ಹುಲಿ, ಚಿರತೆ, ಸಿಂಹಗಳ ಹೆಸರು ಕೇಳಿದರೆ ಸಾಕು ಕೈ ಕಾಲು ನಡುಗುತ್ತೆ ಆದರೆ ಇಲ್ಲೋರ್ವ ಅರಣ್ಯ ಇಲಾಖೆ ಸಿಬ್ಬಂದಿ ರೈಲು ಹಳಿಯ ಮೇಲೆ ಬಂದ ದೈತ್ಯ ಸಿಂಹವನ್ನು ಯಾವುದೇ ಹೆದರಿಕೆ ಇಲ್ಲದೆ ಕೈಯಲ್ಲಿ ಕೋಲು ಹಿಡಿದುಕೊಂಡು ಸಾಕು ಪ್ರಾಣಿಯನ್ನು ಓಡಿಸಿದಂತೆ ಸಿಂಹವನ್ನು ಓಡಿಸಿದ್ದಾನೆ.
ಹೌದು ಈ ಘಟನೆ ನಡೆದಿರುವುದು ಜನವರಿ 6 ರಂದು ಗುಜರಾತ್ನ ಭಾವ್ನಗರದಲ್ಲಿ, ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ರೈಲು ಹಳಿಯ ಮೇಲೆ ಬರುತ್ತಿದ್ದ ಸಿಂಹವೊಂದನ್ನು ನಯವಾಗಿ ಓಡಿಸಿದ್ದಾರೆ, ಜೊತೆಗೆ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಧೈರ್ಯಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗುಜರಾತ್ನ ಭಾವ್ನಗರದಲ್ಲಿರುವ ಲಿಲ್ಯಾ ರೈಲು ಗೇಟ್ ಬಳಿ ದೈತ್ಯ ಸಿಂಹವೊಂದು ರೈಲು ಹಳಿ ಮೇಲೆ ಬರುತ್ತಿತ್ತು ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಎಚ್ಚೆತ್ತು ಹಳಿ ಮೇಲೆ ಇರುವ ಸಿಂಹದ ಬಳಿಗೆ ತೆರಳಿ ಹಳಿಯ ಮೇಲಿಂದ ದೂರ ಓಡಿಸಿದ್ದಾನೆ ಅಲ್ಲದೆ ಗ್ರಾಮೀಣ ಪ್ರದೇಶಕ್ಕೆ ಪ್ರವೇಶ ಮಾಡುವ ಉದ್ದೇಶದಿಂದ ಸಿಂಹದ ಹಿಂದೆಯೇ ತೆರಳಿ ಅದನ್ನು ಸುರಕ್ಷಿತ ಸ್ಥಳಕ್ಕೆ ದಾಟಿಸುವ ಕಾರ್ಯ ಮಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯವನ್ನು ಅಲ್ಲಿನ ರೈಲ್ವೆ ಗೇಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದಾರೆ, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಗುಜರಾತ್ನಲ್ಲಿ ತಾಪಮಾನ ಕಡಿಮೆಯಾಗುವ ಸಮಯದಲ್ಲಿ ಅರಣ್ಯದಿಂದ ಕಾಡು ಪ್ರಾಣಿಗಳು ಹೊರಬರುತ್ತವೆ ಈ ಸಮಯದಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಮೇಲೆ ಹೆಚ್ಚಿನ ನಿಗಾ ಇಡುತ್ತಾರೆ ಎನ್ನಲಾಗಿದೆ.