Advertisement

9 ದಿನದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ದಾಖಲೆ ಬರೆದ The Kerala Story

11:01 AM May 14, 2023 | Team Udayavani |

ಮುಂಬಯಿ: ವಿವಾದದಿಂದಲೇ ಸುದ್ದಿಯಾಗಿ ಇದೀಗ ಬಾಕ್ಸ್‌ ಆಫೀಸ್‌ ನಲ್ಲಿ ಭಾರೀ ಸದ್ದು ಮಾಡುತ್ತಿರುವ ʼದಿ ಕೇರಳ ಸ್ಟೋರಿʼ ಹೊಸ ದಾಖಲೆಯೊಂದನ್ನು ಬರೆದಿದೆ.

Advertisement

ಮೇ. 5 ರಂದು ಗ್ರ್ಯಾಂಡ್‌ ರಿಲೀಸ್‌ ಆದ ಸುದೀಪ್ತೋ ಸೇನ್ ಅವರ ʼದಿ ಕೇರಳ ಸ್ಟೋರಿʼ ಒಂದಷ್ಟು ವಿವಾದದಿಂದ ಸುದ್ದಿಯಾಗಿತ್ತು. ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ. ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್‌ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್‌ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ, ಇದು ಸುಳ್ಳ ಎಂದ ಬಳಿಕ ಸಿನಿಮಾ ತಂಡ 32 ಸಾವಿರ ಮಹಿಳೆಯರು ಎನ್ನುವ ದೃಶ್ಯ ಸೇರಿ ಅನೇಕ ದೃಶ್ಯವನ್ನು ತೆಗೆದು ಹಾಕಿತ್ತು.

ಹೀಗೆ ವಿವಾದದಿಂಸ ಸುದ್ದಿಯಾದ ಸಿನಿಮಾ ನಿಧಾನವಾಗಿ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡುತ್ತಿದೆ. ಶನಿವಾರ ( ಮೇ.13ರಂದು) ಸಿನಿಮಾ 19.50 ಕೋಟಿ ರೂ.ವನ್ನು ಗಳಿಸಿದ್ದು, ರಿಲೀಸ್‌ ಆದ 9 ದಿನದಲ್ಲಿ  ಸಿನಿಮಾ ಒಟ್ಟು 112.87 ಕೋಟಿ ರೂ. ಗಳಿಸಿದೆ. ಆ ಮೂಲಕ ಈ ವರ್ಷ ಬಾಲಿವುಡ್‌ ನಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ʼದಿ ಕೇರಳ ಸ್ಟೋರಿʼ ಹೊರಹೊಮ್ಮಿದೆ.

ಅದಾ ಶರ್ಮಾ,ಯೋಗಿತಾ ಬಿಹಾನಿ ,ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next