Advertisement

Kannada Movie: ನೆಗೆಟಿವ್‌ ಪಾತ್ರಗಳ ಸುತ್ತ ಚಾಕ್ನ

04:22 PM Sep 03, 2024 | Team Udayavani |

ಸಿನಿಮಾದ ಟೈಟಲ್‌ಗ‌ಳು ದಿನದಿಂದ ದಿನಕ್ಕೆ ಹೊಸ ಹೊಸ ರೂಪದಲ್ಲಿ ಬರುತ್ತಿವೆ. ಟೈಟಲ್‌ನಲ್ಲೇ ಮಾಸ್‌-ಕ್ಲಾಸ್‌ ಎಂಬ ಕೆಟಗರಿ ಆರಂಭವಾದಂತಿದೆ.

Advertisement

ಈಗ “ಚಾಕ್ನ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ. ಬೂದಿಯೊಳಗಿನ ಕೆಂಡಗಳ ಕಥೆ ಎಂಬ ಟ್ಯಾಗ್‌ಲೈನ್‌ ಈ ಚಿತ್ರಕ್ಕಿದೆ.

ವಿಮಲಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಕೆ.ಪಳನಿ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಬಿಡುಗಡೆಯಾಯಿತು.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪಳನಿ, “ಆರು ತಿಂಗಳ ಹಿಂದೆ ಪಾಂಡಿಚೇರಿಯಲ್ಲಿ ನಡೆದಂತ ಘೋರ ಘಟನೆ ಹಾಗೂ ನಾನು ಕಣ್ಣಾರೆ ಕಂಡ ಕಟುಸತ್ಯಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಚಿತ್ರರೂಪಕ್ಕೆ ತರುತ್ತಿದ್ದೇನೆ. ನಾಲ್ಕು ನೆಗೆಟಿವ್‌ ಪಾತ್ರಗಳು ಒಂದೆಡೆ ಸೇರಿದರೆ ಏನಾಗುತ್ತದೆ, ಅಲ್ಲಿ ನಡೆಯುವ ಸನ್ನಿವೇಶಗಳೇ ಚಿತ್ರದ ವಸ್ತು ವಿಷಯ ಎಂದರು.

ತಾರಾಗಣದಲ್ಲಿ ಕಾಕ್ರೋಚ್‌ ಸುಧಿ, ಗಿರಿ, ಮಧುಶ್ರೀ ಕಾಲ್ಮಟ್‌, ಶ್ರೀಕುಮಾರ್‌ ಇತರರು ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.