ಬೆಂಗಳೂರು: ಇಂದು ವಿಶ್ವ ಹಾಲು ದಿನ. ಕರ್ನಾಟಕ ಹಾಲಿನ ಉತ್ಪನ್ನದಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದು. ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಕರ್ನಾಟಕದ ಹಾಲಿಗೆ ಬಹು ಬೇಡಿಕೆಯಿದೆ. ರಾಜ್ಯದ ರೈತ ಕುಟುಂಬಗಳಲ್ಲಿ ಶೇ.70 ಭಾಗದಷ್ಟು ಹಾಲು ಉತ್ಪಾದನೆಯಲ್ಲೂ ತೊಡಗಿದ್ದು, ಹಾಲು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆರೋಗ್ಯ ಕಾಪಾಡುವ ಜತೆಗೆ ರೈತಾಪಿ ಸಮುದಾಯದ ಆರ್ಥಿಕ ಬಲವರ್ಧನೆಗೂ ಕಾರಣವಾಗಿದೆ.
ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಹಾಲಿಗೆ ಪ್ರೋತ್ಸಾಹ ಧನ ಸಹ ನೀಡುತ್ತಿರುವುದರಿಂದ ಲಕ್ಷಾಂತರ ಕುಟುಂಬಗಳು ಹಾಲು ಉತ್ಪಾದನೆಯನ್ನೇ ಅವಲಂಬಿಸಿವೆ. ರಾಜ್ಯದಲ್ಲಿ ನಿತ್ಯ ಸುಮಾರು ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು ಕೆಎಂಎಫ್ ಮೂಲಕ ಶೇ.70 ರಷ್ಟು ಮಾರಾಟವಾದರೆ ಉಳಿದ ಶೇ.30 ಖಾಸಗಿ ವಲಯದ ಮೂಲಕವೂ ಮಾರಾಟವಾಗುತ್ತಿದೆ. ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರ ಪ್ರಯತ್ನದಿಂದ ಸ್ಥಾಪನೆಗೊಂಡ ಕೆಎಂಎಫ್ ರಾಜ್ಯದ ಹೆಗ್ಗುರುತಾಗಿದೆ.
ರಾಜ್ಯದ ಹನ್ನೆರಡು ಜಿಲ್ಲೆಗಳಿಗೆ ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹುದ್ದೂರ್ ಶಾಸಿOಉ ಅವರನ್ನು ಕರೆಸಿ ಹಾಲು ಒಕ್ಕೂಟಗಳನ್ನು ಅವರು ಉದ್ಘಾಟಿಸುವ ಮೂಲಕ ಕ್ಷೀರ ಕ್ರಾಂತಿಯ ಹರಿಕಾರ ಎಂದೇ ಪ್ರಸಿದಿಟಛಿ ಪಡೆದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದ ಎಂ.ವಿ.ಕೃಷ್ಣಪ್ಪ ಅವರು ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚು ಒತ್ತು ದೊರಕಿಸಿಕೊಡುವ ನಿಟ್ಟಿನಲ್ಲಿ ರೈತರಿಗೆ ಉಪ ಕಸುಬುಗಳಲ್ಲಿ ಒಂದಾಗಿದ್ದ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ್ದರು.
ಜಾನುವಾರು ಸಂಪತ್ತು ಬೇಸಾಯಗಾರರು ಆರ್ಥಿಕವಾಗಿ ಅಭಿವೃದಿಟಛಿಗೆ ನೆರವಾಗಬಹುದು ಎಂದು ಮನಗಂಡು ಕೆಎಂಎಫ್ ಸ್ಥಾಪನೆಗೆ ಕಾರಣೀಭೂತರಾದರು. ರಾಜ್ಯದಲ್ಲಿ ಹದಿನಾಲ್ಕು ಹಾಲು ಒಕ್ಕೂಟಗಳಿದ್ದು 9 ಲಕ್ಷ ಹಾಲು ಉತ್ಪಾದಕರು ನಿತ್ಯ 70 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯದ ರೈತರು ಅದರಲ್ಲೂ ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ ,ಚಿತ್ರದುರ್ಗ ಜಿಲ್ಲೆಗಳಲ್ಲಂತೂ ರೈತರ ಆರ್ಥಿಕ ಬದುಕು ಹಾಲಿನ ಮೇಲೆಯೇ ಅವಲಂಬನೆಯಾಗಿದೆ. ಮಳೆ ಬಾರದೆ ಕೃಷಿ ಕೈಕೊಟ್ಟರೆ ಪಶು ಸಂಗೋಪನೆಯೇ ದಾರಿ.
