Advertisement

ದೇಶದ ಅತಿ ಭ್ರಷ್ಟ ಸರಕಾರ ಕರ್ನಾಟಕದಲ್ಲಿದೆ: ರಾಹುಲ್ ಗಾಂಧಿ

02:32 PM Apr 01, 2022 | Team Udayavani |

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಗ್ಗಟ್ಟಿನ‌ ಮಂತ್ರ ಬೋಧಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ” 150 ಸ್ಥಾನಗಳಲ್ಲಿ ಗೆಲ್ಲಲೇಬೇಕೆಂಬ” ಟಾರ್ಗೇಟ್ ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಭಾಷಣ ಮಾಡಿದ ಅವರು, ಕರ್ನಾಟಕ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಗೆಲ್ಲುವುದು ಕಷ್ಟವಲ್ಲ. ಆದರೆ ನಮಗೆ ಸಾಮಾನ್ಯ ಗೆಲುವು ಬೇಡ. 150 ಸ್ಥಾನಗಳಿಗಿಂತ ಕಡಿಮೆ ಗುರಿ ಯಾವುದೇ ಕಾರಣಕ್ಕೂ ಬೇಡ. ನೀವೆಲ್ಲರೂ ಒಟ್ಟಾಗಿ ಹೋದರೆ, ಸೂಕ್ತ, ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಖಂಡಿತ ಈ ಗುರಿ ತಲುಪಲು ಸಾಧ್ಯ ಎಂದು ಸಲಹೆ ನೀಡಿದರು.

ಟಿಕೆಟ್ ಹಂಚಿಕೆ ಮಾಡುವಾಗ ಕೇವಲ ಹಳೆ ಇತಿಹಾಸ ನೋಡುತ್ತಾ ಇದ್ದರೆ ಸಾಧ್ಯವಿಲ್ಲ. ಈ‌ಕ್ಷಣದಲ್ಲಿ ಯಾರು ಕಾಂಗ್ರೆಸ್ ಪರ ಬದ್ಧತೆಯಿಂದ ನಿಲ್ಲುತ್ತಾರೋ ಅಂಥವರಿಗೆ ಅವಕಾಶ ನೀಡಿ. ಮಹಿಳೆಯರು ಹಾಗೂ ಯುವಕರಿಗೆ ವಿಶೇಷ ಆಧ್ಯತೆ ನೀಡಿ. ನೀವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಈ ಗುರಿ ಅಸಾಧ್ಯವಲ್ಲ. ಆದರೆ 150 ಕ್ಕಿಂತ ಒಂದು ಸ್ಥಾನದಲ್ಲೂ ಕಡಿಮೆ ಗೆಲ್ಲುವುದಿಲ್ಲ ಎಂಬ ಬದ್ಧತೆಯನ್ನು ಈಗಲೇ ಇಟ್ಟುಕೊಳ್ಳಿ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೋಮು ವಿವಾದಕ್ಕರ ಸಂಬಂಧಪಟ್ಟ ವಿಚಾರಗಳ ಬಗ್ಗೆ ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪಿಸದ ರಾಹುಲ್ ಗಾಂಧಿ,ಹಿಂದುಸ್ಥಾನದ ಆರ್ಥಿಕ ಶಕ್ತಿಯನ್ನು ಬಿಜೆಪಿ ಸರಕಾರ ಹಾಳು ಮಾಡಿದೆ. ಯುವಕರಿಗೆ ಉದ್ಯೋಗ ನೀಡುವ ಸಣ್ಣ ಹಾಗೂ ಮಧ್ಯಮ‌ಕೈಗಾರಿಕೆಯನ್ನು ನಾಶ ಮಾಡಿ ಕೇವಲ‌ಮೂರ್ನಾಲ್ಕು ಉದ್ಯಮಿಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಅವರಿಂದ ಬಂದ ಹಣದಲ್ಲಿ ಜಾತಿ, ಧರ್ಮಗಳನ್ನು ಒಡೆದು ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಈಗ ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಕರೆ ನೀಡಲು ಸಾಧ್ಯವೇ ? ಏಕೆಂದರೆ ದೇಶದ ಅತಿ ಭ್ರಷ್ಟ ಸರಕಾರ ಕರ್ನಾಟಕದಲ್ಲಿ ಇದೆ ಎಂದು ವ್ಯಂಗ್ಯವಾಡಿದರು.

Advertisement

ನಿಕಟ ಫಲಿತಾಂಶಕ್ಕಾಗಿ ನಾವು ಚುನಾವಣೆಯಲ್ಲಿ ಹೋರಾಡಬಾರದು, ನಿರ್ಣಾಯಕ ಸರ್ಕಾರ ರಚಿಸಲು ನಾವು ಹೋರಾಡಬೇಕು. ನಮ್ಮ ದೇಶದ ಆರ್ಥಿಕತೆ ಕುಸಿದಿದೆ. ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚಾಗಿದೆ, ಇವು ದೇಶದ ದೊಡ್ಡ ಸಮಸ್ಯೆಗಳಾಗಿವೆ. ಬಿಜೆಪಿ ಬಯಸಿದರೂ, ಭಾರತದಲ್ಲಿ ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಏಕೆಂದರೆ ಅವರು ಉದ್ಯೋಗ ಒದಗಿಸುವ ಕ್ಷೇತ್ರಗಳನ್ನು ನಾಶಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next