ ಸೆಲ್ಕೊ ಪ್ರತಿಷ್ಠಾನವು “ಸುಸ್ಥಿರ ಇಂಧನ ಮತ್ತು ಜೀವನೋಪಾಯ’ ಕುರಿತ ಎರಡು ದಿನಗಳ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದೇಶದಲ್ಲಿರುವ ಮೂಲಸೌಲಭ್ಯ ಕಲ್ಪಿಸುವಲ್ಲಿ ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ನವೋದ್ಯಮಗಳು ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದರು. ಶಾಲಾ ದಿನಗಳಲ್ಲಿಯೇ ವಿದ್ಯಾರ್ಥಿಗಳು ಸೌರವಿದ್ಯುತ್‌, ಘನತ್ಯಾಜ್ಯದ ಮರುಬಳಕೆ ಸೇರಿದಂತೆ ಹಲವು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಇದು ಭವಿಷ್ಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸಲಿದೆ ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಸೆಲ್ಕೊ ಸಂಸ್ಥೆ ಸಂಸ್ಥಾಪಕ ಡಾ.ಹರೀಶ್‌ ಹಂದೆ ಇತರರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next