Advertisement

ಸಂಕಷ್ಟ ಅರಿತು ಸಮಸ್ಯೆ ಬಗಹರಿಸಿ

06:58 AM Jan 16, 2019 | Team Udayavani |

ಹುಣಸೂರು: ಎನ್‌ಎಸ್‌ಎಸ್‌ ಶಿಬಿರಗಳು ವಿದ್ಯಾರ್ಥಿಗಳ ಜೀವನ ಪ್ರಗತಿಯ ಮೆಟ್ಟಿಲಾಗಲಿವೆ ಎಂದು ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿಯ ವಿನೋಬಾ ಕಾಲೋನಿಯಲ್ಲಿ ನಗರದ ಮಹಿಳಾ ಪದವಿ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್‌ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಗ್ರಾಮೀಣ ಬದುಕನ್ನೇ ಅರಿಯದ ನಗರವಾಸಿಗಳು ಶಿಬಿರದಲ್ಲಿ ಪಾಲ್ಗೊಂಡು ಇಂತಹ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಗ್ರಾಮೀಣರಿಗೆ ಶಿಬಿರಾರ್ಥಿಗಳು ಜಾಥಾ ಮೂಲಕ ಅರಿವು ಮೂಡಿಸಿದ್ದು,  ಹಳ್ಳಿಗರು ಸಹ ತಮ್ಮ ಬದುಕನ್ನು ಬದಲಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸ‌ಬೇಕು ಎಂದರು.

ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಸೊಗಡು, ಜನಜೀವನ ವ್ಯವಸ್ಥೆ, ಹಳ್ಳಿಗರು ಅನುಭವಿಸುತ್ತಿರುವ ಸಂಕಷ್ಟಗಳು ಅರಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಇಲವಾಲ ಅರಣ್ಯ ತರಬೇತಿ ವಿದ್ಯಾಲಯದ ಆರ್‌ಎಫ್‌ಓ ಗಾನಶ್ರೀ,  ನಾಗರಹೊಳೆಯನ್ನು ಸಂರಕ್ಷಿತಾರಣ್ಯವೆಂದು ಘೋಷಿಸಿರುವುದರಿಂದ ವನ್ಯಜೀವಿಗಳ ಹಾಗೂ ಅರಣ್ಯ, ಪರಿಸರ ಉಳಿವಿಗೆ ಸಹಕಾರಿಯಾಗಿದೆ.

ಉದ್ಯಾನವನ್ನು ಬೆಂಕಿಯಿಂದ ರಕ್ಷಿಸುವುದು ದೊಡ್ಡ ಸವಾಲಾಗಿದ್ದು, ಕಾಡಿಗೆ ಬೆಂಕಿ ತಂತಾನೆ ಬೀಳುವುದಿಲ್ಲ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. ಅರಣ್ಯದಂಚಿನ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಕರು ಹೆಚ್ಚಿನ ಜವಾಬ್ದಾರಿ ಹೊರಬೇಕೆಂದು ಕೋರಿದರು.

ಡಿಆರ್‌ಎಫ್ಒ ರಶ್ಮಿ, ಅರಣ್ಯ ಮತ್ತು ವನ್ಯಜೀವಿಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಶಿಬಿರಾಧಿ ಕಾರಿ ಡಾ.ಕೆ.ಎಸ್‌.ಭಾಸ್ಕರ್‌, ಗ್ರಾಪಂ ಸದಸ್ಯರಾದ ಗೋವಿಂದಯ್ಯ, ಈರಯ್ಯ, ಶೇಖರ್‌, ಮಾಜಿ ಅಧ್ಯಕ್ಷ ರಾಮಯ್ಯ, ಪಿಡಿಒ ಶ್ರೀಶೈಲಾ, ವೆಂಕಟೇಶ್‌, ಮಹದೇವ್‌, ಸಹಾಯಕ ಪ್ರಾಧ್ಯಾಪಕರಾದ ಡಾ.ನಂಜುಂಡಸ್ವಾಮಿ, ಪ್ರತಿಭಾ ಜನಿಫರ್‌, ಡಾ.ಕಲಾಶ್ರೀ, ರಮಣಿನಾಯಕ್‌, ಕುಮಾರ್‌, ಮೋಹನ್‌, ಜಗದೀಶ್‌, ಮಹೇಶ್‌, ಮುಖಂಡರಾದ ಜಗದೀಶ್‌, ರವಿಕುಮಾರ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next