Advertisement
ಹೌದು…ಕತ್ತೆ ಹಾಲಿಗೆ ಸಂಪೂರ್ಣ ಬೇಡಿಕೆ ಬಂದಿದ್ದು, ಎಲ್ಲೆಡೆ ಈಗ ಅದರದ್ದೇ ಹವಾ ಆಗಿದೆ. ಬೊಂಬೆನಗರಿಯ ವಿವಿಧ ಬಡಾವಣೆಗಳಲ್ಲಿ, ಹಾದಿ ಬೀದಿಯಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ ಬಂದಿದೆ. ಒಂದು ಲೀಟರ್ ಡೇರಿ ಹಾಲಿಗೆ ರೂ.45 ರೂಪಾಯಿ. ಆದರೆ ಕತ್ತೆ ಹಾಲಿಗೆ ರೂ.50ಗೆ ಕೇವಲ 5 ಎಂಎಲ್ ಅಥವಾ ಒಳ್ಳೆಗೆ ನೂರು ರೂಪಾಯಿ ದರ ಇದೆ.
Related Articles
Advertisement
ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ಹಾಲು: ಒಂದು ಕತ್ತೆ ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ಹಾಲು ನೀಡುತ್ತದೆ. ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 1200-1500 ರು. ಸಂಪಾದಿಸುತ್ತೇವೆ. ನಾನು ನಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವು. ವರ್ಷದಲ್ಲಿ ಮೂರು ತಿಂಗಳು ಬೇರೆ ನಗರಕ್ಕೆ ಹೋಗಿ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆ ಮಾಲೀಕ ಸಂದೇಶ್. ಅತ್ಯುತ್ತಮ ಪೌಷ್ಟಿಕಾಹಾರ ಎಂಬ ಹೆಗ್ಗಳಿಕೆ: ಪ್ರಾಚೀನ ಗ್ರೀಸ್‌ನ ರಾಣಿ ಕ್ಲಿಯೋಪಾತ್ರಾ ತಮ್ಮ ಸೌಂದರ್ಯವನ್ನು ವೃದ್ಧಿಸಲು ಕತ್ತೆಯ ಹಾಲನ್ನು ಬಳಸುತ್ತಿದ್ದರಂತೆ. ಅದು 2,000 ವರ್ಷಗಳ ಹಿಂದಿನ ಕಥೆ. ಆದರೆ, ಈಗಲೂ ಕತ್ತೆಯ ಹಾಲಿಗೆ ಬೇಡಿಕೆ ಇದೆ. ಕೇವಲ ಸೌಂದರ್ಯ ವರ್ಧಕ ಸಾಧನವಾಗಿ ಅಲ್ಲದೆ, ಅತ್ಯುತ್ತಮ ಪೌಷ್ಟಿಕಾಹಾರ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕತ್ತೆಯ ಹಾಲು ತಾಯಂದಿರ ಎದೆಹಾಲಿನಷ್ಟೇ ಶ್ರೇಷ್ಠ ಮತ್ತು ಪೌಷ್ಟಿಕಾಂಶ ಭರಿತ ಎನ್ನುತ್ತಾರೆ ಆಹಾರ ತಜ್ಞರು.
ವೃದ್ಧಾಪ್ಯ ಬದಲಾವಣೆ ಮುಂದೂಡುವ ತ್ವಚೆಗಾಗಿ: ಕತ್ತೆಯ ಹಾಲಿನಲ್ಲಿ ವೃದ್ಧಾಪ್ಯದ ಬದಲಾವಣೆಗಳನ್ನು ಮುಂದೂಡುವ, ತ್ವಚೆಯ ಆರೋಗ್ಯವನ್ನು ರಕ್ಷಿಸುವ ಅಂಶಗಳು ಇದ್ದು, ಸೌಂದರ್ಯವರ್ಧಕ ಕ್ರೀಮ್, ಸೋಪ್, ಶ್ಯಾಂಪೂಗಳಲ್ಲಿಯೂ ಇದೀಗ ಬಳಕೆಯಾಗುತ್ತಿದೆ. ಹೀಗಾಗಿ ಕೇವಲ ಕುಡಿಯಲು ಮಾತ್ರವಲ್ಲದೆ ಇತರ ಆಯಾಮಗಳೂ ಇದರಲ್ಲಿವೆ.
”ಜನ ಈಗ ಪರಂಪರಾನುಗತ ವಿಧಾನಗಳ ಮೂಲಕ ಸೌಂದರ್ಯವರ್ಧನೆ ಬಯಸುತ್ತಿದ್ದಾರೆ. ಇದರ ಪರಿಣಾಮ ಕತ್ತೆ ಹಾಲಿನಿಂದ ತಯಾರಿಸುವ ಉತ್ಪನ್ನಗಳಿಗೆ ಬೇಡಿಕೆ ಇದೆ. ಮಕ್ಕಳಿಗೆ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ, ಚರ್ಮದ ಅಲರ್ಜಿಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗದ ಪ್ರಕಾರ ಕತ್ತೆ ಹಾಲು ಹಲವು ಪೌಷ್ಟಿ ಕಾಂಶಗಳನ್ನು ಒಳಗೊಂಡಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೇವನೆಗೆ ಅರ್ಹವಾದ ಹಾಲುಗಳಲ್ಲಿ ಕತ್ತೆ ಹಾಲಿಗೆ ಸ್ಥಾನ ಇದೆ. ಭಾರತದಲ್ಲಿ ಕತ್ತೆ ಹಾಲು ಸೇವಿಸುವವರು ಕಡಿಮೆ. ಆದರೆ ಇತ್ತೀಚೆಗೆ ಕಾಸ್ಮೆಟಿಕ್ಸ್ ಉದ್ದಿಮೆಯಲ್ಲಿ ಬಳಸಲಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಕತ್ತೆ ಹಾಲು ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತದೆಯಂತೆ. ಇದರಿಂದ ನಗರದ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಮೂಡಿಸಿದೆ. ಕತ್ತೆ ಹಾಲು ಅರ್ಧ ಲೀಟರ್‌ನಷ್ಟು ಸಿಗು ವುದಿಲ್ಲ. ಇದು ಎಂಎಲ್ ಅಥವಾ ಒಳ್ಳೆ ಯಲ್ಲಿ ಮಾತ್ರ ಸಿಗುತ್ತದೆ. ಎದುರು ಹಾಲು ಕರೆದು ಕೊಡಲಾಗುತ್ತದೆ. ರೂ.80-100ಗೆ 10 ಎಂಎಲ್ ಹಾಲು ಸಿಗುತ್ತದೆ. –ಸಂದೇಶ್, ಕತ್ತೆ ಮಾಲಿಕ
– ಎಂ.ಶಿವಮಾದು