Advertisement
ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನವು ಅಭಿವೃದ್ಧಿ ಪ್ರಾಧಿಕಾರ ಆದ ಮೇಲೆ ಭಕ್ತರಿಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಟ್ಟಿದ್ದು, ಅಷ್ಟೇ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.
Related Articles
Advertisement
ಗಂಟೆಗಟ್ಟಲೆಯಾದರೂ ಬಸ್ ಬಾರದ ಹಿನ್ನೆಲೆ ರೊಚ್ಚಿಗೆದ್ದ ಭಕ್ತರು ರಸ್ತೆಗಿಳಿದು ಬಸ್ಸಿಗಾಗಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಶ್ರೀಕಾಂತ್ ಅವರು ತಕ್ಷಣವೇ ರಸ್ತೆ ಸಾರಿಗೆ ಅಧಿಕಾರಿಗಳನ್ನು ಬಸ್ ಬಿಡುವಂತೆ ತಿಳಿಸಿದಾಗ ಬಸ್ ಬಿಟ್ಟ ನಂತರ ಭಕ್ತರು ಮಾದಪ್ಪನ ದರ್ಶನ ಪಡೆಯಲು ತೆರಳಿದರು.
ಪ್ರತಿ ತಿಂಗಳು ಅಮಾವ್ಯಾಸೆ ದಿನದಂದು ಹಾಗೂ ವಿಶೇಷ ಹಬ್ಬದ ದಿನಗಳಲ್ಲಿ ರಸ್ತೆ ಸಾರಿಗೆ ಬಸ್‌ಗಳು ಭಕ್ತರ ಅನುಗುಣವಾಗಿ ಬಸ್ ಬಿಡದೆ ಕಡಿಮೆ ಬಸ್ ಬಿಡುತ್ತಿರುವುದರಿಂದ ಭಕ್ತರು ಸರಿಯಾದ ಸಮಯಕ್ಕೆ ಬಸ್ ಸಿಗದೆ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು,
ಇದರ ಬಗ್ಗೆ ಪ್ರತಿ ತಿಂಗಳು ಪ್ರತಿಕೆಯಲ್ಲಿ ಪ್ರಕಟಣೆಯಾದರೂ ಸಹ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರು ಸಹ ಇತ್ತ ಗಮನ ಹರಿಸದಿರುವುದರಿಂದ ಭಕ್ತರು ಮಾತ್ರ ತಮ್ಮ ಸಂಕಷ್ಟವನ್ನು ಕೇಳಲು ಯಾರು ಇಲ್ಲದಂತೆ ಆಗಿದೆ.
ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರು ತಮ್ಮ ಹರಕೆಗಳನ್ನು ತೀರಿಸಿ, ಅಷ್ಟೋ ಇಷ್ಟೋ ಗೋಲಕಕ್ಕೆ ಹಣ ಹಾಕಿ ಹರಕೆಗಳನ್ನು ತೀರಿಸಿಕೊಳ್ಳುವುದರಿಂದ ತಿಂಗಳಲ್ಲಿ ಒಂದರಿಂದ ಒಂದುವರೆ ಕೋಟಿ ರೂ. ವರೆಗೂ ಆದಾಯ ಬರುತ್ತಿದ್ದು, ಪ್ರಾಧಿಕಾರದ ಅಧಿಕಾರಿಗಳು ಸಹ ಭಕ್ತರಿಗೆ ಬಸ್ಸಿನ ಪರದಾಟದ ಬಗ್ಗೆ ಗಮನ ಹರಿಸದಿರವುದಕ್ಕೆ ಭಕ್ತರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರತಿ ಅಮಾವ್ಯಾಸೆ ತಿಂಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆಯುತ್ತಿದ್ದು ಬಸ್ಸಿಗಾಗಿ ಗಂಟೆ ಗಂಟಲೆ ಕಾದು ನಿಂತರೂ ಸಹ ರಸ್ತೆ ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಪ್ರತಿ ತಿಂಗಳು ಸಹ ಹೀಗೆ ಮಾಡುತ್ತಿದ್ದಾರೆ.-ದೊರೆಭಗವಾನ್, ಮಾದಪ್ಪನ ಭಕ್ತ