Advertisement

ಚಿಕ್ಕಪೇಟೆ ಕ್ಷೇತ್ರದಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣ

03:18 PM Jun 02, 2021 | Team Udayavani |

ಬೆಂಗಳೂರು: ನಗರದ ಮಧ್ಯಭಾಗದಲ್ಲಿರುವಚಿಕ್ಕಪೇಟೆ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆತೆಗೆದುಕೊಂಡ ಕ್ರಮಗಳು, ಬೆಡ್‌ ವ್ಯವಸ್ಥೆ, ಲಸಿಕೆಹಾಕಿಸುವುದು ಹಾಗೂ ಬಡವರಿಗೆ ಫುಡ್‌ಕಿಟ್‌ವಿತರಣೆ ಸೇರಿದಂತೆ ಲಾಕ್‌ ಡೌನ್‌ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಕ್ಷೇತ್ರದ ಶಾಸಕಉದಯಗರುಡಾಚಾರ್‌ ಉದಯವಾಣಿಯೊಂದಿಗೆಮಾತನಾಡಿದ್ದಾರೆ.„

Advertisement

ಕೊರೊನಾ ನಿಯಂತ್ರಣಕ್ಕೆ ಚಿಕ್ಕಪೇಟೆ ಕ್ಷೇತ್ರದಲ್ಲಿಏನುಕ್ರಮಕೈಗೊಂಡಿದ್ದೀರಾ?ನಮ್ಮಲ್ಲಿ ಹಲವಾರು ಕೊವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನುಕೊವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿಆಕ್ಸಿಜನ್‌ ಬೆಡ್‌ ಹಾಕಿಸಿದ್ದೇವೆ. ವಾಸವಿಸಂಸ್ಥೆಯನ್ನು ಟ್ರಯಾಜ್‌ ಕೇಂದ್ರವನ್ನಾಗಿಮಾಡಿದ್ದೇವೆ.

ಎಲ್ಲ ಕಡೆಗಳಲ್ಲೂ ನಮ್ಮವೈದ್ಯರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಕೆಲವು ದಾನಿಗಳಿಂದ ಆ್ಯಂಬುಲೆನ್ಸ್‌ಸೇವೆ ಪಡೆದುಕೊಂಡು ಕೊರೊನಾಸೋಂಕಿತರು ಆಸ್ಪತ್ರೆಗೆ ತಲುಪಲು ತೊಂದರೆ ಆಗದಂತೆನೋಡಿಕೊಳ್ಳುತ್ತಿದ್ದೇವೆ.

 ಆಕ್ಸಿಜನ್‌ ಬೆಡ್‌ ಸಮಸ್ಯೆ ಇಲ್ವಾ ನಿಮ್ಮಲ್ಲಿ?

ನಮ್ಮ ಕ್ಷೇತ್ರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಅತಿಕಡಿಮೆ ಪ್ರಕರಣಗಳು ದಾಖಲಾಗಿವೆ. ನಮ್ಮಕ್ಷೇತ್ರದಲ್ಲಿ ಆಕ್ಸಿಜನ್‌ ಸಮಸ್ಯೆ ಎದುರಾಗಿಲ್ಲ.ಆರಂಭದಲ್ಲಿ ಸ್ವಲ್ಪ ಕಂಡು ಬಂದಿತು. ಈಗಯಾವುದೇ ಸಮಸ್ಯೆ ಇಲ್ಲ. ಇನ್ನೂಕೊವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಆಕ್ಸಿಜನ್‌ಬೆಡ್‌ಗಳುಲಭ್ಯವಿದೆ.ಕ್ಷೇತ್ರದಪೇಟೆಗಳಲ್ಲಿವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

Advertisement

 ಕ್ಷೇತ್ರದಲ್ಲಿ ಎಲ್ಲಿವರೆಗೂ ಲಸಿಕೆ ಹಾಕಿಸಲುಏನುಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ?

ನಮ್ಮ ಕ್ಷೇತ್ರದಲ್ಲಿಸಾಮೂಹಿಕವಾಗಿಲಸಿಕೆಹಾಕಿಸುವಕೆಲಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆನೀಡಿದ್ದಾರೆ. ಮೆಟ್ರೊ ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮ ಹಾಕಿಕೊಂಡಿದ್ದೆವು. ಖಾಸಗಿ ಸಂಸ್ಥೆಯ ಸಹಕಾರದೊಂದಿಗೆ ಅವರ ಸಿಎಸ್‌ಆರ್‌ ಫಂಡ್‌ ನಿಂದ ಉಚಿತಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ನಿಮ್ಮ ಕ್ಷೇತ್ರದ ಜನತೆಗೆ ಬೇಕಾದಷ್ಟು ಲಸಿಕೆಸಿಗುತ್ತಿದೆಯಾ?

ನಮಗೆ ಬೇಕಾದಷ್ಟು ಲಸಿಕೆ ಇನ್ನೂ ಸಿಗುತ್ತಿಲ್ಲ.2.60 ಲಕ್ಷ ಜನ ಇದ್ದಾರೆ. ಪ್ರತಿ ದಿನ ಏಳು ವಾರ್ಡ್‌ ಗೆ800 ಡೋಸ್‌ ಲಸಿಕೆ ಕೊಡುತ್ತಾರೆ. ಅದರಿಂದ ಲಸಿಕೆಸಮಸ್ಯೆಯಾಗುತ್ತಿದೆ. ಹೆಚ್ಚಿನ ಲಸಿಕೆ ನೀಡುವಂತೆಬಿಬಿಎಂಪಿ ಅಧಿಕಾರಿಗಳಿಗೆಕೇಳಿದ್ದೇನೆ.

ನಿಮ್ಮಕ್ಷೇತ್ರದ ಬಡವರಿಗೆಯಾವ ರೀತಿಸಹಾಯ ಸಿಗುತ್ತಿದೆ?

ನಮ್ಮಕ್ಷೇತ್ರದಲ್ಲಿ ಸುಮಾರು46 ಸ್ಲಂಗಳಿವೆ. ಎಲ್ಲರಿಗೂಉಚಿತ ಆಹಾರಕಿಟ್‌ನೀಡಲು ತೀರ್ಮಾನಿಸಲಾಗಿದೆ. ನಾನೂವಯಕ್ತಿಕವಾಗಿ ಎಲ್ಲಬಡವರಿಗೂ ಆಹಾರದಕಿಟ್‌ ವಿತರಣೆ ಮಾಡಲುಸಿದ್ಧತೆ ಮಾಡಿಕೊಂಡಿದ್ದೇವೆ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next