Advertisement

High Court: ಹಾಲಿನ ದರ ಏರಿಕೆಯನ್ನು ಪ್ರಶ್ನಿಸಿದ್ದ ಅರ್ಜಿ ವಜಾ

09:29 AM Jul 25, 2024 | Team Udayavani |

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳು ಸೇರಿದಂತೆ ಯಾವುದೇ ವಸ್ತು ಅಥವಾ ಉತ್ಪನ್ನದ ದರ ನಿಗದಿ ವಿಚಾರ ಸರ್ಕಾರದ ನೀತಿ ನಿರ್ಧಾರಕ್ಕೆ ಸಂಬಂಧಪಟ್ಟ ವಿಚಾರ ವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್‌, ನಂದಿನ ಹಾಲಿನ ದರ 2 ರೂ. ಹೆಚ್ಚಳ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Advertisement

ನಂದಿನಿ ಹಾಲಿನ ದರ ಹೆಚ್ಚಳ ಮಾಡಿರು ವುದನ್ನು ಪ್ರಶ್ನಿಸಿ ಬೆಂಗಳೂರಿನ ಬಿಳೇಕಹಳ್ಳಿ ನಿವಾಸಿ ವೃತ್ತಿಯಲ್ಲಿ ಚಾರ್ಟ್‌ರ್ಡ್‌ ಅಕೌಂಟೆಂಟ್‌ ಆಗಿರುವ ಡಾ.ಆರ್‌. ಅಮೃತಲಕ್ಷ್ಮೀ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯ ಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಹಾಲು, ಹಾಲಿನ ಉತ್ಪನ್ನ ಸೇರಿದಂತೆ ಯಾವುದೇ ವಸ್ತುಗಳ ಮತ್ತು ಉತ್ಪನ್ನಗಳ ದರ ನಿಗದಿ, ದರ ಏರಿಕೆ, ದರ ಕಡಿತ ಇದೆಲ್ಲವೂ ಸರ್ಕಾರದ ನೀತಿ ನಿರ್ಧಾರ ಅಧಿಕಾರವಾಗಿ ರುತ್ತದೆ. ಅಲ್ಲದೇ ಅಂತಹ ನಿರ್ಧಾರವು ಸಂದರ್ಭಗಳ ಅಗತ್ಯತೆಗಳು ಮತ್ತು ವಾಣಿಜ್ಯ ವಿವೇಕದಿಂದ ಕೂಡಿರುತ್ತವೆ. ನ್ಯಾಯಾಲಯ ವಾಣಿಜ್ಯ ವಿವೇಕದ ವಿಚಾರ ದಲ್ಲಿ ಸಕ್ಷಮ ಅಲ್ಲ. ಹಾಗಾಗಿ, ದರ ಹೆಚ್ಚಳ ಸರಿ ಇದೆ. ಸರ್ಕಾರದ ನೀತಿ ನಿರ್ಧಾರಕ ವ್ಯಾಪ್ತಿಯ ವಿಚಾರದಲ್ಲಿ ನ್ಯಾಯಿಕ ಪರಿಶೀಲನೆ ಒಪ್ಪಿತ ವಲ್ಲ. ಆದರೆ, ಏನಾದರೂ ಶಾಸನಾತ್ಮಕ ತಾರತಮ್ಯ ಆಗುತ್ತಿದ್ದರೆ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಆದರೆ, ಈ ಪ್ರಕರಣದಲ್ಲಿ ಅಂತಹ ಪ್ರಮೇಯ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿತು.

ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಭಿನ್ನ ಗುಣಮಟ್ಟ ಹೊಂದಿ ರುವ ಪಾಕೆಟ್‌ಗಳು ದೊರಕುತ್ತದೆ. ಇದರಲ್ಲಿ ಹೆಚ್ಚು ಗುಣಮಟ್ಟದ ಹಾಲಿಗೂ ಕಡಿಮೆ ಗುಣಮಟ್ಟದ ಹಾಲಿಗೂ ಸೇರಿದಂತೆ ಎಲ್ಲ ಮಾದರಿಗಳ ಹಾಲಿನ ದರವನ್ನು ಪ್ರತಿ ಪ್ಯಾಕೆಟ್‌ಗೆ 2 ರೂ. ಗೆ ಹೆಚ್ಚಳ ಮಾಡಲಾಗಿದೆ. ಈ ಬೆಲೆ ಏರಿಕೆಯನ್ನು ಕಡಿಮೆ ಸತ್ವವಿರುವ ಹಾಲಿನ ಪ್ಯಾಕೇಟ್‌ ಖರೀದಿಸಿ ಸೇವಿಸುವ ಬಡ ಗ್ರಾಹಕರು ಭರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಈ ಕ್ರಮವು ವಾಣಿಜ್ಯ ಬುದ್ಧಿವಂತಿಕೆಗೆ ಹಾಗೂ ಸಂವಿಧಾನದ ಪರಿಚ್ಛೇದ  14  ವಿರುದ್ಧವಾಗಿದೆ. ಆದ್ದರಿಂದ ದರ ಹೆಚ್ಚಳ ವಾಪಸ್‌ ಪಡೆಯುವಂತೆ ಕರ್ನಾಟಕ ಸಹಕಾರಿ ಹಾಲು ಮಾರಾಟ ಮಂಡಳ (ಕೆಎಂಎಫ್)ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಸಿಇಟಿ ಪ್ರಶ್ನೆ ಪರಿಶೀಲನೆಗೆ ಸಮಿತಿ: ಮೇಲ್ಮನವಿ ಅರ್ಜಿ ಉಚ್ಚ ನ್ಯಾಯಾಲಯದಲ್ಲಿ ತಿರಸ್ಕೃತ:

ಬೆಂಗಳೂರು: ಏಪ್ರಿಲ್‌ನಲ್ಲಿ ನಡೆದ ಕರ್ನಾಟಕ ಸಿಇಟಿ ಪರೀಕ್ಷೆಗಳಲ್ಲಿ ಕೇಳಲಾದ ಪಠ್ಯೇತರ ಪ್ರಶ್ನೆಗಳನ್ನು ಪರಿಶೀಲಿ ಸಲು ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರದ ಸಿಂಧು ತ್ವವನ್ನು ಪರಿಶೀಲಿಸಲು ನಿರಾಕರಿಸಿದ ಏಕಸದಸ್ಯ ನ್ಯಾಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋ ರ್ಟ್‌ ವಜಾಗೊಳಿಸಿದೆ. ಪ್ರಕರಣ ಸಂಬಂಧ ಬೆಂಗಳೂರಿನ ದಾಸ ರಹಳ್ಳಿ ನಿವಾಸಿ ತನ್ಮಯ ಎಂಬುವವರು ಸಲ್ಲಿಸಿದ ಅರ್ಜಿ ಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ ಅರವಿಂದ್‌ ಅವರಿದ್ದ  ವಿಭಾಗೀಯ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಬುಧವಾರ ಆದೇಶಿಸಿದೆ. ಆದೇಶದ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next