Advertisement

ಕತ್ತಲಲ್ಲೇ ಬಡ ನಿವಾಸಿಗಳ ಬದುಕು

11:40 AM Jun 11, 2018 | Team Udayavani |

ಗೊರೇಬಾಳ: ಗ್ರಾಮದಿಂದ 1.5 ಕಿ.ಮೀ. ಅಂತರದಲ್ಲಿರುವ ಬಾದರ್ಲಿ ಬಸವನಗೌಡ ಬಡಾವಣೆ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಸಂಕಷ್ಟಗಳ ಮಧ್ಯೆ ಜೀವನ ನಡೆಸುವಂತಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಬಸವನಗೌಡ ಬಾದರ್ಲಿ ಬಡಾವಣೆಯಲ್ಲಿ 25-30 ಸೈಜಿನ ನಿವೇಶನಗಳನ್ನು ರಚಿಸಿ 146 ಜನ ಬಡ ಜನರಿಗೆ ಗೊರೇಬಾಳ ಗ್ರಾಮದ ಸ.ನಂ. 322/ ಬಕ್ಕೆ ಸೇರಿದ 3.24 ಎಕರೆ ಜಾಗೆಯಲ್ಲಿ 2002ರಲ್ಲಿ 25-30 ಅಳತೆಯ 146
ನಿವೇಶನಗಳನ್ನು ರಚಿಸಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಬಡಜನರಿಗೆ ಹಕ್ಕುಪತ್ರ ನೀಡಿದ್ದರು.
ಈ ಬಡಾವಣೆಯಲ್ಲಿ ಸದ್ಯ 45ರಿಂದ 50 ಜನ ಫಲಾನುಭವಿಗಳು ಇಂದಿರಾ ಆವಾಸ್‌, ಅಂಬೇಡ್ಕರ್‌, ಬಸವ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಬಡಾವಣೆಗೆ ಇದುವರೆಗೆ ಮೂಲ ಸೌಲಭ್ಯ ಒದಗಿಸದ್ದರಿಂದ
ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಬಡಾವಣೆಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿದ್ದರೂ ಉಪಯೋಗ ಇಲ್ಲದಂತಾಗಿದೆ. ಚರಂಡಿ ನೀರು ಬಡಾವಣೆಯ ಖಾಲಿ ನಿವೇಶನಗಳಲ್ಲಿ ನಿಂತು ಜನ
ಕಾಯಿಲೆಯಿಂದ ನರಳು ವಂತಾಗಿದೆ. 

Advertisement

ಬಡಾವಣೆಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಒಂದು ಜಾಗದ ನೀರಿನ ತೊಟ್ಟಿಗೆ ಬರುವ ನೀರನ್ನೇ ಬಡಾವಣೆ
ಜನರು ತುಂಬುತ್ತಾರೆ. ಶುದ್ಧ ಕುಡಿಯುವ ನೀರು ಮಾತ್ರ ಮರೀಚಿಕೆಯಾಗಿದೆ. 

ಬಾದರ್ಲಿ ಬಡಾವಣೆಗೆ ಇದುವರೆಗೆ ವಿದ್ಯುತ್‌ ಸೌಲಭ್ಯವಿಲ್ಲ. ಬಡಾವಣೆ ಪಕ್ಕವೇ ಹಳ್ಳ ಇದ್ದು, ರಾತ್ರಿಯಾದರೆ  ಷಜಂತುಗಳ ಭಯ ಕಾಡುತ್ತಿದೆ. ಬಡಾವಣೆಗೆ ವಿದ್ಯುತ್‌, ನೀರು, ಇತರೆ ಸೌಲಭ್ಯ ಒದಗಿಸುವಂತೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. 
 ಯಲ್ಲಪ್ಪ ತಳಗೇರಿ, ನಿವಾಸಿ

ಬಾದರ್ಲಿ ಬಡಾವಣೆಗೆ ವಿದ್ಯುತ್‌ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 
 ದೊಡ್ಡಲಿಂಗಪ್ಪ, ಪಿಡಿಒ, ಗೊರೇಬಾಳ ಗ್ರಾಪಂ.

ಗೊರೇಬಾಳ ಗ್ರಾಮ ಪಂಚಾಯತಿಗೆ ವಿದ್ಯುತ್‌ ಬೇಡಿಕೆ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಕಳುಹಿಸಲು ಸೂಚಿಸಿತ್ತು. ಇನ್ನೂ ನಮಗೆ ವಿದ್ಯುತ್‌ ಬೇಡಿಕೆ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾವನೆ ಬಂದರೆ ವಿದ್ಯುತ್‌
ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
 ಚಂದ್ರಶೇಖರ ದೇಸಾಯಿ, ಜೆಸ್ಕಾಂ ಕಾ.ನಿ. ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next