Advertisement
ಬರದ ಕಾರ್ಮೋಡಕ್ಕೆ ಸಿಲುಕಿ ತೀವ್ರ ಸಂಕಷ್ಟ ದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಇದೀಗ ಟೊಮೆಟೋ ಬೆಲೆ ಕುಸಿತ ಸಹಜವಾಗಿಯೇ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಉತ್ತಮ ಬೆಲೆ ನಿರೀ ಕ್ಷಿಸಿದ್ದ ರೈತರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಹಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ಟೊಮೆ ಟೋ ಬೆಳೆಗೆ ಬಂಪರ್ ಬೆಲೆ ಬಂದಿತ್ತು. ಬೆಲೆ ಹೆಚ್ಚಳ ನೋಡಿ ಗ್ರಾಹಕರು ಕಂಗಾಲಾಗಿದ್ದರು. ಆದರೆ ಇದೀಗ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಕೇಳ್ಳೋರು ಇಲ್ಲವಾಗಿದೆ.
Related Articles
Advertisement
ಟೊಮೆಟೋ ಪ್ರಮುಖ ಬೆಳೆ: ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಟೊಮೆಟೋವನ್ನು ಸಾವಿ ರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ರೈತರು ಇದ್ದಾರೆ. ಸದ್ಯ ಜಿಲ್ಲಾದ್ಯಂತ ಬರದ ಕಾರ್ಮೋಡ ಆವರಿಸಿ ಮಳೆ ಬೆಳೆ ಇಲ್ಲದೇ ಅಂತರ್ಜಲ ಕುಸಿತ ಗೊಂಡು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ.
ಆದರೂ ರೈತರು ಉತ್ತಮ ಬೆಲೆ ಸಿಗುವ ನಿರೀಕ್ಷೆ ಯೊಂದಿಗೆ ಅಲ್ಪಸ್ವಲ್ಪ ಇರುವ ನೀರನ್ನು ಬಳಸಿಕೊಂಡು ಬೆಳೆದ ಟೊಮೆಟೋಗೆ ಇದೀಗ ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿರುವುದು ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮೆಟೋ ಬೆಳೆದ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಹಳಷ್ಟು ತೋಟಗಳಲ್ಲಿ ಕೊಯ್ಲಿಗೆ ಬಂದಿರುವ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಹಾಗೆ ಬಿಟ್ಟಿರುವ ದೃಶ್ಯಗಳು ಕಾಣುತ್ತಿವೆ.
ಒಟ್ಟಿನಲ್ಲಿ ಬರದಿಂದ ತತ್ತರಿಸಿರುವ ಜಿಲ್ಲೆಯ ಅನ್ನ ದಾತರಿಗೆ ಇದೀಗ ಟೊಮೆಟೋ ಬೆಲೆ ಮಾರು ಕಟ್ಟೆಯಲ್ಲಿ ಕುಸಿದಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಸಾಲ, ಸೂಲ ಮಾಡಿ ಟೊಮೆಟೋ ಬೆಳೆದಿರುವ ರೈತರ ಪರಿಸ್ಥಿತಿ ಹೇಳತೀರದಾಗಿದ್ದು, ಬೆಲೆ ಕುಸಿತದಿಂದ ಟೊಮೆಟೋ ಬೆಳೆಗಾರರು ಕಣ್ಣೀರು ಸುರಿಸು ವಂತಾಗಿದೆ.
* ಕಾಗತಿ ನಾಗರಾಜಪ್ಪ