Advertisement

ದೇಗುಲದ ಹಣ ಹಿಂದೂ ಸಮಾಜಕ್ಕೇ ವಿನಿಯೋಗವಾಗಲಿ: ಡಾ|ಭಟ್‌

08:30 AM Aug 14, 2017 | Team Udayavani |

ಮಂಗಳೂರು: ದಕ್ಷಿಣ ಭಾರತ ದಲ್ಲಿಯೇ ಮೊದಲ ಬಾರಿಗೆ ಕರಾವಳಿ ತೀರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮಂಗಳೂರಿನ ಬೆಂಗ್ರೆಯ ಶಿವಾಜಿ ಪಾರ್ಕ್‌ ಬಳಿ ರವಿವಾರ ಲೋಕಾರ್ಪಣೆಗೊಂಡಿತು.

Advertisement

ವಿಶ್ವ ಹಿಂದೂ ಪರಿಷತ್‌ನ ಸ್ವರ್ಣ ಮಹೋತ್ಸವದ ಪ್ರಯುಕ್ತ ಬೆಂಗ್ರೆಯ ಭಾರತ್‌ ಮಾತಾ ಶಾಖೆಯ ವಿಶ್ವಹಿಂದೂ ಪರಿಷತ್‌ ಬಜರಂಗ ದಳದ ವತಿಯಿಂದ ಪ್ರತಿಮೆ ಲೋಕಾ ರ್ಪಣೆಗೊಳಿಸಲಾಯಿತು.

ಧ್ವಜಾರೋಹಣ ನಡೆಸಿ, ದಿಕ್ಸೂಚಿ ಭಾಷಣ ಮಾಡಿದ ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯ ಕಾರಿಣಿ ಸದಸ್ಯ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರು, ಹಿಂದೂ ದೇವಾಲಯಗಳ ಹಣವನ್ನು ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಹಿಂದೂ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿನಿಯೋಗವಾಗು ವಂತೆ ಮುಜರಾಯಿ ಇಲಾಖೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಧರ್ಮಕ್ಕೆ ಆಘಾತ
ಶಿವಾಜಿ ಹುಟ್ಟುವ ಮುನ್ನವೇ ಹಿಂದೂ ಧರ್ಮ ಸಾಕಷ್ಟು ಸಮಸ್ಯೆ ನೋವುಗಳನ್ನು ಎದುರಿಸುತ್ತಿತ್ತು. ಆದರೆ ಶಿವಾಜಿ ಹುಟ್ಟಿದ ಬಳಿಕ ಆ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟದ ಧ್ವನಿ ಯಾಗಿ ಮೂಡಿಬರುವಲ್ಲಿ ಯಶಸ್ವಿ ಯಾಯಿತು. ಆದರೆ ಈಗ ಕರಾವಳಿ ಯಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ಆಘಾತಗಳನ್ನು ಉಂಟು ಮಾಡಲಾಗು ತ್ತಿದೆ. ಇಂತಹುದಕ್ಕೆ ನಾವೆಂದೂ ಬೆದರುವುದಿಲ್ಲ. ಹಾಗೂ ಇಂತಹ ಎಲ್ಲ ಅಕ್ರಮಗಳನ್ನು ನಾವು ಮೆಟ್ಟಿ ನಿಲ್ಲಲು ಸರ್ವಸನ್ನದ್ಧರಾಗಿದ್ದೇವೆ ಎಂದು ಡಾ| ಕಲ್ಲಡ್ಕ ಪ್ರಭಾಕರ ಭಟ್‌ ತಿಳಿಸಿದರು.

ಪ್ರತಿಮೆ ಲೋಕಾರ್ಪಣೆಗೊಳಿಸಿದ ಮಹಾರಾಷ್ಟ್ರ ಗೃಹಸಚಿವ ದೀಪಕ್‌ ವಸಂತ್‌ರಾವ್‌ ಕೆಸರ್‌ಕರ್‌ ಅವರು  ಮಾತನಾಡಿ, ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಶಿವಾಜಿಯ ಆದರ್ಶಗಳು ಹಿಂದೂ ಧರ್ಮಕ್ಕೆ ಎಂದೆಂದಿಗೂ ಅನುಕ ರಣೀಯ. ಈ ನಿಟ್ಟಿನಲ್ಲಿ ಮಂಗಳೂರಿನ ಕಡಲ ತೀರದಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿರುವುದು ಶ್ಲಾಘ ನೀಯ ಎಂದರು.

Advertisement

ಸುರತ್ಕಲ್‌ನ ಮಾತಾ ಡೆವಲಪರ್ ಪ್ರೈ.ಲಿ.ನ ಸಂತೋಷ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಧಾರ್ಮಿಕ ಮುಖಂಡ ಶ್ರೀಕರ ಪ್ರಭು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್‌ ಕುತ್ತಾರ್‌, ಬಜರಂಗದಳ ಸಂಯೋಜಕರಾದ ಭುಜಂಗ ಕುಲಾಲ್‌, ಪ್ರವೀಣ್‌ ಕುತ್ತಾರ್‌, ವಿಹಿಂಪ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬೆಂಗ್ರೆ ಮಹಾಜನಾ ಸಭಾ ಅಧ್ಯಕ್ಷ ಮೋಹನ್‌ ಬೆಂಗ್ರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next