Advertisement

ಚಂದನವನಕ್ಕೆ WWE ಖ್ಯಾತಿಯ ದಿ ಗ್ರೇಟ್ ಖಲಿ ಎಂಟ್ರಿ –‘ಕೆಂಡದ ಸೆರಗು’ಚಿತ್ರದಲ್ಲಿ ನಟನೆ

02:21 PM Mar 04, 2023 | Team Udayavani |

ಬೆಂಗಳೂರು: ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಕೆಂಡದ ಸೆರಗುʼ. ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಕುಸ್ತಿ ಕುರಿತ ಸಿನಿಮಾ. ಭೂಮಿ ಶೆಟ್ಟಿ, ಮಾಲಾಶ್ರೀ ಮುಖ್ಯ ತಾರಾಬಳಗದ ಈ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ.

Advertisement

‘ಕೆಂಡದ ಸೆರಗು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಜಗತ್ತಿಗೆ ವರ್ಲ್ಡ್ ಚಾಂಪಿಯನ್ ಕುಸ್ತಿ ಪಟು ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟಿದ್ದಾರೆ.

ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಅವರೇ ಬರೆದ ಕಾದಂಬರಿ ‘ಕೆಂಡದ ಸೆರಗುʼಆಧರಿಸಿದ ಸಿನಿಮಾ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರ ಕುಸ್ತಿ ಪಟು ಕಥೆ ಹೇಳಲಿದೆ. ಕಮರ್ಶಿಯಲ್ ಎಳೆಯಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಾಗುತ್ತಿದ್ದು, ಇದೀಗ  ನಿರ್ದೇಶಕ ರಾಕಿ ಸೋಮ್ಲಿ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿಯನ್ನು ಕರೆ ತರುವ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದಾರೆ.

ಇದನ್ನೂ ಓದಿ: 18 ರೂ. ಸಂಬಳ ಪಡೆಯುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ…ಕಾರ್ಕಳ ಮೂಲದ ಜಯರಾಮ್ ಬನಾನ್ ಯಶೋಗಾಥೆ

ನಿರ್ದೇಶಕ ರಾಕಿ ಸೋಮ್ಲಿ ದಿ ಗ್ರೇಟ್ ಖಲಿಯನ್ನು ಭೇಟಿ ಮಾಡಿ ಸಿನಿಮಾ ಕಥೆ ಹಾಗೂ ಅವರ ಪಾತ್ರದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಕೇಳಿ ಥ್ರಿಲ್ ಆಗಿರುವ ಖಲಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ  ಎಂಟ್ರಿ ಕೊಡುತ್ತಿದ್ದಾರೆ ಖಲಿ. ಸದ್ಯದಲ್ಲೇ ಖಲಿ ಚಿತ್ರತಂಡ ಸೇರಿಕೊಳ್ಳಲಿದ್ದು, ಚಿತ್ರೀಕರಣ ಆರಂಭವಾಗಲಿದೆ.

Advertisement

ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ.

ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next