ಪಶು ಸಂಗೋಪನೆಯಲ್ಲಿ ಹಸು ಸಾಕಾಣಿಕೆ ಪ್ರಮುಖ. ಹಾಲು ಉತ್ಪಾದನೆ ಉಪ ಕಸುಬು ಮಾಡಿ ಕೊಂಡು ಲಕ್ಷಾಂತರ ಕುಟುಂಬಗಳು ಇಂದು ಜೀವನ ಸಾಗಿಸುತ್ತಿವೆ. ರೈತರು ಉತ್ಪಾದಿಸಿದ ಹಾಲು ಸ್ವೀಕರಿಸುವ ಮೂಲಕ ರಾಜ್ಯದ ರೈತರ ಪಾಲಿಗೆ ಕೆಎಂಎಫ್ ಸಂಜೀವಿನಿ ಯಾಗಿದೆ. ತಿರುಪತಿಯಲ್ಲಿ ವೆಂಕಟೇಶ್ವರನ ಪ್ರಸಾದಕ್ಕೆ ಬಳಸುವುದು ನಂದಿನಿ ತುಪ್ಪವನ್ನೇ ಎಂಬುದು ವಿಶೇಷ. ಒಟ್ಟಾರೆ, ಭಾರತೀಯರ ಆಹಾರ ಪದಟಛಿತಿಯಲ್ಲೂ ಹಾಲು ವಿಶೇಷ ಸ್ಥಾನಮಾನ ಗಳಿಸಿದೆ. ಕರ್ನಾಟಕದ ವಿಚಾರದಲ್ಲಂತೂ ಹಾಲು ಆರ್ಥಿಕತೆಯ ಭಾಗವೂ ಆಗಿದೆ.
ಬಡವರಿಗೆ ಉಚಿತ ಹಾಲು ವಿತರಣೆ: ರಾಜ್ಯದಲ್ಲಿ ಉತ್ಪಾದನೆಯಾಗುವ 70 ಲಕ್ಷಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು ಮೊಸರು ಮಾರಾಟವಾಗುತ್ತಿದೆ. 15 ರಿಂದ 20 ಲಕ್ಷ ಲೀಟರ್ ಹಾಲು ಪೌಡರ್ ಮಾಡಲಾಗುತ್ತಿದೆ. ನಂದಿನಿಯ ಉತ್ಪನ್ನಗಳು ಜನಪ್ರಿಯತೆ ಪಡೆದಿವೆ. ಮಕ್ಕಳಿಗೆ ಹಾಲು ಪೂರೈಕೆ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಕೆಲಸವನ್ನೂ ಸರ್ಕಾರ ಮಾಡಿದೆ. ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ಸರ್ಕಾರವೇ ಉಚಿತವಾಗಿ ಬಡವರಿಗೆ ಹಾಲು ವಿತರಿಸಿದ್ದೂ ಇದೆ.
ವಿಶ್ವ ಹಾಲಿನ ದಿನ ಅಂಗವಾಗಿ ಹಾಲಿನ ಮಹತ್ವ ಜನಸಮುದಾಯಕ್ಕೆ ತಿಳಿಯಬೇಕಿದೆ. ಹಾಲು ಎಂದರೆ ಸಂಪೂರ್ಣ ಆಹಾರ. ಹಾಲಿನಲ್ಲಿ ಎ ವಿಟಮಿನ್ ಇರುವುದರಿಂದ ಇದು ಆರೋಗ್ಯ ಹಾಗೂ ಮಾನಸಿಕ , ದೈಹಿಕ ಬೆಳವಣಿಗೆಗೆ ಸಹಕಾರಿ. ಎಲ್ಲ ವಯೋಮಾನದವರಿಗೂ ಹಾಲು ಆಮೃತ ಸಮಾನ.
-ಬಿ.ಸಿ.ಸತೀಶ್, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)