Advertisement

ಅಟೋಗ್ರಾಫ್ ಎಂಬ ನೆನಪಿನ ಬುತ್ತಿ

06:00 AM Jun 01, 2018 | |

ವಿದ್ಯಾರ್ಥಿ ಜೀವನವೆಂಬುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಅಮೂಲ್ಯ ಸಮಯಗಳಲ್ಲಿ ಒಂದು. ವಿದ್ಯಾರ್ಥಿಯಾಗಿ ಕಳೆದ ನೆನಪುಗಳು, ಬಾಲ್ಯದೊಂದಿಗೆ ಬೆರೆತ ಶಾಲಾ ದಿನಗಳನ್ನು ವರ್ಣಿಸಲು ಪದಗಳೇ ಸಾಲದು. ಒಂದರಿಂದ ಹತ್ತರವರೆಗೆ ಶಾಲೆಯಲ್ಲಿ ಕಲಿತು ಹತ್ತನೇ ತರಗತಿ ಕೊನೆಗೊಂಡ ತಕ್ಷಣ ನಮ್ಮ ಮುಂದೆ ತೆರೆ‌ದಿಡುವ ಮತ್ತೂಂದು ಕನಸಿನ ಲೋಕವೇ ಕಾಲೇಜು. ಕಾಲೇಜು ಜೀವನದ ಅನುಭವ ಅದು ಕಾಲೇಜಿಗೆ ಹೋದವರಿಗೆ ಗೊತ್ತು. ಎರಡು ವರ್ಷಗಳ ಪಿಯುಸಿ, ಮೂರು ವರ್ಷಗಳ ಪದವಿ, ಇನ್ನೆರಡು ವರ್ಷಗಳ ಸ್ನಾತ್ತಕೋತ್ತರ ಪದವಿ- ಹೀಗೆ ಕಾಲೇಜುಗಳು, ಸ್ನೇಹಿತರು ತರಗತಿಗಳು, ಉಪನ್ಯಾಸಕರು ಬದಲಾದಂತೆ ನೆನಪಿನ ಪುಟಗಳು ತುಂಬುತ್ತಾ ಹೋಗುತ್ತವೆ. ಪ್ರತಿಯೊಂದು ಕಾಲೇಜಿನಿಂದ ವ್ಯಾಸಂಗ ಮುಗಿಸಿ ಹೊರ ನಡೆಯುವಾಗ ವಿದ್ಯಾರ್ಥಿಯ ಮನಸ್ಸಿನಲ್ಲಾಗುವ ನೋವು ಹೇಳತೀರದು. ಯಾಕೆಂದರೆ ನೆಚ್ಚಿನ ಕಾಲೇಜು, ಪ್ರೀತಿಯ ಗೆಳೆಯರು, ಸ್ವಲ್ಪ$ಗದರಿದರೂ ಸ್ವಂತ ಮಕ್ಕಳ ತರ ನೋಡಿಕೊಂಡ ಗುರುಗಳು ಇವರುಗಳನ್ನೆಲ್ಲ ಬಿಟ್ಟು ತೆರಳುವುದು ಅಷ್ಟೊಂದು ಸುಲಭದ ವಿಷಯವಲ್ಲ. ಆದರೆ ಎಂತಹ ನೆನಪುಗಳಿದ್ದರೂ ನೋವುಗಳಿದ್ದರೂ ಕೆಲವು ದಿನಗಳು ಅಷ್ಟೆ . ಹೊಸ ಗೆಳೆಯರ ಪರಿಚಯ ಆದಂತೆ ಹಿಂದಿನವರು ಮರೆತು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮ ಜೀವನದ ಅಮೂಲ್ಯ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುವ ನೆನಪಿನ ಬುತ್ತಿಯೇ ಅಟೋಗ್ರಾಫ್.

Advertisement

 ಕಾಲೇಜುಗಳಲ್ಲಿ ಕಲಿತವರಿಗೆ ಅಟೋಗ್ರಾಫ್ ಬಗ್ಗೆ ಗೊತ್ತಿರದೆ ಇರಲಾರದು. ಹೆಚ್ಚಿನವರು ಅಟೋಗ್ರಾಫ್ ಬರೆದವರು, ಬರೆಸಿಕೊಂಡವರೇ ಆಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಟೋಗ್ರಾಫ್ ಬರೆಯುವವರ ಸಂಖ್ಯೆ ಕಡಿಮೆ ಅಂತಾನೆ ಹೇಳಬಹುದು. ಯಾಕೆಂದರೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್‌, ಫೇಸುºಕ್‌ ಕ್ರಾಂತಿಯಿಂದಾಗಿ ಇವತ್ತು ಅಟೋಗ್ರಾಫ್ ಬರೆಯುವ ಅಗತ್ಯವಿಲ್ಲ. ತಮ್ಮ ಗೆಳೆಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕ್ಷಣಾರ್ಧದಲ್ಲೇ ಸಂಪರ್ಕಿಸಬಹುದು ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ ಗೆಳೆಯರ, ಗೆಳತಿಯರ, ಹಳೆಗೆಳೆಯರ, ಹೊಸಗೆಳೆಯರ ಹೀಗೆ ನೂರಾರು ವಾಟ್ಸಾಪ್‌ ಗ್ರೂಪುಗಳು ದಿನದ ಇಪ್ಪತ್ತನಾಲಕ್ಕು ಗಂಟೆಗಳೂ ಚಾಲ್ತಿಯಲ್ಲಿರುತ್ತವೆ. ಆದರೆ ನಮ್ಮ ಹಳೆಯ ಅಟೋಗ್ರಾಪ್‌ಗೆ ಇವತ್ತಿನ ಯಾವ ಜಾಲತಾಣವೂ ಸರಿದೂಗದು. ಯಾಕೆಂದರೆ ಅಟೋಗ್ರಾಫ್ ಬರೆಯುವುದರ ಹಿಂದೆ ದೊಡ್ಡದೊಂದು ಕಥೇನೇ ಇದೆ.

