Advertisement
“ಎ’ ವಿಭಾಗದ ಮೊದಲ 3 ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಕರ್ನಾಟಕಕ್ಕೆ ಸತತ 4ನೇ ಗೆಲುವಿಗೆ ಪ್ರಯತ್ನ ಮಾಡಲಿಲ್ಲ. 348 ರನ್ನುಗಳ ಭಾರೀ ಇನ್ನಿಂಗ್ಸ್ ಮುನ್ನಡೆ ಗಳಿಸಿದರೂ ದಿಲ್ಲಿಗೆ ಫಾಲೋಆನ್ ಹೇರಲು ರಾಜ್ಯ ತಂಡ ಮುಂದಾಗಲಿಲ್ಲ. ಬೌಲರ್‌ಗಳಿಗೆ ವಿಶ್ರಾಂತಿ ನೀಡಲು ವಿನಯ್ ಕುಮಾರ್ ನಿರ್ಧರಿಸಿದರು. ಇದರಿಂದ ಕರ್ನಾಟಕ ಒಂದಿಷ್ಟು ಬ್ಯಾಟಿಂಗ್ ಅಭ್ಯಾಸ ನಡೆಸಿತು.
Related Articles
Advertisement
24 ರನ್ನಿಗೆ ಬಿತ್ತು 6 ವಿಕೆಟ್!4ಕ್ಕೆ 277 ರನ್ ಗಳಿಸಿ 3ನೇ ದಿನದಾಟ ಮುಗಿಸಿದ್ದ ದಿಲ್ಲಿ ಅಂತಿಮ ದಿನ ರನ್ ರಾಶಿ ಪೇರಿಸಬಹುದೆಂಬ ನಿರೀಕ್ಷೆ ಬಲವಾಗಿತ್ತು. ಗೌತಮ್ ಗಂಭೀರ್ ಅಜೇಯ ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡದ್ದೂ ಈ ನಿರೀಕ್ಷೆಗೆ ಕಾರಣವಾಗಿತ್ತು. ಆದರೆ ಕರ್ನಾಟಕದ, ಅದರಲ್ಲೂ ಆಭಿಮನ್ಯು ಮಿಥುನ್ ದಾಳಿಗೆ ತತ್ತರಿಸಿದ ದಿಲ್ಲಿ ನಾಟಕೀಯ ಕುಸಿತವೊಂದನ್ನು ಕಂಡು 301 ರನ್ನಿಗೆ ಸರ್ವಪತನ ಕಂಡಿತು. ಕೇವಲ 24 ರನ್ ಗಳಿಸುವಷ್ಟರಲ್ಲಿ ದಿಲ್ಲಿಯ ಉಳಿದ ಆರೂ ವಿಕೆಟ್‌ಗಳು ಹಾರಿಹೋಗಿದ್ದವು. ಇದಕ್ಕಾಗಿ ಕರ್ನಾಟಕ ಎಸೆದದ್ದು 11 ಓವರ್ ಮಾತ್ರ. ಅಕಸ್ಮಾತ್ ದಿಲ್ಲಿಗೆ ಫಾಲೋಆನ್ ಹೇರಿದ್ದೇ ಆದಲ್ಲಿ, ಇಂಥದೇ ಕುಸಿತವೊಂದು ಪುನರಾವರ್ತನೆಗೊಂಡು ಪಂದ್ಯ ರೋಚಕ ಅಂತ್ಯ ಕಾಣುತ್ತಿತ್ತೋ ಏನೋ! ದಿಲ್ಲಿ ಕುಸಿತದಲ್ಲಿ ವೇಗಿ ಅಭಿಮನ್ಯು ಮಿಥುನ್ ಪಾತ್ರ ನಿರ್ಣಾಯಕವಾಗಿತ್ತು. ಅವರು 70 ರನ್ನಿತ್ತು 5 ವಿಕೆಟ್ ಹಾರಿಸಿದರು. ಮಿಥುನ್ ದಿನದ ಮೊದಲ ಓವರಿನಲ್ಲೇ ಮಿಲಿಂದ್ ಮತ್ತು ಮನನ್ ಶರ್ಮ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿ ದಿಲ್ಲಿಯ ದಿಕ್ಕು ತಪ್ಪಿಸಿದರು. ಬಿನ್ನಿ 2 ವಿಕೆಟ್ ಕಿತ್ತರು. 135 ರನ್ ಮಾಡಿ ಆಡುತ್ತಿದ್ದ ಗೌತಮ್ ಗಂಭೀರ್ 144ಕ್ಕೆ ಆಟ ಮುಗಿಸಿದರು (244 ಎಸೆತ, 22 ಬೌಂಡರಿ). ಸಂಕ್ಷಿಪ್ತ ಸ್ಕೋರ್: ಕರ್ನಾಟಕ-649 ಮತ್ತು 3 ವಿಕೆಟಿಗೆ 235 (ರಾಹುಲ್ 92, ಸಮರ್ಥ್ 47, ಪಾಂಡೆ ಔಟಾಗದೆ 34, ನಾಯರ್ ಔಟಾಗದೆ 33, ಅಗರ್ವಾಲ್ 23). ದಿಲ್ಲಿ-301 (ಗಂಭೀರ್ 144, ಶೋರಿ 64, ಪಂತ್ 41, ಮಿಥುನ್ 70ಕ್ಕೆ 5, ಬಿನ್ನಿ 39ಕ್ಕೆ 2). ಪಂದ್ಯಶ್ರೇಷ್ಠ: ಸ್ಟುವರ್ಟ್ ಬಿನ್ನಿ. ಅಂಕ: ಕರ್ನಾಟಕ-3, ದಿಲ್ಲಿ-1.