Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡಿರುವ ಹುಣಸೂರು ತಾಲೂಕಿನ ನಾಗಾಪುರ 2 ಹಾಗೂ 6 ಬ್ಲಾಕ್‌ನ 18ಕ್ಕೂ ಹೆಚ್ಚು ಮಕ್ಕಳಲ್ಲಿ ವಿಚಿತ್ರ ಕಜ್ಜಿರೋಗ ಕಾಣಿಸಿಕೊಂಡಿದೆ.
Related Articles
Advertisement
ಕಾಡುತ್ತಿದೆ ಖಿನ್ನತೆ: ಕಜ್ಜಿ ಇರುವ ಮಕ್ಕಳ ಗೋಳು ಹೇಳ ತೀರದಾಗಿದೆ. ಕಡಿತದಿಂದ ನವೆ ಉಂಟಾಗಿ ಮೈ-ಕೈ ಕೆರೆದುಕೊಂಡು ಹಲವು ಮಕ್ಕಳು ಮತ್ತಷ್ಟು ಗಾಯ ಮಾಡಿಕೊಂಡಿದ್ದಾರೆ. ಅಂಗನವಾಡಿ ಮಗು ರೋಹನ್ ತನ್ನ ಕಾಲಿನ ಮೀನುತತ್ತಿಯಲ್ಲಿ ಕೆರೆದು ಕೊಂಡು ದೊಡ್ಡ ಗಾಯವಾಗಿ, ಕೀವು ಸೀರುವಂತೆ ಮಾಡಿಕೊಂಡಿದ್ದಾನೆ.
ಮಂಜು ಮತ್ತು ವಿಶ್ವ ಮತ್ತಿತರ ರಿಗೆ ಮೈಯೆಲ್ಲಾ ಗಾಯವಾಗಿದ್ದರೆ, ಬಾಲಕಿಯರಾದ ಐಶ್ವರ್ಯ, ರಾಣಿ ನೋವಿನಿಂದ ಯಾವಾಗಲೂ ಕಣ್ಣೀರಿಡುತ್ತಾ ಬಿಸಿಲಿನಲ್ಲಿ ಕಾಯುತ್ತಾ ಖಿನ್ನತೆ ಗೊಳಗಾಗಿದ್ದಾರೆ. ಇವರ ಪೋಷಕರ ಪಾಡು ಹೇಳ ತೀರದಾಗಿದೆ. ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿ ಕೊಳ್ಳಬೇಕೆಂಬುದು ತೋಚುತ್ತಿಲ್ಲ.
ಊಟ ಸೇವಿಸಲೂ ಆಗೋಲ್ಲ: ಕೆಲ ಮಕ್ಕಳ ಇಡೀ ಹಸ್ತ ಗಾಯವಾಗಿದ್ದರಿಂದ ಊಟ-ತಿಂಡಿ ಸೇವಿಸಲೂ ಆಗದಂತ ಪರಿಸ್ಥಿತಿ ಇದೆ. ಗಾಯ ಮಾಡಿಕೊಂಡಿರುವ ಕೈಗಳಲ್ಲೇ ಆಹಾರ ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೀಳರಿಮೆಯಿಂದಾಗಿ ಕೆಲ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಗಿರಿಜನ ಕಲ್ಯಾಣ ಇಲಾಖಿೆ ನಿರ್ಲಕ್ಷ್ಯ: ಶಾಲೆ ಹಾಗೂ ಅಂಗನವಾಡಿಗೆ ಬರುವ ಈ ಮಕ್ಕಳ ಗಂಭೀರ ಕಾಯಿಲೆ ಬಗ್ಗೆ ಶಿಕ್ಷಕರು ಮೌನವಹಿಸಿದ್ದರೆ, ಗಿರಿಜನ ಕಲ್ಯಾಣಕ್ಕಾಗಿಯೇ ಇರುವ ಗಿರಿಜನ ಕಲ್ಯಾಣ ಇಲಾಖಿೆಗೂ ಈ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಇವರೆಲ್ಲರ ನಿರ್ಲಕ್ಷ್ಯದಿಂದಾಗಿ ಆದಿವಾಸಿ ಮಕ್ಕಳು ಅನಾರೋಗ್ಯದಿಂದ ಬಳಲುವಂತಾಗಿದೆ.
* ಸಂಪತ್ ಕುಮಾರ್