 ಕಾಲೇಜು ಕೊನೆಗೊಳ್ಳುವ ಕೊನೆಯ ವಾರವಿಡೀ ಅಟೋಗ್ರಾಫ್ ಬರೆಯುವುದರಲ್ಲೇ ಸಮಯ ತಲ್ಲೀನರಾಗಿರುತ್ತೇವೆ. ಪ್ರಾಂಶುಪಾಲರಿಂದ ಹಿಡಿದು ಇತರ ಉಪನ್ಯಾಸಕರು, ಗೆಳೆಯರು, ಗೆಳೆಯರಲ್ಲದವರು, ಲೈಬ್ರೆ„ರಿಯನ್‌ ಎಲ್ಲರೂ ಏನೋ ಒಂದು ಹಿತನುಡಿ ಬರೆದು ಮುಂದಿನ ಜೀವನಕ್ಕೆ ಶುಭಕೋರಿರುತ್ತಾರೆ. ನಿಜವಾಗಿಯೂ ಪ್ರೀತಿಯಿಂದ ಅಟೋಗ್ರಾಫ್ ಬರೆಯುತ್ತಾರೋ ಅಥವಾ ಸುಮ್ಮನೇ ಟ್ರೆಂಡ್‌ ಅಂತ ಬರೆಯುತ್ತಾರೋ ಗೊತ್ತಿಲ್ಲ. ಆದರೆ ಕಾಲೇಜು ಜೀವನವೆಲ್ಲ ಮುಗಿಸಿ ಏನೂ ಕೆಲಸವಿಲ್ಲದಾಗ ಏಕಾಂತದಲ್ಲಿ ಅಟೋಗ್ರಾಫ್ ಬಿಡಿಸಿ ನೋಡುವಾಗ ಒಂದು ಕ್ಷಣ ನಮಗೆ ಗೊತ್ತಿಲ್ಲದೇ ಕಣ್ಣಂಚಿನಿಂದ ಹನಿಗಳು ಜಾರುವುದಂತು ಸತ್ಯ. ಒಂದೇ ಸಮನೆ ಹಿಂದಿನ ಎಲ್ಲಾ ನೆನಪುಗಳು ಕಣ್ಣ ಮುಂದೆ ಹಾದು ಹೋದಂತಾಗುತ್ತದೆ. ಮರೆತು ಹೋದ ಗೆಳೆಯರು, ಕಾಲೇಜಿನಲ್ಲಿ ಕಳೆದ ಮಧುರ ಕ್ಷಣಗಳು, ಸಣ್ಣಪುಟ್ಟ ಜಗಳಗಳು, ಕಣ್ಣಂಚಿನಲ್ಲೇ ಅರಳಿದ ಹರೆಯದ ನೂರಾರು ಪ್ರೇಮ ಪುರಾಣಗಳು-ಹೀಗೆ ಎಲ್ಲವೂ ನೆನಪಾಗಿ ಮತ್ತೆ ಆ ಕ್ಷಣಗಳು ಬೇಕೆನಿಸುತ್ತದೆ. ಆದರೆ ಅದು ಅಸಾಧ್ಯ. ನಿಜಕ್ಕೂ ಅಟೋಗ್ರಾಫ್ ಎಂಬ ನೆನಪಿನ ಬುತ್ತಿಯಿಂದ ಬಗೆದಷ್ಟು ನೆನಪುಗಳ ರಾಶಿಗಳು ತುಂಬಿರುತ್ತವೆ. ತನ್ನ ಅಟೋಗ್ರಾಫ‌ನ್ನು ಮತ್ತೆ ತಿರುವಿದಾಗ ಆ ದಿನಗಳು ಎಷ್ಟೊಂದು ಸುಂದರವಾಗಿತ್ತಲ್ಲವೇ ನಾನು ಕಳೆದುಕೊಂಡೆ ಎಂಬ ಬೇಜಾರು ಪ್ರತಿಯೊಬ್ಬರಿಗೂ ಕಾಡದಿರದು.

ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ವಿಷಯಗಳು ಈ ಅಟೋಗ್ರಾಫ್ ಹಿಂದೆಯಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅಟೋಗ್ರಾಫ್ ಎನ್ನುವುದು ನಿಜಕ್ಕೂ ಒಂದು ನೆನಪಿನ ಬುತ್ತಿ!

ಹಾರಿಸ್‌ ಸೋಕಿಲ  ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next