Advertisement
ಹೀಗಿದ್ದರೂ, ವಿಶ್ವದ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಕ್ರೀಡಾಕೂಟಗಳಲ್ಲೊಂದಾದ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ನೋಡುವ ದಿನಗಳು ಇನ್ನೂ ದೂರದಲ್ಲಿದೆ ಎಂದೇ ಹೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ.
Related Articles
Advertisement
ತಯಾರಿ ಹಾಗೂ ಸಮಯ
ಕ್ರಿಕೆಟ್ ಆಟಕ್ಕಾಗಿ ಹಲವಾರು ತಯಾರಿಗಳು ಆಗಬೇಕಿದೆ. ಅದಲ್ಲದೆ, ಕನಿಷ್ಠ 2-3 ಘಂಟೆಗಳನ್ನು ಒಂದು ಪಂದ್ಯಕ್ಕೆ ಮೀಸಲಿಡಬೇಕು. ಏನೇ ಅಂದರೂ ಟಿ10 ಆಟ ಆಡಿಸಿದರೂ 120 ನಿಮಿಷಗಳು ಬೇಕಾಗಿದೆ. ಫುಟ್ ಬಾಲ್ ಆಟವೂ ಸುಮಾರು 90 ನಿಮಿಷ ಆಡಿಸಿದರೂ, ಸತತವಾಗಿ ಪಂದ್ಯಗಳನ್ನು ನಡೆಸಬಹುದು. ಆದರೆ, ಕ್ರಿಕೆಟ್ ನಲ್ಲಿ ಅದು ಕಷ್ಟಸಾಧ್ಯ. ಮಳೆ ಬಂದರೂ ಪಂದ್ಯಕ್ಕೆ ಹಿನ್ನಡೆ ಆಗುತ್ತದೆ.
ಅಂಪೈಯರಿಂಗ್ ವೈಫಲ್ಯ
ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಹೀಗಾಗಿ, ಸರಿಯಾದ ನಿರ್ಧಾರ ಕೈಗೊಳ್ಳಲು ಆಗದಿರುವುದು ಒಂದು ಕಾರಣ ಎನ್ನಬಹುದು.
ಪಿಚ್ ಮಾಡುವುದೂ ಸವಾಲಿನ ಕೆಲಸ
ಒಂದು ತಟಸ್ಥವಾಗಿ, ಎಲ್ಲ ತಂಡಗಳಿಗೂ ಸಮಾನ ನ್ಯಾಯ ಒದಗಿಸಬಲ್ಲ ಪಿಚ್ ನಿರ್ಮಿಸುವುದೂ ಕೂಡ ಒಂದು ಸವಾಲಿನ ಕೆಲಸ. ಆ ಯೋಜನೆ ಮಾಡುವ ದೇಶಗಳಿಗೆ ಸಹಕಾರಿಯಾಗಬಲ್ಲ ಪಿಚ್ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಇದರೊಂದಿಗೆ, ಬ್ಯಾಟ್ಸ್ಮನ್ ಹಾಗೂ ಬೌಲರ್ಸ್ ಇಬ್ಬರಿಗೂ ಸ್ಪರ್ಧಾತ್ಮಕ ಎನ್ನಿಸಬಲ್ಲ ಪಿಚ್ ನಿರ್ಮಿಸುವುದು ಕಷ್ಟಸಾಧ್ಯ. ಏಷ್ಯಾ ಖಂಡದ ತಂಡಗಳು ಸಾಮಾನ್ಯವಾಗಿ ಸ್ಪಿನ್ ಗೆ ಸಹಕಾರಿಯಾಗಬಲ್ಲ ಪಿಚ್ ಗಳನ್ನು ನಿರ್ಮಿಸಿದರೆ, ಇತರ ದೇಶಗಳಿಗೆ ವೇಗದ ಬೌಲಿಂಗೇ ಶಕ್ತಿ!
ಉತ್ಸಾಹ ರಹಿತ ಕ್ರೀಡೆ
ಇದು ಚರ್ಚಾಸ್ಪದ ಆದರೂ, ಇತರೆ ಕ್ರೀಡೆಗಳಿಗಿಂತ ಕ್ರಿಕೆಟ್ ನಲ್ಲಿ ಕಡಿಮೆ ಉತ್ಸಾಹ ಇರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಹೋದಾಗ ಮಾತ್ರ ಒಂದು ರೀತಿಯ ಮಜಾ! ಅದಲ್ಲದೆ, ಫೀಲ್ಡರ್ಸ್ ಳಿಗೂ ಹೆಚ್ಚಿನ ಕೆಲಸ ಇರುವುದಿಲ್ಲ.
ಇವುಗಳೊಂದಿಗೆ, ಒಲಿಂಪಿಕ್ ಸೇರ್ಪಡೆಗೆ ಕ್ರಿಕೆಟ್ ಆಟಕ್ಕೆ ಬಹುಮತವೂ ಸಿಗದಿರಬಹುದು. ಆಗಲೇ ತಿಳಿಸಿದಂತೆ, ಬಲಾಢ್ಯ ದೇಶಗಳಲ್ಲಿ ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಇಲ್ಲದಿರುವುದರಿಂದ, ಆಟ ಒಲಿಂಪಿಕ್‌ಗೆ ಸೇರ್ಪಡೆಯಾದರೂ, ಅವರಿಗೆ ಪದಕ ಗೆಲ್ಲುವ ಅವಕಾಶವೂ ಇಲ್ಲದಿರುವುದರಿಂದ, ಅಂತಹ ದೇಶಗಳು ಇದಕ್ಕೆ ಮತ ಹಾಕುವ ಸಾಧ್ಯತೆ ತೀರಾ ಕಡಿಮೆ. ಅದಲ್ಲದೆ, ಏನೋ ಅದೃಷ್ಟದಲ್ಲಿ ಒಲಿಂಪಿಕ್‌ಗೆ ಕ್ರಿಕೆಟ್ ಸೇರ್ಪಡೆಯಾದರೂ, ಸೆಮಿಫೈನಲ್‌ಗೆ ಏರುವ 4 ತಂಡಗಳನ್ನು ನಾವು ಮೊದಲೇ ಊಹಿಸಬಹುದು.
ಹೀಗಾಗಿ, ವಿಶ್ವಕಪ್, ಏಷ್ಯಾಕಪ್, ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇತರ ಸರಣಿಗಳಲ್ಲಿ ಮಾತ್ರ ಸದ್ಯ ಕ್ರಿಕೆಟಾಭಿಮಾನಿಗಳು ಮನರಂಜನೆ ಪಡೆಯಬಹುದು. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್ ರಸದೌತಣವನ್ನು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಗಲಿ ಎಂದು ಆಶಿಸೋಣ.