Advertisement
ನಾಲ್ಕು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಟೇಲು ಎಂಬಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಸ್ಥಳೀಯರು ಹಲಗೆ ಹಾಕುತ್ತಿದ್ದು, ಸುಮಾರು ಅರ್ಧ ಕಿ.ಮೀ. ವರೆಗೆ ನೀರು ತುಂಬುತ್ತದೆ. ಕೆರೆ, ಬಾವಿಗಳು ತುಂಬಿ ನೀರಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನೀಗಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಹರಿದು ಹೋಗುವ ನೀರನ್ನು ಅಣೆಕಟ್ಟು ಕಟ್ಟಿ ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇನ್ನು ಎರಡು ತಿಂಗಳು ನೀರಿನ ಸಮಸ್ಯೆ ಇಲ್ಲದೆ ನಿಭಾಯಿಸಬಹುದು. ತಂಪಾದ ವಾತಾವರಣವೂ ಹಿತವೆನಿಸುತ್ತದೆ. ಎಲ್ಲ ಕಡೆಗಳಲ್ಲೂ ಇದನ್ನು ಅನುಸರಿಸಿದರೆ ಪ್ರಯೋಜನಕಾರಿಯಾದೀತು.
ಚಂದ್ರಶೇಖರ ಪ್ರಭು ಗೊಳಿತ್ತಡಿ
ಸ್ಥಳೀಯ ಕೃಷಿಕ ಕೃಷಿಕರಿಗೆ ಲಾಭವಿದೆ
ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ಕಿಂಡಿ ಅಣೆಕಟ್ಟು ಮೂಲಕ ನಿಲ್ಲಿಸಿದರೆ ಕೃಷಿಕರಿಗೆ ಲಾಭವಿದೆ. ಇವುಗಳ ಬಗ್ಗೆ ಸರಕಾರ ಮತ್ತು ಇಲಾಖೆಗಳು ಆದ್ಯತೆ ನೀಡಿದರೆ ಅಂತರ್ಜಲ ಮಟ್ಟ ಇನ್ನಷ್ಟು ಹೆಚ್ಚುತ್ತದೆ, ಬರಗಾಲದ ಛಾಯೆ ಆವರಿಸುವುದನ್ನು ತಡೆಯುತ್ತದೆ. ಅವಕಾಶ ಇದ್ದಲ್ಲೆಲ್ಲ ಗ್ರಾ.ಪಂ.ಗಳು ಕಿಂಡಿ ಅಣೆಕಟ್ಟು ನಿರ್ಮಿಸಲು ಮುಂದಾಗಬೇಕು.
– ಸುಮತಿ ಗಣೇಶ್, ಆನಾಜೆ
ಅಧ್ಯಕ್ಷರು, ನಿಡ್ಪಳ್ಳಿ ಗ್ರಾಮ ಪಂಚಾಯತ್
Related Articles
Advertisement