Advertisement

ಸಂಪೂರ್ಣ ನಗದು ರಹಿತ ವಹಿವಾಟು ಅಸಾಧ್ಯ

04:14 PM May 20, 2017 | |

ಹುಬ್ಬಳ್ಳಿ: ದೇಶದಲ್ಲಿ ನಗದು ರಹಿತ ವಹಿವಾಟು ಅಸಾಧ್ಯ, ಬದಲಾಗಿ ನಗದು ವಹಿವಾಟು ಕಡಿಮೆ ಮಾಡಬಹುದು ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ರವೀಂದ್ರ ಯಲಿಗಾರ ಹೇಳಿದರು. 

Advertisement

ಇಲ್ಲಿನ ಆದರ್ಶ ನಗರ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸೌಹಾರ್ದ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಳಿಗೆ ಆದಾಯ ತೆರಿಗೆ ಕಾನೂನಿನ ಇತ್ತೀಚಿನ ತಿದ್ದುಪಡಿಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಬದಲಾವಣೆ ಜಗದ ನಿಯಮ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯ. ಆದರೆ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಅವುಗಳ ಪರಿಹಾರಕ್ಕೆ ಮೊದಲು ಆದ್ಯತೆ ನೀಡಬೇಕು ಎಂದರು. ಸಹಾಕಾರಿ ಸಂಸ್ಥೆಗಳು ಕೆವೈಸಿ ಪ್ರಕಾರವೇ ಸದಸ್ಯತ್ವ ಮಾಡಿಕೊಳ್ಳಬೇಕು, ಆದಾಯ ತೆರಿಗೆ ಇಲಾಖೆಯಿಂದ ಸಂಸ್ಥೆಗಳನ್ನು ಮುಕ್ತ ಮಾಡಬೇಕು. 

ಸದ್ಯ ಡಿಜಿಟಲೀಕರಣದಲ್ಲಿ ಆಗಿರುವ ತಿದ್ದುಪಡಿಗಳ ಕುರಿತು ಸರಕಾರ ಗಮನ ಹರಿಸಿ ಸಹಕಾರಿ ರಂಗದ ಬೆಳವಣಿಗಗೆ ಒತ್ತು ನೀಡಬೇಕು. ಸರಕಾರ ಮಾಡುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂದರು. 

ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಸದಸ್ಯರ ಬೇಡಿಕೆ ಹಾಗೂ ಆರ್ಥಿಕ ಸಹಾಯ, ಸಹಕಾರ ನೀಡುವುದಕ್ಕಾಗಿ ಸಹಕಾರಿ ಸಂಸ್ಥೆಗಳು ಬೆಳೆಯುತ್ತಿವೆ. ಆದರೆ ಕೇಂದ್ರ ಸರಕಾರದವರು ಸಹಕಾರಿ ಸಂಸ್ಥೆಗಳ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಈ ಕುರಿತು ಎಲ್ಲರು ಜಾಗೃತಗೊಳ್ಳಬೇಕು ಎಂದರು. 

Advertisement

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ಎಂ.ಬಿ. ಕಲಾಲ ಮಾತನಾಡಿ, ಇತ್ತೀಚಿನ ಕಾನೂನು ತಿದ್ದುಪಡಿಗಳಿಂದ ಸಹಕಾರಿ ಸಂಸ್ಥೆಗಳು ನೆಲಕಚ್ಚುತ್ತಿವೆ. ಇಂದಿನ ಕಾನೂನುಗಳನ್ನು ನೋಡಿದರೇ ಭಯವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಸಹಕಾರಿ ಸಂಸ್ಥೆಗಳ ಕಾನೂನಿನಲ್ಲಿ ತಿದ್ದುಪಡಿ ಮಾಡಿರುವುದರಲ್ಲಿ ಪರಿಶೀಲನೆ ಮಾಡುವ ಮೂಲಕ ಆದಾಯ ಇಲಾಖೆಯಿಂದ ಮುಕ್ತಗೊಳಿಸಬೇಕೆಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಸಹ ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಬರುವೆ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರಸನ್ನ ವಿಶೇಷ ತರಬೇತಿ ಹಾಗೂ ಮಾಹಿತಿ ನೀಡಿದರು. ಜಿ.ಎಸ್‌. ಟೋಪಣ್ಣವರ, ಆರ್‌.ಎನ್‌. ದೇಶಪಾಂಡೆ, ಭಾಸ್ಕರ ಹೆಗಡೆ ಕಾಗೇರಿ, ಅಜಯ ಮಾಲೀಪಾಟೀಲ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next