Advertisement

Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು

03:10 PM Jan 08, 2025 | Team Udayavani |

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್‌ನ ದೊಡ್ಡಳಿಕೆಯಲ್ಲಿ ಪಲ್ಗುಣಿ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಿನಿಂದ ಕಿಲೆಂಜಾರು, ಕುಳವೂರು, ಮುತ್ತೂರು, ಬಡಗುಳಿಪಾಡಿ ಮತ್ತು ಮಳಲಿ ಗ್ರಾಮಗಳ ಕೃಷಿ ಉದ್ದೇಶಿತ ರೈತರ ಜಮೀನುಗಳಿಗೆ ನೀರು ಒದಗಿಸುವ ಎಡದಂಡೆ ಕಾಲುವೆಗೆ ನೀರು ಬಿಡುಗಡೆಗೆ ಮುತ್ತೂರು ಗ್ರಾಮ ಪಂಚಾ ಯತ್‌ ಅಧ್ಯಕ್ಷ ಪ್ರವೀಣ್‌ ಆಳ್ವ ಗುಂಡ್ಯ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅಧ್ಯಕ್ಷ ಪ್ರವೀಣ್‌ ಆಳ್ವ, ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಕಾಲುವೆಯ ದಂಡೆಯ ಉದ್ದಕ್ಕೂ ರಸ್ತೆ ನಿರ್ಮಿಸಿ ಕಾಂಕ್ರೀಟ್‌ ಮಾಡಬೇಕಾಗಿದೆ. ಈ ಬಗ್ಗೆ ನಾನು ಶಾಸಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಎಡದಂಡೆ ಕಾಲುವೆಯಲ್ಲಿ ಪ್ರತಿವರ್ಷ ಹೂಳು ತುಂಬುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಮತ್ತು ಕುಪ್ಪೆಪದವು, ಮುತ್ತೂರು ಗ್ರಾಮ ಪಂಚಾಯತ್‌ ಗಳು ಹೂಳೆತ್ತುವ ಮತ್ತು ಸಕಾಲದಲ್ಲಿ ಕಾಲುವೆಯಲ್ಲಿ ನೀರು ಹರಿಸಲು ಸಹಕಾರ ನೀಡುತ್ತಿದ್ದಾರೆ. ರೈತರ ಪರವಾಗಿ ಅವರನ್ನು ಅಭಿನಂದಿಸುವುದಾಗಿ ಕಾಲುವೆಯ ನೀರು ಸರಬರಾಜು ಉಸ್ತುವಾರಿ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಕುಳವೂರು ಹೇಳಿದರು.

ಮುತ್ತೂರು ಪಂಚಾಯತ್‌ ಉಪಾಧ್ಯಕ್ಷೆ ಸುಷ್ಮಾ ಸಂತೋಷ್‌, ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಸತೀಶ್‌ ಪೂಜಾರಿ ಬಳ್ಳಾಜೆ, ಕುಪ್ಪೆಪದವು ಪಂಚಾಯತ್‌ ಸದಸ್ಯ ನಿತೇಶ್‌ ಕುಮಾರ್‌ ದೊಡ್ಡಳಿಕೆ, ಉಸ್ತುವಾರಿ ಸಮಿತಿಯ ಉಪಾಧ್ಯಕ್ಷ ಉದಯಕುಮಾರ್‌ ಕಂಬಳಿ, ಕಾರ್ಯದರ್ಶಿ ವಿಜಯಕುಮಾರ್‌ ಶೆಟ್ಟಿ ಮೇಗಿನಮನೆ ಕುಳವೂರು, ಕೋಶಾ ಧಿಕಾರಿ ಮಹಾಬಲ ಸಾಲ್ಯಾನ್‌ ಕೊಂದರಪ್ಪು ಉಪಸ್ಥಿತರಿದ್ದರು.

ಮೂರು ತಿಂಗಳು ನೀರು ಒದಗಿಸಲು ಸಾಧ್ಯ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮವಾಗಿರುವ ಈ ನೀರಾವರಿ ಕಾಲುವೆ ಮತ್ತು ಇಲ್ಲಿನ ಪಲ್ಗುಣಿ ನದಿಗೆ ಕಿರು ಅಣೆಕಟ್ಟೆಯನ್ನು ಮದ್ರಾಸ್‌ ಸರಕಾರ 19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ರೈತರ ಜಮೀನಿಗೆ ನೀರು ಹರಿಸಲು 16 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಮಾಡಿತ್ತು. ಅಂದಿನ ಮದ್ರಾಸ್‌ ಸರಕಾರದ ಮುಖ್ಯಮಂತ್ರಿ ಕಾಮರಾಜ್‌ ನಾಡಾರ್‌ ಅಣೆಕಟ್ಟೆಯನ್ನು ಉದ್ಘಾಟಿಸಿದ್ದರು.

Advertisement

5 ಮೀಟರ್‌ ನೀರು ನಿಲುಗಡೆ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈಗ ಅಂದಾಜು 7 ಅಡಿ ನೀರು ಸಂಗ್ರಹವಿದೆ. ಒಟ್ಟು 5 ಗ್ರಾಮಗಳಲ್ಲಿ 16 ಕಿ.ಮೀ. ಉದ್ದದ ಕಾಲುವೆ ನಿರ್ಮಿಸಲಾಗಿತ್ತು. ಆದರೆ ಇದೀಗ 8 ಕಿ.ಮೀ. ಕಾಲುವೆ ಒತ್ತುವರಿಯಾಗಿದ್ದು ಕೇವಲ 8 ಕಿಲೋಮೀಟರ್‌ ದೂರದವರೆಗೆ ಮಾತ್ರ ನೀರು ಹರಿಯುತ್ತಿದೆ. ಸಂಪೂರ್ಣ ಕಾಲುವೆಯಲ್ಲಿ ನೀರು ಹರಿದರೆ ಈಗಿನ 400 ಎಕರೆ ಕೃಷಿ ಭೂಮಿಯ ಬದಲಾಗಿ ದುಪ್ಪಟ್ಟು ಕೃಷಿಗೆ ಡಿಸೆಂಬರ್‌ ತಿಂಗಳಿ ನಿಂದ ಮೂರು ತಿಂಗಳು ನೀರು ಒದಗಿಸಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next