Advertisement

ದಲಿತ ವಿದ್ಯಾರ್ಥಿ ಮೇಲಿನ ದೌರ್ಜನ್ಯಕ್ಕೆ ಖಂಡನೆ

03:50 PM Oct 05, 2018 | Team Udayavani |

ಜಗಳೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಸಂಶೋಧನಾ ದಲಿತ ವಿದ್ಯಾರ್ಥಿ ಮಹೇಶ್‌ ಸೂಸ್ಸೆ ಗೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ನೀಡದೆ ದೌರ್ಜನ್ಯವೆಸಗಿದ ವಿವಿ ಆಡಳಿತ ಮಂಡಳಿ ವೈಖರಿಯನ್ನು ಖಂಡಿಸಿ ಇಲ್ಲಿನ ಎಐಎಸ್‌ಎಫ್‌ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕುಲಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಎಐಎಸ್‌ಎಫ್‌ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್‌ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹಕ್ಕನ್ನು
ಪಡೆದುಕೊಳ್ಳುವ ಅವಕಾಶ ಸಂವಿಧಾನದಲ್ಲಿದೆ. ಆದರೆ ವಿದ್ಯಾರ್ಥಿ ಸಂಘಟನೆಯ ಮುಖಂಡ ಎಂಬ ಕಾರಣಕ್ಕಾಗಿ ಕುಲಸಚಿವರು ವಿದ್ಯಾರ್ಥಿಗೆ ಸರ್ಕಾರಿ ವಿದ್ಯಾರ್ಥಿನಿಯಲಯದಲ್ಲಿ ಪ್ರವೇಶ ತಡೆಹಿಡಿದಿರುವುದು ಖಂಡನೀಯ ಎಂದರು.

ನೊಂದ ಪ್ರತಿಭಾವಂತ ವಿದಾರ್ಥಿ ಹಾಸ್ಟೆಲ್‌ನ ಕಾರಿಡಾರ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈತನ ಬಗ್ಗೆ ಗಮನಹರಿಸಿಲ್ಲ. ಕೂಡಲೇ ಸಂಶೋಧನಾ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು. ಕುಲಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷೆ ವೀಣಾ ಮಾತನಾಡಿ, ಈ ಹಿಂದೆ ಹೈದ್ರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್‌ ವೆಮೂಲ ಪ್ರಕರಣ ಮಾಸದ ಬೆನ್ನಲ್ಲೆ ಪ್ರತಿಭಾವಂತ ದಲಿತ ವಿದ್ಯಾರ್ಥಿಯನ್ನು ಟಾರ್ಗೆಟ್‌ ಮಾಡುವ ಮೂಲಕ ಶೈಕ್ಷಣಿಕ ಹಕ್ಕನ್ನು ಕಸಿಯುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.

Advertisement

ಎಐಎಸ್‌ಎಫ್‌ ತಾಲೂಕು ಅಧ್ಯಕ್ಷ ಗೋಣಿಗೌತಮ್‌, ಪದಾಧಿಕಾರಿಗಳಾದ ಯುವರಾಜ್‌, ತಿಪ್ಪೇಸ್ವಾಮಿ, ಐಶ್ವರ್ಯ,
ಮುಖಂಡರಾದ ನಾಗರಾಜ್‌ ಮಲೆಮಾಚಿಕೆರೆ, ದೇವಿಕೆರೆ ಮಧು, ದಲಿತ ಮುಖಂಡ ನಾಗಲಿಂಗಪ್ಪ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next