Advertisement

“ಭಾರತೀಯ ಸಂಸ್ಕೃತಿಯಲ್ಲಿ ಮಾತಾಪಿತರಿಗೆ ಮೊದಲ ಸ್ಥಾನ’

12:50 AM Jan 18, 2019 | Team Udayavani |

ಕೋಟ: ಭಾರತೀಯ ಸಂಸ್ಕೃತಿಯಲ್ಲಿ ಮಾತಾ ಪಿತರಿಗೆ ಮೊದಲ ಸ್ಥಾನ, ಅವರೆಂದಿಗೂ ಪೂಜ್ಯರು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಎಂದು ಬಾಳೆಕುದ್ರು ಹಂಗಾರಕಟ್ಟೆಯ ಶ್ರೀಮಠದ ಶ್ರೀನƒಸಿಂಹಾಶ್ರಮ ಸ್ವಾಮೀಜಿ ಹೇಳಿದರು.

Advertisement

ಹಂಗಾರಕಟ್ಟೆ-ಬಾಳೆಕುದ್ರುವಿನ ಶ್ರೀಮಠದಲ್ಲಿ ಸುದ್ದಿಮನೆ ಮಾತಾ ಪಿತƒ ವಂದನೆ ಅಭಿಯಾನ ಹಾಗೂ ಪ್ರಾಕೃತಿಕ ಸಮತೋಲನಕ್ಕಾಗಿ ವಿವಿಧ ಕಡೆ ನಡೆಸಿದ ದ್ವಾದಶಾವೃತ್ತಿ ಶ್ರಿವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಪೂರ್ವೋತ್ತರ ಮೀಮಾಂಸಕ ಕೆ.ಎಸ್‌. ನಿತ್ಯಾನಂದ ಸ್ವಾಮೀಜಿ  ಮಾತನಾಡಿ, ಮಕ್ಕಳಿಗೆ ತಾಯಿ ಮೊದಲ ಗುರು. ಶಾಲಾ ಪಾಠ ಮಾತ್ರ ಜ್ಞಾನವಲ್ಲ ಇತರ ಜೀವನ ಶಿಕ್ಷಣವನ್ನು ಕಲಿಸಿಕೊಡಬೇಕಿದೆ. ಸ್ಪರ್ಧಾತ್ಮಕ ಬದುಕಿಗೆ ಬೆಂಬಲ ಕೊಡಬೇಡಿ. ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡುವ ಪ್ರಯತ್ನ ಮಾಡಿರಿ ಎಂದರು.

ಮಾತಾಪಿತƒ ವಂದನೆ ಅಭಿಯಾನ ಹಾಗೂ ದ್ವಾದಶಾವೃತ್ತಿ ಶ್ರೀವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣದಲ್ಲಿ ಸಹಕಾರ ನೀಡಿದವರನ್ನು ಗೌರವಿಸಲಾ ಯಿತು.ಧಾರ್ಮಿಕ ಹಾಗೂ ಸಾಮಾಜಿಕ ಸೇವಾಕರ್ತರಾದ ಬಿಜೂರು ರಾಮಕೃಷ್ಣ ಶೇರೆಗಾರ್‌, ಸಮಿತಿಯ ಕಾರ್ಯದರ್ಶಿ ರಶ್ಮಿರಾಜ್‌, ಭೂಷಣ್‌ ಭಟ್‌  ಉಪಸ್ಥಿತರಿದ್ದರು.ಅಭಿಯಾನ ಸಂಚಾಲಕ ಸಂತೋಷ ಕೋಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next