Advertisement

Bengaluru: ಆಟೋ ಮೇಲೆ ದೊಡ್ಡ ರೆಂಬೆ ಬಿದ್ದು ಚಾಲಕ ಸಾವು

11:22 AM Sep 05, 2024 | Team Udayavani |

ಬೆಂಗಳೂರು: ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದ ಬಳಿ ಕಳೆದ ಭಾನುವಾರ ಬೃಹತ್‌ ಗಾತ್ರದ ಮರ ಕಾರಿನ ಮೇಲೆ ಉರುಳಿ ಬಿದ್ದು ಉದ್ಯಮಿ ಕುಟುಂಬ ವೊಂದು ಕೂದಲೆಳೆ ಅಂತರದಲ್ಲಿ ಪಾರಾದ ಪ್ರಕರಣ ಮಾಸುವ ಮುನ್ನವೇ ಜಯನಗರದ 4ನೇ ಟಿ ಬ್ಲಾಕ್‌ ಬಳಿ ಬುಧವಾರ ಬೆಳ್ಳಂಬೆಳಗ್ಗೆ ಆಟೋವೊಂದರ ಮೇಲೆ ಬೃಹತ್‌ ಆಕಾರದ ಒಣಮರದ ರೆಂಬೆ ಬಿದ್ದು ಚಾಲಕ ದುರ್ಮರಣ ಹೊಂದಿದ್ದಾರೆ.

Advertisement

ಮತ್ತೂಂದೆಡೆ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ದುರ್ಘ‌ಟನೆ ಸಂಭವಿಸಿದೆ ಎಂದು ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾದರಾಯನಪುರ ಮೊಹಮ್ಮದ್‌ ಖಲೀಂ (60) ಮೃತ ದುರ್ದೈವಿ. ಖಲೀಮ್‌ ಎಂದಿನಂತೆ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಜಯನಗರದ ಬಳಿ ಆಟೋ ಚಲಾಯಿಸಿಕೊಂಡು ಪ್ರಯಾಣಿಕರಿಗಾಗಿ ಹುಡುಕಾಡುತ್ತಿದ್ದರು. ಜಯನಗರ 4ನೇ ಟಿ ಬ್ಲಾಕ್‌ ಸಮೀಪದಲ್ಲಿ ಹೋಗುತ್ತಿದ್ದಾಗ ಏಕಾಏಕಿ ಒಣ ಮರದ ರೆಂಬೆಯೊಂದು ಖಲೀಂ ಆಟೋದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಖಲೀಂ ತಲೆಗೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದರು. ಸಾರ್ವಜನಿಕರು ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೇ ಮಧ್ಯಾಹ್ನ ಖಲೀಂ ಮೃತಪಟ್ಟಿ ದ್ದಾರೆ. ಖಲೀಮ್‌ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ದುರ್ಘ‌ಟನೆ ಸಂಭವಿಸಿದೆ ಎಂದು ಆರೋಪಿಸಿ ಜಯನಗರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಅರಣ್ಯ ಅಧಿಕಾರಿಗಳಿಂದ ಮರ ತೆರವು: ಮರ ಉರುಳಿ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಅರಣ್ಯ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜಯನಗರ 4ನೇ ಟಿ ಬ್ಲಾಕ್‌ನ ಮುಖ್ಯರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಗಾತ್ರದ ಗುಲ್ಮಾರ್‌ ಮರವೊಂದರ ರೆಂಬೆ ಕುಸಿದು ಖಲೀಂ ಆಟೋದ ಮೇಲೆ ಬಿದ್ದಿದೆ. ಆಟೋ ಮುಂಭಾಗ ಜಖಂಗೊಂಡಿದೆ.

Advertisement

ಯಾವುದೇ ಅಪಾಯ ಸ್ಥಿತಿಯಲ್ಲಿರದೇ ಇದ್ದ ಒಳ್ಳೆಯ ಮರವಾಗಿತ್ತು. ಗಾಳಿಗೆ ಆಟೋದ ಮೇಲೆ ಬಿದ್ದಿರುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಉಪ ವಲಯ ಅರಣ್ಯಾಧಿಕಾರಿ ಹರೀಶ್‌ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ನಗರದ ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದ ಬಳಿ ಭಾನುವಾರ ಸಂಜೆ ಕಾರಿನ ಮೇಲೆ ಬೃಹತ್‌ ಮರವೊಂದು ಏಕಾಏಕಿ ಉರುಳಿ ಬಿದ್ದು ಉದ್ಯಮಿ ನಕುಲ್‌ ಜೆ (33) ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡು ಕೂದಲೆಳೆ ಅಂತರದಲ್ಲಿ ಅದೃಷ್ಟವ ಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಆಟೋಮೇಲೆ ಮರುರುಳಿ ಬಿದ್ದು ಆಟೋ ಚಾಲಕ ಮೃತಪಟ್ಟಿರುವುದು ಬೆಂಗಳೂರಿಗರನ್ನು ಆತಂಕಕ್ಕೀಡು ಮಾಡಿದೆ.

ಒಣ ಮರ ತೆರವಿಗೆ ನಿರ್ಲಕ್ಷಿಸಿದ ಬಿಬಿಎಂಪಿ ವಿರುದ್ಧ ಆಕ್ರೋಶ:

ಸಿಲಿಕಾನ್‌ ಸಿಟಿಯಲ್ಲಿ ಬೃಹತ್‌ ಮರಗಳು ಧರೆಗುರುಳುವದರಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿವೆ. ಈ ಮರಗಳು ನೆಲಕ್ಕುರುಳಿ ಜೀವಗಳು ಬಲಿಯಾಗುತ್ತಿದ್ದರೂ ಪಾಲಿಕೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ನಿರ್ಲಕ್ಷಿಸುತ್ತಿದೆ. ಬಿಬಿಎಂಪಿ ಇಂತಹ ಅಪಾಯಕಾರಿ ಹಾಗೂ ಒಣಗಿರುವ ಬೃಹತ್‌ ಮರಗಳು ಕೂಡಲೇ ತೆರವುಗೊಳಿಸುವ ಕೆಲಸಮಾಡಬೇಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next