Advertisement

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

12:30 PM Dec 26, 2024 | Team Udayavani |

ಕಝಾಕಿಸ್ತಾನದ ಅಕ್ಟೌದಲ್ಲಿ ಬುಧವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 38 ಮಂದಿ ಸಾವನ್ನಪಿದ್ದು ಹಲವು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ವಿಮಾನ ಅಪಘಾತ ಮೊದಲು ಮತ್ತೆ ಅಪಘಾತದ ಬಳಿಕದ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

Advertisement

ಎಂಬ್ರೇರ್‌ 190 ವಿಮಾನವು ಅಜೆರ್ಬೈಜಾನ್‌ ನ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು ಈ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ವಿಮಾನ ಇನ್ನೇನು ಬಯಲು ಪ್ರದೇಶದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ವೇಳೆ ವಿಮಾನದ ಒಳಗಿದ್ದ ಪ್ರಯಾಣಿಕನೋರ್ವ ಅಂತಿಮ ಕ್ಷಣದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಅದರಲ್ಲಿ ಭಯಭೀತರಾದ ಪ್ರಯಾಣಿಕರು ದೇವರನ್ನು ನೆನೆದು ಪ್ರಾರ್ಥಿಸುವ ಆಡಿಯೋ ಕೇಳಿದೆ, ಜೊತೆಗೆ ಪ್ರಯಾಣಿಕರ ಬಳಿ ಆಕ್ಸಿಜೆನ್ ಮಾಸ್ಕ್ ನೇತಾಡುವುದು ಕಾಣಬಹುದು ಕೊನೆಯದಾಗಿ ವಿಮಾನ ಬೆಂಕಿ ಹೊತ್ತಿಕೊಂಡು ಬಯಲು ಪ್ರದೇಶದಲ್ಲಿ ಪತನವಾಗುತ್ತದೆ ಇದಾದ ಬಳಿಕ ಕೆಲ ಪ್ರಯಾಣಿಕರು ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಕ್ಯಾಬಿನ್ ಒಳಗೆ ಬಿದ್ದಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಮಾನ ದುರಂತದಲ್ಲಿ ಹೆಚ್ಚಿನ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next