Advertisement

Punjalkatte: ವಾಮದಪದವು-ವೇಣೂರು ಸಂಪರ್ಕ ಇನ್ನೂ ದೂರ!

12:54 PM Dec 17, 2024 | Team Udayavani |

ಪುಂಜಾಲಕಟ್ಟೆ: ಎರಡು ಊರುಗಳನ್ನು ಸಂಪರ್ಕಿಸುವ ಬಹುಕಾಲದ ನಿರೀಕ್ಷೆಯ ಕನಸಿನ ಸೇತುವೆ ಸಹಿತ ಸರ್ವ ಋತು ರಸ್ತೆ ನಿರ್ಮಾಣಕ್ಕೆ ಅನುದಾನ ಲಭಿಸಿ ಸಂಪರ್ಕದ ಕನಸು ನನಸಾದರೂ ಕಾಮಗಾರಿ ವಿಳಂಬದಿಂದಾಗಿ ಜನರ ನಿರೀಕ್ಷೆ ಕೈಗೂಡದೆ ನನೆಗುದಿಗೆ ಬಿದ್ದಿದೆ.

Advertisement

ಬಂಟ್ವಾಳ ತಾಲೂಕು ವಾಮದಪದವಿ ನಿಂದ ಬೆಳ್ತಂಗಡಿ ತಾಲೂಕು ವೇಣೂರನ್ನು ಸಂಪರ್ಕಿಸಲು ಕಳೆದ ಮಾರ್ಚ್‌ನಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಅವರ ಮುತುವರ್ಜಿಯಿಂದ 5.40 ಕೋ.ರೂ ವೆಚ್ಚದಲ್ಲಿ ಈ ತಾಲೂಕುಗಳ ಗಡಿಭಾಗ ದಲ್ಲಿರುವ ಅಜ್ಜಿಬೆಟ್ಟು ಗ್ರಾಮದ ಸಜಂಕಬೆಟ್ಟು ಬಳಿ ಬಜಿರೆ ಹೊಳೆಗೆ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಗೊಂಡಿದ್ದು, ಈ ಭಾಗದ ಜನತೆಯ ಎರಡು ಕಡೆ ಸಂಪರ್ಕದ ದೀರ್ಘ‌ ಕಾಲದ ಕನಸು ನನಸಾಗುತ್ತಿದೆ ಎಂದು ಭಾವಿಸಿದ್ದರು. ಆದರೆ ಸೇತುವೆಯ ಎರಡೂ ಕಡೆ ರಸ್ತೆ ಅಭಿವೃದ್ಧಿ ಕಾಣದೆ ಸುಗಮ ಸಂಚಾರ ಅಸಾಧ್ಯವಾಗಿದೆ.

ಬಂಟ್ವಾಳ ತಾಲೂಕಿನ ಸಜಂಕಬೆಟ್ಟು ಭಾಗದಲ್ಲಿ ಸೇತುವೆ ಬಳಿ ಇಳಿಜಾರು ಪ್ರದೇಶವಿದ್ದು ಮಳೆಗಾಲದಲ್ಲಿ ಹೊಳೆ ನೀರು ಹರಿದು ಬಂದು ಮುಳುಗಡೆಯಾಗುತ್ತದೆ.ಈ ಜಾಗದಲ್ಲಿ ರಸ್ತೆ ಎತ್ತರಿಸುವುದು ಅನಿವಾರ್ಯವಾಗಿದೆ.ಇಲ್ಲಿ ಸುಮಾರು ಅರ್ಧ ಕಿ.ಮೀ.ರಸ್ತೆ ಮಣ್ಣಿನದಾಗಿದ್ದು, ಮಳೆಗಾಲದಲ್ಲಿ ಹೊಂಡ ಗುಂಡಿಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಗುಂಡೂರಿಯಿಂದ ಸುಮಾರು ಒಂದೂವರೆ ಕಿ.ಮೀ.ರಸ್ತೆ ಡಾಮರೀಕರಣಗೊಂಡಿಲ್ಲ. ಮಳೆಗಾಲದಲ್ಲಿ ಇದರಲ್ಲಿ ಸಂಚಾರ ದುಸ್ತರ. ಆದುದರಿಂದ ಎರಡೂ ಕಡೆ ರಸ್ತೆ ಅಭಿವೃದ್ಧಿಯಾಗಬೇಕಿದೆ.

