Advertisement

ಶ್ರೀಕೃಷ್ಣ ಮಠ ರಾಜಾಂಗಣದ ನೂತನ ವೇದಿಕೆ ಉದ್ಘಾಟನೆ

10:57 AM Jan 21, 2018 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ತಗಡನ್ನು ಹೊದೆಸುವ (ಸುವರ್ಣ ಗೋಪುರ) ಯೋಜನೆಗೆ ಪೂರಕವಾಗಿ ರಾಜಾಂಗಣದಲ್ಲಿ ನಿರ್ಮಿಸಿದ ಮಾದರಿಯನ್ನು ಶನಿವಾರ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

Advertisement

ಪಲಿಮಾರು ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದಲ್ಲಿ ಗರ್ಭಗುಡಿಯ ಸುತ್ತ ಹಣತೆ ಗಳನ್ನು ಇರಿಸಲು ಮರದ ದಳಿಗಳನ್ನು ನಿರ್ಮಿಸಿದ್ದರೆ, ಈ ಪರ್ಯಾಯದಲ್ಲಿ ಸುವರ್ಣ ಗೋಪುರ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಇವೆರಡರ ವಿನ್ಯಾಸವನ್ನು ಶೇಷಗಿರಿ ಕೆ.ಎಂ. ಅವರು ಮಾಡಿದ್ದಾರೆ. ಇದನ್ನು ಆಧರಿಸಿ ಸುವರ್ಣ ಗೋಪುರದ ಮಾದರಿಯನ್ನು ಕೇವಲ ಒಂದೂವರೆ ತಿಂಗಳಲ್ಲಿ ದಿನಕ್ಕೆ 18 ಗಂಟೆಗಳಂತೆ ಕೆಲಸ ನಿರ್ವಹಿಸಿ ಅರುಣ್‌ಕುಮಾರ್‌ ಮತ್ತು ಮೂಕಾಂಬಿಕಾ ಪಾಲಿಫೈಬರ್ನ ಸಿದ್ದರಾಜು ಅವರು ನಿರ್ಮಿಸಿದ್ದಾರೆ. ಅಂಬಲಪಾಡಿ ಪ್ರಕಾಶ ಆಚಾರ್ಯ, ಬಾಳ್ಕಟ್ಟ ಗಜೇಂದ್ರ ಆಚಾರ್ಯ, ಅರುಣಕುಮಾರ್‌ ಗುಂಡಿಬೈಲು ಮೊದಲಾದವರು ಸಹಕರಿಸಿದ್ದಾರೆ. ಉದ್ಯಮಿ ಭುವನೇಂದ್ರ ಕಿದಿಯೂರು ಅವರ ಸ್ಥಳದಲ್ಲಿ ಇದನ್ನು ನಿರ್ಮಿಸಿ ರಾಜಾಂಗಣಕ್ಕೆ ತರಲಾಗಿತ್ತು. 

ಗರ್ಭಗುಡಿಯಲ್ಲಿ ಅರ್ಚನೆ ನಡೆದರೆ ಇಲ್ಲಿ ಜ್ಞಾನಸತ್ರ ನಡೆಯಲಿದೆ. ಅಲ್ಲಿಂದ ಇಲ್ಲಿಗೆ ಬಂದ ಮನಸ್ಸಿನಲ್ಲಿ ದೇವರು ಪ್ರತ್ಯಕ್ಷವಾಗಲು ಪ್ರವಚನ ಶ್ರವಣ ನಡೆಯಬೇಕು. ಇದಕ್ಕಾಗಿ ರಾಜಾಂಗಣ ಮೀಸಲಿರುತ್ತದೆ. ಇದು ಜ್ಞಾನಿಗಳು ನೀಡಿದ ಎಂದೆಂದೂ ನಂದದ ಜ್ಞಾನದ ಮಂಗಳಾರತಿ ಎಂದು ಪಲಿಮಾರು ಶ್ರೀಗಳು ನುಡಿದರು. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತ ರಿದ್ದರು. ನೂತನ ವೇದಿಕೆ ನಿರ್ಮಿಸಲು ಸಹಕರಿಸಿ ದವರನ್ನು ಸ್ವಾಮೀಜಿ ಸಮ್ಮಾನಿಸಿದರು. ಸ್ವರ್ಣ ಗೋಪುರ ರಚನೆಯ ಬಗ್ಗೆ  ಮಸ್ಕತ್‌ನಲ್ಲಿ ಪ್ರಚುರಪಡಿಸಲು ಯುವರಾಜ್‌ ಮಸ್ಕತ್‌ ಅವರು ಕರಪತ್ರಗಳನ್ನು ಸ್ವೀಕರಿಸಿದರು. ಮೋಹನ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next