Advertisement

ಒಂದುಕೋಟಿ ಅನುದಾನ ರದ್ಧಾಗಲು ಪಂಚಾಯತ್‌  ಆಡಳಿತ, ಪಿಡಿಒ ಕಾರಣ

08:00 AM May 11, 2018 | |

ಕಾಪು: ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟು ಗ್ರಾಮಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾಗಿರುವ 1 ಕೋಟಿ ರೂ. ಅನುದಾನ ರದ್ಧಾಗಲು ಗ್ರಾಮ ಪಂಚಾಯತ್‌ ಆಡಳಿತ ಮತ್ತು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳೇ ಕಾರಣ ಎಂದು ಗ್ರಾಮ ಪಂಚಾಯತ್‌ ಸದಸ್ಯ ದಯಾನಂದ ಬಂಗೇರ ಆರೋಪಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು ಕೋಟೆ ಗ್ರಾಮ ಪಂಚಾಯತ್‌ನಲ್ಲಿ ಈ ಬಗ್ಗೆ ಕ್ರಿಯಾ ಯೋಜನೆ ಯನ್ನು ತಯಾರಿಸುವಾಗ ಸದಸ್ಯರ ಗಮನಕ್ಕೆ ತರದೇ, ನಮಗೆ ನೋಟೀಸ್‌ ನೀಡದೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಕ್ರಿಯಾ ಯೋಜನೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ ಮತ್ತು ಸರ್ಕಾರದ ಸುತ್ತೂಲೆಯ ಬಗ್ಗೆ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿ ನೀಡಿದಿಲ್ಲ ಎಂದು ಅವರು ಹೇಳಿದ್ದಾರೆ. 

ಗೈರು ಹಾಜರಾಗಿದ್ದರು 
ಶಾಸಕರ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಅಧಿಕಾರಿಗಳೇ ಕ್ರಿಯಾ ಯೋಜನೆಯನ್ನು ಸರಿಪಡಿಸಿ, ಸರಕಾರಕ್ಕೆ ಕಳುಹಿಸಿ, ಯೋಜ ನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಸಭೆ ಕರೆದಾಗ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕರು ಗೈರು ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ನಾವು ಕೂಡ ಬೆಂಬಲಿಸುತ್ತೇವೆ 
ಕೋಟೆ ಗ್ರಾಮದ ಯೋಜನೆಯನ್ನು ಬೊಮ್ಮರಬೆಟ್ಟು ಗ್ರಾಮಕ್ಕೆ ಸೇರಿಸಿರುವುದಕ್ಕೆ ನಮ್ಮ ವಿರೋಧವಿದೆ. ಅಧ್ಯಕ್ಷರು ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದು, ವಾಪಸು ತರುವ ನಿಟ್ಟಿನಲ್ಲಿ ಸರ್ವ ಸದಸ್ಯರೊಂದಿಗೆ ನಾವು ಕೂಡಾ ಬೆಂಬಲಿಸುತ್ತೇವೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯತ್‌ ಸದಸ್ಯರಾದ ಸುಶೀಲ್‌ ಬೋಳಾರ್‌, ಪ್ರಮೀಳಾ ಪ್ರಶಾಂತ್‌ ಜತ್ತನ್ನ, ಪ್ರಶಾಂತ್‌ ಜತ್ತನ್ನ, ಕಿಶೋರ್‌ ಕುಮಾರ್‌ ಅಂಬಾಡಿ, ಅಪ್ಪಿ ನಾ„ಕ್‌, ಜಗದೀಶ್‌ ಅಂಚನ್‌ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next