-5.40 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಸಹಿತ ಸೇತುವೆ
-5 ಕಿ.ಮೀ. ದಾರಿಗೆ ಪ್ರಕೃತ 15 ಕಿ.ಮೀ. ಸಂಚರಿಸುವ ಅನಿವಾರ್ಯ
-ಸಂಪರ್ಕ ಪೂರ್ಣವಾದರೆ ಪ್ರದೇಶದ ಅಭಿವೃದ್ಧಿ
-ಜೋರು ಮಳೆಗೆ ಮುಳುಗಡೆಯಾಗುವ ರಸ್ತೆ

Advertisement

ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶಗಳಾದ ಅಜ್ಜಿಬೆಟ್ಟು, ಪಿಲಿಮೊಗರು, ದಂಡೆಗೋಳಿ, ಕೊಡಂಬೆಟ್ಟು, ಚೆನ್ನೈತ್ತೋಡಿ ಹಾಗೂ ಸಮೀಪದ ವಗ್ಗ, ಪಂಜಿಕಲ್ಲು ಮೊದಲಾದ ಊರವರಿಗೆ ವೇಣೂರಿಗೆ ತೆರಳಲು ಪಾಂಗಲ್ಪಾಡಿಯಿಂದ ಅಜ್ಜಿಬೆಟ್ಟು, ಕೊರಗಟ್ಟೆ ರಸ್ತೆಯಾಗಿ ಸಜೆಂಕಬೆಟ್ಟುವಿನಿಂದ ಕೇವಲ 5 ಕಿ.ಮೀ ಮಾತ್ರ ದೂರವಿದೆ. ಆದರೆ ಸಜಂಕಬೆಟ್ಟು ಬಳಿ ಹೊಳೆಗೆ ಸೇತುವೆ ನಿರ್ಮಾಣದಿಂದ ಹೊಳೆಯ ಇನ್ನೊಂದು ಬದಿಗೆ ಹೋಗಲು ಸಾಧ್ಯವಾಗುತ್ತದೆ. ಈ ಪ್ರದೇಶದ ಜನರು ಈಗ ವೇಣೂರಿಗೆ ಹೋಗಲು ನೇರಳಕಟ್ಟೆ -ನಯನಾಡು ರಸ್ತೆಯಾಗಿ ಸುಮಾರು 15 ಕಿ.ಮೀ ದೂರದ ರಸ್ತೆಯನ್ನು ಬಳಸಬೇಕಾಗುತ್ತದೆ.

ವೇಣೂರಿನ ಪರಿಸರದ ಜನರಿಗೂ ವಾಮದಪದವಿಗೆ ಇದು ಸನಿಹದ ದಾರಿಯಾ ಗಿದೆ. ವೇಣೂರಿನವರಿಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಿಬೆಟ್ಟುಪದವು ದೇವಸ್ಥಾನವೂ ಹತ್ತಿರವಾಗುತ್ತದೆ.ಈ ಸೇತುವೆ ನಿರ್ಮಾಣವಾದುದರಿಂದ ಹೆಚ್ಚಿನ ಸೌಲಭ್ಯಗಳು ದೊರೆತು ಜನರ ಪ್ರಯಾಣ ಹಾಗೂ ಸರಕು ಸಾಗಾಟ ಸುಗಮವಾಗಲಿದೆ ಎಂದು ಸ್ಥಳೀಯರಾದ ಮಹಾಲಿಂಗ ಶರ್ಮ ಅವರು ಅಭಿಪ್ರಾಯ ಪಡುತ್ತಾರೆ.

ಇಲ್ಲಿ ಸರ್ವ ಋತು ರಸ್ತೆ ನಿರ್ಮಾಣವಾದಲ್ಲಿ ಜನತೆಗೆ ಬಹಳ ಅನುಕೂಲವಾಗುವುದು. ಸಂಬಂಧಿಸಿದ ಎರಡೂ ತಾಲೂಕುಗಳ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next