Advertisement
ಆಮೆಗತಿಯಲ್ಲಿ ಸಂಪರ್ಕಆಧುನಿಕ ವೇಗದ ಜೀವನಕ್ಕಾಗಿ ವೇಗದ ಸಂಪರ್ಕ, ಇಂಟರ್ನೆಟ್ ತೀರಾ ಅಗತ್ಯ ಎಂಬ ಕಾರಣಕ್ಕಾಗಿ ಎಲ್ಲರೂ ನೆಟ್ವರ್ಕ್ ಹಿಂದೆ ಬಿದ್ದಿದ್ದಾರೆ. ಆದರೆ, ಟೆಲಿಕಾಂ ಇಲಾಖೆ ಮಾತ್ರ ಇನ್ನೂ ಅತ್ಯಂತ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
Related Articles
Advertisement
ಡಿಜಿಟಲ್ ಸೌಲಭ್ಯ ಅಲಭ್ಯ!ಗಂಗನಾಡು ಭಾಗದಲ್ಲಿ ಕೃಷಿ ಮುಖ್ಯ ಜೀವನಾಧಾರವಾಗಿದೆ. ಪಡಿತರ ವ್ಯವಸ್ಥೆಯ ಅನುಕೂಲ ಪಡೆದಿರುವ ನಾಲ್ಕೈದು ಕಿ.ಮೀ ದೂರದ ತಗ್ಗರ್ಸೆಗೆ ಬರಬೇಕು. ಬಹುದೊಡ್ಡ ವ್ಯಾಪ್ತಿ ಇದ್ದರು ಕೂಡ ನೆಟ್ವರ್ಕ್ ಇಲ್ಲದೆ ಡಿಜಿಟಲ್ ಸೌಲಭ್ಯ ಪಡೆಯಲು ಸಾದ್ಯವಾಗಿಲ್ಲ. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಈ ಭಾಗದ ಜನರು ನೆಟ್ವರ್ಕ್ಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ಮಕ್ಕಳಿಗೆ ಶೈಕ್ಷಣಿಕ ಪಾಠ ಕಲಿಯಲು ಸಮಸ್ಯೆಯಾಗಿದೆ. ರೈತರಿಗೆ ತಮ್ಮ ಜಮೀನಿನ ಬೆಳೆ ಸಮೀಕ್ಷೆ ನಡೆಯಲು ಸಮಸ್ಯೆಯಾಗುತ್ತಿದೆ. ಭರವಸೆ ಮಾತ್ರ
ಟವರ್ ಆರಂಭಗೊಂಡರು ನೆಟ್ವರ್ಕ್ ಬಾರದಿರುವ ಕುರಿತು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಸಂಸದರು ಬೈಂದೂರಿನಲ್ಲಿ ಬಿ.ಎಸ್.ಎನ್.ಎಲ್. ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿದ್ದರು. ಒಂದು ತಿಂಗಳ ಒಳಗೆ ಬೈಂದೂರು ತಾಲೂಕಿನ ಎಲ್ಲ ಟವರ್ಗಳು ಕಾರ್ಯಾರಂಭ ಮಾಡಲಿವೆ ಎಂದು ಭರವಸೆ ನೀಡಿದ್ದರು. ಆದರೆ ಸಭೆ ನಡೆದು ನಾಲ್ಕು ತಿಂಗಳು ಕಳೆದರೂ ಟವರ್ ಮಾತ್ರ ಆರಂಭವಾಗಿಲ್ಲ. ಶೀಘ್ರ ನೆಟ್ವರ್ಕ್ ಕೊಡಿಸಿ
ಗಂಗನಾಡು ಭಾಗದಲ್ಲಿ ಟವರ್ ನಿರ್ಮಾಣವಾಗಿದ್ದರೂ ಒಂದಿಲ್ಲೊಂದು ಕಾರಣಗಳಿಂದ ನೆಟ್ವರ್ಕ್ ನೀಡುವುದು ವಿಳಂಬವಾಗುತ್ತಿದೆ. ಕಳೆದ ವಾರ ಇಲಾಖೆ ಒಂದು ಟೆಸ್ಟಿಂಗ್ ನಡೆಸಿದೆ. ಕೆಲವು ಮೊಬೈಲ್ಗಳಿಗೆ ನೆಟ್ವರ್ಕ್ ಬಂದಿದೆ ಎನ್ನಲಾಗುತ್ತಿದೆ. ಆದರೆ, ಎಲ್ಲ ಕಡೆಯೂ ಸಿಗುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಹಲವು ತಿಂಗಳುಗಳಿಂದ ವಿಳಂಬವಾಗಿರುವ ಮೊಬೈಲ್ ಟವರ್ ಕನೆಕ್ಷನನ್ನು ಒದಗಿಸಬೇಕು ಎಂದು ಗ್ರಾಮೀಣ ಜನರು ಮನವಿ ಮಾಡಿದ್ದಾರೆ. -ಅರುಣ್ ಕುಮಾರ್ ಶಿರೂರು