Advertisement
ಜಿಎಸ್‌ಟಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೂ ಜಿಎಸ್‌ಟಿ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರಲಿದೆ ಎಂದು ತಿಳಿಸಿದರು.
Related Articles
Advertisement
ಆಡಿಟ್ ತಾಂತ್ರಿಕ ತೊಂದರೆಯಿಂದ ಇ ವೇ ಬಿಲ್ ಸಂಗ್ರಹ ಕಡಿಮೆಯಾಗಿದೆ. ಇನ್‌ಫೋಸಿಸ್‌ಗೆ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದ್ದು, ಅಕ್ಟೋಬರ್‌ನಲ್ಲಿ ಹೊಸ ಸಾಪ್ಟವೇರ್ ಸಿದ್ದಗೊಳ್ಳಲಿದೆ ಎಂದು ಹೇಳಿದರು. ಅಂತಾರಾಜ್ಯ ವಸ್ತುಗಳ ಸಾಗಾಣಿಕೆ ಮೂಲಕ ಶೇ. 48 % ಹಾಗೂ ರಾಜ್ಯದಲ್ಲಿಯೇ ಸಾಗಾಣಿಕೆ ಮಾಡಿರುವ ಶೇ. 51 ರಷ್ಟು ತೆರಿಗೆ ಸಂಗ್ರಹ ವಾಗುತ್ತಿದೆ. ದೇಶದಲ್ಲಿ ಶೇಕಡಾ 99.49 ರಷ್ಟು ಉತ್ಪನ್ನಗಳು ರಸ್ತೆ ಸಾರಿಗೆ ಮೂಲಕವೇ ಸಾಗಾಣಿಕೆ ಮಾಡಲಾಗುತ್ತಿದ್ದು, ಶೇಕಡಾ 0.51 ರಷ್ಟು ಮಾತ್ರ ರೈಲುಗಳ ಮೂಲಕ ಸಾಗಾಣಿಕೆ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ಉತ್ಪನ್ನಗಳು ಯಾವ ಕಾರಣಕ್ಕೆ ಎಲ್ಲಿಗೆ ಸಾಗಾಣಿಕೆ ಆಗುತ್ತಿವೆ ಎನ್ನುವ ಸಂಪೂರ್ಣ ಮಾಹಿತಿ ಇನ್ನೆರಡು ದಿನಗಳಲ್ಲಿ ಎಲ್ಲ ರಾಜ್ಯಗಳಿಗೂ ದೊರೆಯಲಿದೆ. ಇದರಿಂದ ಯಾವ ರಾಜ್ಯದಿಂದ ಎಷ್ಟು ಉತ್ಪನ್ನ ಯಾವ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ದೊರೆಯಲಿದೆ. ದೇಶದಲ್ಲಿ ಎಲೆಕ್ಟ್ರಿಕಲ್ ಮಷಿನ್‌ಗಳು ಹಾಗೂ ಟೆಕ್‌ಸ್ಟೈಲ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರಾಜ್ಯಕ್ಕೆ ಸಾಗಾಣಿಕೆಯಾಗಿದೆ ಎಂದು ಹೇಳಿದರು.
ಅಲ್ಲದೇ ಬೋಗಸ್ ಇನ್‌ವೈಸ್ ಸೃಷ್ಠಿಸಿ ತೆರಿಗೆ ವಂಚಿಸುವವರನ್ನೂ ಪತ್ತೆ ಹಚ್ಚಲು ಅನುಕೂಲವಾಗಲಿದೆ. ಈಗಾಗಲೇ ಕರ್ನಾಟಕ ಹಾಗೂ ದೆಹಲಿಯಲ್ಲಿ ತಪ್ಪು ಮಾಹಿತಿ ನೀಡಿ ಬೋಗಸ್ ಇನ್‌ವೈಸ್ ಸೃಷ್ಠಿಸಿದ್ದ ನಾಲ್ವರನ್ನು ಬಂಧಿಸಲಾಗಿದೆ. ಆಗಸ್ಟ್‌ನಲ್ಲಿ ಅಧಿಕಾರಿಗಳು 8 ಲಕ್ಷ 65 ಸಾವಿರ ಬಿಲ್‌ಗಳ ಪರಿಶೀಲನೆ ನಡೆಸಿದ್ದು, 3588 ವರದಿಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಇನ್ನು ಸೇವಾ ಕ್ಷೇತ್ರದಲ್ಲಿ ತೆರಿಗೆ ಯಾವ ರಾಜ್ಯಕ್ಕೆ ಸೇರಬೇಕು ಎನ್ನುವ ಬಗ್ಗೆ ಗೊಂದಲ ಇದೆ. ರೈಲು, ಬ್ಯಾಂಕ್, ವಿಮಾನ ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರು ಯಾವ ರಾಜ್ಯದಲ್ಲಿ ಸೇವೆ ಪಡೆಯುತ್ತಾರೆ ಅದೇ ರಾಜ್ಯಕ್ಕೆ ತೆರಿಗೆ ಹೋಗುವಂತಾಗಬೇಕು. ಈಗ ಗ್ರಾಹಕರು ಪ್ರವಾಸ ಮಾಡುವಾಗ ಪ್ರವಾಸ ಮಾಡುವ ರಾಜ್ಯದ ಬದಲು ಯಾವ ರಾಜ್ಯಕ್ಕೆ ಹೋಗುತ್ತಾರೆ. ಆ ರಾಜ್ಯಕ್ಕೆ ತೆರಿಗೆ ಸೇರುತ್ತಿದೆ. ಸಾಪ್ಟವೇರ್‌ನ ಸಮಸ್ಯೆ ಉಂಟಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ತೆರಿಗೆ ಪಾವತಿಸಲು ಸರಳ ಮಾರ್ಗ ಕಂಡು ಹಿಡಿಯಲಾಗಿದ್ದು, ಬಿ ಟು ಸಿ ಗೆ ಸಹಜ್ ಬಿ ಟು ಬಿ ಮತ್ತು ಬಿ ಟು ಸಿ ಗೆ ಸುಗಮ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. 5 ಕೋಟಿ ರೂ. ಕಡಿಮೆ ವ್ಯವಹಾರ ಮಾಡುವವರು ಶೇ. 92 ರಷ್ಟಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡುತ್ತಾರೆ. ಶೇ. 20 ರಷ್ಟು ವ್ಯವಹಾರ ಮಾಡುವವರು ತೆರಿಗೆ ವ್ಯಾಪ್ತಿಗೆ ಒಳ ಪಟ್ಟಿಲ್ಲ ಎಂದು ಹೇಳಿದರು.
ಪ್ರತಿ ವರ್ಷ ಡಿಸೆಂಬರ್ 31 ರೊಳಗೆ ತೆರಿಗೆ ಪಾವತಿ ಕಡ್ಡಾಯ ಮಾಡಲಾಗಿದ್ದು, ಹೊಸ ಆದಾಯ ರಿಟರ್ನ್ ಫಾರ್ಮ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕಾಮನ್ ಅಕೌಂಟಿಂಗ್ ಸಾಪ್ಟವೇರ್ ಡೆವಲೆಪ್ ಮಾಡಲು ಚಿಂತಿಸಲಾಗಿದ್ದು ಅದಕ್ಕಾಗಿ 18 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.