Advertisement

 ದಿ|ಹಿಲಾರಿ ಪಿರೇರ ಸ್ಮರಣಾರ್ಥ ನೂತನ ಬಸ್‌ ತಂಗುದಾಣ ಲೋಕಾರ್ಪಣೆ

02:33 PM Jan 03, 2018 | Team Udayavani |

ವೇಣೂರು: ದಿ| ಹಿಲಾರಿ ಪಿರೇರ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರ ಸಹಕಾರದಿಂದ ನಿರ್ಮಿಸಲಾದ ಬಸ್‌ ತಂಗುದಾಣದಿಂದ ವೇಣೂರಿನ ಬಹುಕಾಲದ ಬೇಡಿಕೆಯೊಂದು ಈಡೇರಿದೆ. ವೇಣೂರಿನ ಜನತೆಯಲ್ಲಿ ಉತ್ತಮ ಒಡನಾಟ ಹಾಗೂ ಸಮಾಜಸೇವೆ ಮಾಡುತ್ತಿದ್ದ ದಿ| ಹಿಲಾರಿ ಪಿರೇರ ಅವರ ಹೆಸರು ವೇಣೂರಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಿದೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ವೇಣೂರಿನ ದಿ| ಹಿಲಾರಿ ಪಿರೇರ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರು ಒದಗಿಸಿದ 5 ಲಕ್ಷ ರೂ. ಕೊಡುಗೆ ಪಡಕೊಂಡು ಇಲ್ಲಿಯ ಶ್ರೀರಾಮ ನಗರದಲ್ಲಿ 7.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್‌ ತಂಗುದಾಣ ಹಾಗೂ ವಾಣಿಜ್ಯ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ಕಟ್ಟಡವನ್ನು ವೇಣೂರು ಗ್ರಾ.ಪಂ.ಗೆ ಹಸ್ತಾಂತರಿಸಲಾಯಿತು. ವೇಣೂರು ವರ್ತಕರ ಸಂಘದ ಅಧ್ಯಕ್ಷ ಭಾಸ್ಕರ ಪೈ ಮಾತನಾಡಿ, ವೇಣೂರಿನ ಜನತೆಯಲ್ಲಿ ಉತ್ತಮ ಪ್ರೀತಿ ಮತ್ತು ಒಡನಾಟ ಹೊಂದಿದ್ದ ಅವರ ಸೇವೆ ಅವಿಸ್ಮರಣೀಯ ಎಂದರು.

ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡದ ದಾನಿಗಳಾದ ವಾಲ್ಟರ್‌ ಪಿರೇರ, ಡೈನಿ ಪಿರೇರ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಪಂ. ಸದಸ್ಯರು ಹಾಗೂ ಪಿರೇರ ಕುಟುಂಬಸ್ಥರು ಉಪಸ್ಥಿತರಿದ್ದರು.

ದಾನಿಗಳಿಗೆ ಸಮ್ಮಾನ
ದಾನಿಗಳಾದ ವಾಲ್ಟರ್‌ ಪಿರೇರಾ, ಡೈನಿ ಪಿರೇರಾ ಹಾಗೂ ಕಟ್ಟಡವನ್ನು ನಿರ್ಮಿಸಿಕೊಟ್ಟ ಗುತ್ತಿಗೆದಾರ ಶರತ್‌ ಅವರನ್ನು ಪಂ. ವತಿಯಿಂದ ಸಮ್ಮಾನಿಸಲಾಯಿತು.ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್‌ ಕ್ರಾಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂ. ಸದಸ್ಯ ರಾಜೇಶ್‌ ಪೂಜಾರಿ ಮೂಡುಕೋಡಿ ಸ್ವಾಗತಿಸಿ, ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ವಂದಿಸಿದರು. ಲೋಕಯ್ಯ ಕಾರ್ಯಕ್ರಮ ನಿರೂಪಿಸಿದರು.

ಅನುದಾನಕ್ಕೆ  ಮನವಿ
ವೇಣೂರು ಸೇತುವೆ ಬಳಿ ಬಸ್‌ ತಂಗುದಾಣದ ತಡೆಗೋಡೆ, ಕಟ್ಟಡಕ್ಕೆ ಅನುದಾನ, ಶ್ರೀರಾಮ ನಗರಕ್ಕೆ ರಿಕ್ಷಾ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್‌ಗೆ ಅನುದಾನ ಒದಗಿಸುವಂತೆ ಶಾಸಕ ವಸಂತ ಬಂಗೇರ ಅವರಿಗೆ ಪಂ. ವತಿಯಿಂದ ಮನವಿ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next