ತುಮಕೂರು ಗ್ರಾಮಾಂತರ: ಕೊಪ್ಪಳ ಜಿಲ್ಲೆಯ ಮರಕಂಬಿ ಗ್ರಾಮದ 98 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಘಟನೆ ಮಾಸುವ ಮುನ್ನವೇ, ತುಮಕೂರಿನಲ್ಲಿಯೂ ಪರಿಶಿಷ್ಟ ಜಾತಿ ಮಹಿಳೆಯ ಬರ್ಬರ ಹತ್ಯೆ, ಜಾತಿ ನಿಂದನೆ
ಪ್ರಕರಣದಲ್ಲಿ 21 ಮಂದಿ ಅಪರಾಧಿಗಳಿಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ಹಾಗೂ 2,83,500 ರೂ. ದಂಡ ವಿಧಿಸಿದೆ.
Advertisement
ಒಟ್ಟು 21 ಅಪರಾಧಿಗಳ ಪೈಕಿ ಇಬ್ಬರು ಮಹಿಳೆಯರು, 19 ಜನ ಪುರುಷರಿದ್ದಾರೆ. ಚಿಕ್ಕನಾಯಕನಹಳ್ಳಿ ತಾ. ಹಂದನಕೆರೆ ಠಾಣಾ ವ್ಯಾಪ್ತಿಯ ಗೋಪಾಲ ಪುರದಲ್ಲಿ 2010ರ ಜೂನ್ 28ರಂದು ಹೊನ್ನಮ್ಮ ಕೊಲೆ ನಡೆದಿತ್ತು.
ಆರೋಪಿಗಳ ಮೇಲೆ ದೂರು ದಾಖಲಾಗಿತ್ತು. ಈಗಾಗಲೇ 6 ಮಂದಿ ಸಾವನ್ನಪ್ಪಿದ್ದಾರೆ.