Advertisement
“ಪ್ರಸಕ್ತ ಬೆಳವಣಿಗೆಗಳಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷದಲ್ಲೇ ಎರಡು ಗುಂಪುಗಳಾಗಿವೆ. ಪರಸ್ಪರರು ಮುಖ ನೋಡದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಉಂಟಾಗಲಿದೆ’ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
Related Articles
Advertisement
ವಿಧಾನಪರಿಷತ್ತಿನ ಹಾಲಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ರಘುನಾಥರಾವ್ ಮಲ್ಕಾಪುರೆ, ಸೋಮಣ್ಣ ಬೇವಿನಮರದ, ಮಾಜಿ ಸದಸ್ಯರಾದ ಅಶ್ವಥ್‌ನಾರಾಯಣ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಸಿದ್ದರಾಜು, ನಾರಾಯಣಸಾ ಭಾಂಡಗೆ, ವಿಧಾನಸಭೆಯ ಹಾಲಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸದಸ್ಯರಾದ ನಿರ್ಮಲ್‌ಕುಮಾರ್ ಸುರಾನಾ, ಎಸ್.ಎ.ರವೀಂದ್ರನಾಥ್, ಸೊಗಡು ಶಿವಣ್ಣ, ಬಸವರಾಜ ನಾಯ್ಕ, ಎಂ.ಎಸ್.ಸೋಮಲಿಂಗಪ್ಪ, ನೇಮಿರಾಜ ನಾಯ್ಕ, ಜಗದೀಶ್ ಮೆಟಗುಡ್, ಶ್ರೀಕಾಂತ್ ಕುಲಕರ್ಣಿ, ಬಸವರಾಜ ಮಂಡಿಮಠ ಮೊದಲಾದವರ ಹೆಸರುಗಳು ಪತ್ರದಲ್ಲಿವೆ.
ಪತ್ರ ಬರೆದವರ ಪಟ್ಟಿಯಲ್ಲಿ ಹಲವು ಮಾಜಿ ಸಚಿವರು, ಹಾಲಿ ಮತ್ತು ಮಾಜಿ ರಾಜ್ಯ ಪದಾಧಿಕಾರಿಗಳಿದ್ದಾರೆ. ಅಲ್ಲದೆ, ಅನೇಕರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಪರೋಕ್ಷವಾಗಿ ಸವಾಲೊಡ್ಡಿರುವ ಈಶ್ವರಪ್ಪ ಅವರ ಆಪ್ತರು ಎನ್ನುವುದೂ ಮುಖ್ಯವಾದ ಅಂಶ.
ಪತ್ರದಲ್ಲಿ 24 ಮುಖಂಡರ ಹೆಸರುಗಳಿದ್ದು, 16 ಮಂದಿ ಸಹಿ ಮಾಡಿದ್ದಾರೆ. ಉಳಿದವರು ಊರಿನಲ್ಲಿ ಇರಲಿಲ್ಲ. ಅವರ ಒಪ್ಪಿಗೆ ಬಳಿಕವೇ ಪತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪತ್ರ ಶುಕ್ರವಾರ ಬೆಳಗ್ಗೆ ಅನಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆಗೊಂಡ ಬೆನ್ನಲ್ಲೇ ಇಂಥದೊಂದು ಪತ್ರ ರಾಜ್ಯಾಧ್ಯಕ್ಷರಿಗೆ ತಲುಪಿಯೇ ಇಲ್ಲ ಹಾಗೂ ಬಿಡುಗಡೆ ಮಾಡಿರುವ ಪತ್ರದಲ್ಲಿ ಯಾವುದೇ ಮುಖಂಡರ ಸಹಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್ ಪತ್ರಿಕಾ ಹೇಳಿಕೆ ನೀಡಿದರು. ಅಲ್ಲದೆ, ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ಲೇವಡಿ ಮಾಡಿದರು.
ಮಧುಸೂದನ್ ಹೇಳಿಕೆ ನೀಡಿದ ಕೆಲಹೊತ್ತಿನಲ್ಲೇ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಅವರು ತುರ್ತು ಪತ್ರಿಕಾಗೋಷ್ಠಿ ಕರೆದು, ಇದು ಕಿಡಿಗೇಡಿಗಳ ಕೃತ್ಯವಲ್ಲ. ಪತ್ರ ಬರೆದದ್ದು ಸತ್ಯ. ಬಿಜೆಪಿ ಕಾರ್ಯಾಲಯಕ್ಕೆ ಪತ್ರ ನೀಡಲಾಗಿದೆ ಎಂದು ಕಡ್ಡಿ ಮುರಿದಂತೆ ತಿಳಿಸಿದರು.
ಪತ್ರದಲ್ಲೇನಿದೆ?1. ಪದಾಧಿಕಾರಿಗಳ ನೇಮಕದಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿದ್ದೀರಿ
2. ಪಕ್ಷದ ಕೋರ್ ಕಮಿಟಿ ಯನ್ನು ವಿಶ್ವಾಸಕ್ಕೇ ತೆಗೆದುಕೊಂಡಿಲ್ಲ
3. 10-20 ವರ್ಷಗಳ ಕಾಲದುಡಿದವರನ್ನು ಮೂಲೆ ಗುಂಪು ಮಾಡಿದ್ದೀರಿ
4. ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷ ಎರಡುಗುಂಪಾಗಿದೆ
5. ಈಶ್ವರಪ್ಪ ಅವರನ್ನು ಬರ ಅಧ್ಯಯನ ತಂಡದಿಂದ ಕೈಬಿಟ್ಟಿದ್ದು ಸರಿ ಅಲ್ಲ. ಅಮಿತ್ ಶಾಗೇ ದೂರಲಿ
ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಎಂಎಲ್‌ಸಿ ಭಾನುಪ್ರಕಾಶ್ ಸೇರಿ ಕೆಲವರು ಬರೆದಿದ್ದಾರೆನ್ನಲಾದ ಪತ್ರ ನನಗೆ ಬಂದಿಲ್ಲ. ಪತ್ರ ಬರೆದಿದ್ದರೂ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಸರಿಯಲ್ಲ.ಏನಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪದಾಧಿಕಾರಿಗಳ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ. ಬೇಕಾದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳಿ ತಮ್ಮ ದೂರನ್ನು ಹೇಳಿಕೊಳ್ಳಲಿ. ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಹಾಗೂ ಅವ್ವಣ್ಣ ಮ್ಯಾಕೇರಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಏಕಪಕ್ಷೀಯ ನಿರ್ಧಾರವಲ್ಲ. ಶಿಸ್ತು ಸಮಿತಿಯ ತೀರ್ಮಾನ.
– ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