Advertisement

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

02:43 AM Nov 10, 2024 | Team Udayavani |

ಗಜೇಂದ್ರಗಡ: ರಾಜ್ಯದಲ್ಲಿ ರೈತರು ಹಾಗೂ ದೇವಸ್ಥಾನದ ಜಮೀನುಗಳ ಮೇಲೆ ವಕ್ರದೃಷ್ಟಿ ಬೀರಿರುವ ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಾತೀತವಾಗಿ ಶ್ರಮಿಸಬೇಕಿದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

Advertisement

ಗಜೇಂದ್ರಗಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಸ್ಯೆ ಸರಿ ಮಾಡಬೇಕಾದರೆ ಮೊದಲು ಏಕರೂಪ ನಾಗರಿಕ ಸಂಹಿತೆ ಬರಬೇಕು. ಎಲ್ಲರಿಗೂ ಒಂದೇ ರೀತಿಯ ನ್ಯಾಯ ನೀಡಬೇಕು. ವಕ್ಫ್‌ಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯ ಮಾಡಬಾರದು ಎಂದರು.

ಯಾರದ್ದೋ ಆಸ್ತಿ ಯಾರೋ ಕಬಳಿಸುವಂಥದ್ದು ದುರಂತ. ವಕ್ಫ್ ಬೋರ್ಡ್‌ ಅಸಂಬದ್ಧತೆ ನಿರ್ಮಾಣ ಮಾಡಿ ಯಾರದ್ದೋ ಜಾಗ ವಶಪಡಿಸಿಕೊಳ್ಳುವಂಥದ್ದು ಸರಿಯಾದ ಕ್ರಮವಲ್ಲ. ಹೀಗಾಗಿ ಎಲ್ಲರೂ ಒಗ್ಗೂಡಿ ಪಕ್ಷಭೇದ-ಜಾತಿಭೇದ ಮರೆತು ವಕ್ಫ್ ಬೋರ್ಡ್‌ ರದ್ದತಿಗೆ ಹೋರಾಡಬೇಕಿದೆ. ಈಚೆಗೆ ಹೈದರಾಬಾದ್‌ನಲ್ಲಿ ಅಲ್ಲಿನ ಪ್ರಾಣದೇವರನ್ನು ವಕ್ಫ್ ಗೆ ಸೇರ್ಪಡೆ ಮಾಡಿದ್ದಾರೆ. ಇದು ದೊಡ್ಡ ಅನ್ಯಾಯ ಎಂದು ಹೇಳಿದರು.

ರಾಜಕೀಯವಾಗಿ ಇಂತಹ ನಿಲುವುಗಳನ್ನು ತಾಳುವ ಪಕ್ಷಗಳಿಗೆ ನಮ್ಮ ವಿರೋಧವಿದೆ. ವಕ್ಫ್ ಬೋರ್ಡ್‌ ತೆಗೆದುಹಾಕಲು ನಾವೆಲ್ಲರೂ ಸೇರಬೇಕು. ದೇವರಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಬೇಕಿದೆ. ವಕ್ಫ್ ಬೋರ್ಡ್‌ ಕ್ರಮವನ್ನು ತೀವ್ರವಾಗಿ ವಿರೋಧ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next