Advertisement
ಅದರಂತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದ 6.35 ಲಕ್ಷ ಮತದಾರರು ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿದ್ದಾರೆ. ವಿಶೇಷ ಅಭಿಯಾನದ ವೇಳೆ ಹೆಸರು ಸೇರ್ಪಡೆಗೆ 7,54,829 ಅರ್ಜಿಗಳು ಸ್ವೀಕೃತಗೊಂಡಿದ್ದು, 7,21,653 ಅರ್ಜಿಗಳು ಅಂಗೀಕಾರವಾಗಿವೆ. ಅದೇ ರೀತಿ ಹೆಸರು ತೆಗೆದು ಹಾಕಲು 7,59,277 ಅರ್ಜಿಗಳು ಸ್ವೀಕೃತವಾಗಿದ್ದು, 7,52,901 ಅರ್ಜಿಗಳು ಅಂಗೀಕೃತಗೊಂಡಿವೆ. ಜತೆಗೆ, ತಿದ್ದುಪಡಿಗಾಗಿ 2,31,376 ಅರ್ಜಿಗಳು ಬಂದಿದ್ದು, ಈ ಪೈಕಿ 2,25,306 ಅರ್ಜಿಗಳು ಅಂಗಿಕೃತಗೊಂಡಿವೆ ಎಂದು ವಿವರಿಸಿದರು.
Related Articles
Advertisement
1.14 ಲಕ್ಷ ನಕಲಿ ಗುರುತಿನ ಚೀಟಿ ಪತ್ತೆ: ರಾಜ್ಯದಲ್ಲಿ 1,14,377 ಭಾವಚಿತ್ರ ಪುನರಾವರ್ತನೆಯುಳ್ಳ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಕ್ರಮ ಜರುಗಿಸಲಾಗಿದೆ. ಇನ್ನು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪತ್ತೆಯಾದ ಭಾವಚಿತ್ರ ಪುನರಾವರ್ತನೆ ಪ್ರಕರಣಗಳ ಪೈಕಿ 54,140 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. 64,600 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
1.82 ಲಕ್ಷ ಭಾವಚಿತ್ರಗಳಿಲ್ಲದ ಪ್ರಕರಣಗಳನ್ನು ಗುರುತಿಸಿದ್ದು, ಈಗಾಗಲೇ 1.47 ಲಕ್ಷ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ 34 ಸಾವಿರ ಪ್ರಕರಣ ಬಾಕಿಯಿದ್ದು, ಮತದಾರರು ಕೆಲಸದ ನಿಮಿತ್ತ ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಇದರೊಂದಿಗೆ 10.41 ಲಕ್ಷ ಮತದಾರರ ಹೆಸರು ಪುನರಾವರ್ತನೆಗೊಂಡ ಪ್ರಕರಣಗಳು ಪತ್ತೆಯಾಗಿದ್ದು, 31,372 ಪ್ರಕರಣಗಳಲ್ಲಿ ಕ್ರಮ ಜರುಗಿಸಲಾಗಿದೆ. ಹೀಗಾಗಿ, ಗುರುತಿನ ಚೀಟಿಯಲ್ಲಿ ಭಾವಚಿತ್ರ ಇಲ್ಲದವರು ತಮ್ಮ ಭಾವಚಿತ್ರಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಪಕ್ಷಗಳು ಮತಗಟ್ಟೆಏಜೆಂಟ್ ನೇಮಿಸಬೇಕು ರಾಜಕೀಯ ಪಕ್ಷಗಳು ಆಯೋಗದಿಂದ ರಾಜ್ಯದಾದ್ಯಂತ ಗುರುತಿಸಿರುವ 58,186 ಮತಗಟ್ಟೆಗಳಿಗೆ ಮತಗಟ್ಟೆ ಏಜೆಂಟ್ ನೇಮಿಸಲು ಮುಂದಾಗಬೇಕು. ಆ ಮೂಲಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದವರು, ಅನಧಿಕೃತವಾಗಿ ಸೇರ್ಪಡೆಯಾದವರನ್ನು ಗುರುತಿಸುವ ಕೆಲಸ ಮಾಡಬೇಕು. ಸದ್ಯ ಕಾಂಗ್ರೆಸ್ ಪಕ್ಷದಿಂದ 9,497 ಮತಗಟ್ಟೆಗಳಿಗೆ ಏಜೆಂಟ್ ನೇಮಿಸಿದ್ದು, ಬಿಜೆಪಿಯಿಂದ 14,696, ಜೆಡಿಎಸ್‌ನಿಂದ 1,038 ಹಾಗೂ ಬಿಎಸ್‌ಪಿಯಿಂದ 950 ಮತಗಟ್ಟೆಗಳಿಗೆ ಏಜೆಂಟ್ ನೇಮಿಸಲಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.