Advertisement
ಅವನು ಹೇಳುವಷ್ಟು ದರೋಡೆ ಮಾಡುವುದು ಸುಲಭವಾ? ಖಂಡಿತಾ ಅಲ್ಲ. ಮನೆಯಲ್ಲಿರುವವನಿಗೆ ಕಣ್ಣಿಲ್ಲದಿದ್ದರೂ ಅವನು ಬಹಳ ಚಾಣಾಕ್ಷ. ಒಂದು ಸಣ್ಣ ಶಬ್ಧ ಬಂದರೂ, ಏನೋ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಲ್ಲ ಪ್ರಳಯಾಂತಕ. 10 ಜನ ನುಗ್ಗಿದರೂ ಅವರೆಲ್ಲರನ್ನೂ ಬಗ್ಗಬಡಿಯಬಲ್ಲಷ್ಟು ಗಟ್ಟಿಗ. ಇದೆಲ್ಲದರ ಜೊತೆಗೆ ಅವನ ಬಳಿ ಪಿಸ್ತೂಲುಗಳಿವೆ. ಸಾಲದ್ದಕ್ಕೆ ಮನೆಯೊಳಗೊಂದು ನಾಯಿಯೂ ಇದೆ.
Related Articles
Advertisement
ಅದಕ್ಕೂ ಮುನ್ನ ಮೂರು ಹಾಡು, ಫೈಟು, ಬಿಲ್ಡಪ್ಪು … ಅಂತೆಲ್ಲಾ ಒಂದು ಗಂಟೆ ಕಳೆದು ಹೋಗು¤ದೆ. ಇಂಟರ್‌ವೆಲ್‌ಗೆ ಸ್ವಲ್ಪ ಹೊತ್ತಿದೆ ಎನ್ನುವಾಗ ಚಿತ್ರಕ್ಕೊಂದು ವೇಗ ಸಿಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ನೋಡಿಸಿಕೊಂಡು ಹೋಗುತ್ತದಾದರೂ, ಚಿತ್ರ ಅರ್ಥವಾಗುವುದಕ್ಕೆ “ನಿಶ್ಯಬ್ಧ 3′ ಬರುವವರೆಗೂ ಕಾಯಬೇಕು. ಏಕೆಂದರೆ, ಚಿತ್ರವು ಅನೇಕ ಪ್ರಶ್ನೆಗಳೊಂದಿಗೆ ಮುಗಿಯುತ್ತದೆ.
ಪ್ರಮುಖವಾಗಿ ಅಂಧನ ಮನೆಯಲ್ಲಿದ್ದ ಹುಡುಗಿ ಯಾರು, ಅವಳನ್ನಾಕೆ ಕಟ್ಟಿ ಹಾಕಲಾಗಿರುತ್ತದೆ, ಪತ್ರಿಕೆಯೊಂದರಲ್ಲಿ ಬಂದ ವರದಿಗೂ ಆ ಹುಡುಗಿಗೂ ಏನು ಸಂಬಂಧ, ಇಷ್ಟಕ್ಕೂ ಅಂಧ ಯಾಕೆ ಅಷ್ಟು ನಿಗೂಢವಾಗಿರುತ್ತಾನೆ ಮುಂತಾದ ಪ್ರಶ್ನೆಗಳಿಗೆ ಚಿತ್ರ ಮುಗಿದರೂ ಉತ್ತರ ಸಿಗುವುದಿಲ್ಲ. ಚಿತ್ರದ ಕೊನೆಯ ಶಾಟ್‌ನಲ್ಲಿ, “ನಿಶ್ಯಬ್ಧ 3′ ಎಂದು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಆ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕಿದ್ದರೆ ಆ ಚಿತ್ರ ಬರುವವರೆಗೂ ಕಾಯಬೇಕು.
ಇದೆಲ್ಲದರ ಮಧ್ಯೆ ಚಿತ್ರದಲ್ಲಿ ಗಮನಸಳೆಯುವ ಒಂದಿಷ್ಟು ವಿಷಯಗಳಿವೆ. ಪ್ರಮುಖವಾಗಿ ಕತ್ತಲೆ ಮನೆಯೊಳಗಿನ ದೃಶ್ಯಗಳು, ಮನೆಯೊಳಗೆ ಒಂಚೂರು ಶಬ್ಧವಾಗದಂತೆ ಪಾತ್ರಧಾರಿಗಳು ಒದ್ದಾಡುವುದು, ಆ ಸಂದರ್ಭದಲ್ಲಿ ಚಿತ್ರದಲ್ಲಿರುವ ನೀರವ ಮೌನ … ಮುಂತಾದ ಹಲವು ವಿಷಯಗಳು ಗಮನಸೆಳೆಯುತ್ತವೆ. ಸತೀಶ್ ಆರ್ಯನ್ ಅವರ ಹಿನ್ನೆಲೆ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಮತ್ತು ಅವಿನಾಶ್ ಅವರ ಅಭಿನಯ ಚಿತ್ರದ ಪ್ಲಸ್‌ಪಾಯಿಂಟ್‌ಗಳು.
ಈ ಪೈಕಿ ಅವಿನಾಶ್ ಅವರ ಬಗ್ಗೆ ಹೇಳಲೇ ಬೇಕು. ಬಹಳ ವಿಭಿನ್ನವಾದ ಗೆಟಪ್‌ವೊಂದರಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರೆ ಮತ್ತು ಬಹಳ ದಿನಗಳ ನಂತರ ಅವರಿಗೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅವಿನಾಶ್ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮಿಕ್ಕಂತೆ ಇರುವ ಬೆರಳಣಿಕಯಷ್ಟು ಪಾತ್ರಗಳ ಪೈಕಿ ಹೇಳಬೇಕಾದರೆ, ನಾಯಕ ರೂಪೇಶ್ ಸಾಕಷ್ಟು ಸುಧಾರಿಸಿದ್ದಾರೆ. ಆರಾಧ್ಯ ಸುಧಾರಿಸಬೇಕು. ಪೆಟ್ರೋಲ್ ಪ್ರಸನ್ನ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ.
ಚಿತ್ರ: ನಿಶ್ಯಬ್ಧ 2ನಿರ್ದೇಶನ: ದೇವರಾಜ್ ಕುಮಾರ್
ನಿರ್ಮಾಣ: ತಾರಾನಾಥ ಶೆಟ್ಟಿ ಬೋಳಾರು
ತಾರಾಗಣ: ರೂಪೇಶ್ ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್, ಪೆಟ್ರೋಲ್ ಪ್ರಸನ್ನ ಮುಂತಾದವರು * ಚೇತನ್ ನಾಡಿಗೇರ್