Advertisement
ನಗರದಲ್ಲಿ ನಡೆದ 76 ನೇ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಬುನಾದಿ ಇಲ್ಲದೇ ಇದ್ದರೆ ಸಂವಿಧಾನ ಬರೆಯಲು ಸಾಧ್ಯವೇ ಇರಲಿಲ್ಲ. ಹೀಗಾಗಿ, ಕಾಂಗ್ರೆಸ್ ಇಲ್ಲದಿದ್ದರೆ ಅಖಂಡ ಭಾರತದ ಕಲ್ಪನೆಯೇ ದುರ್ಬಲವಾಗಲಿದೆ ಎಂದು ತಿಳಿಸಿದರು.
Related Articles
Advertisement
ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ಹೋರಾಟ ಇರದಿದ್ದರೆ ರಾಜ್ಯಗಳೇ ಇಂದು ಪ್ರತ್ಯೇಕ ದೇಶಗಳಾಗುತ್ತಿದ್ದವು ಎಂದರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಾರೆ ಇಂತಹ ಸಿದ್ದಾಂತ ಇರಬೇಕಾ? ಒಂದೇ ಪಕ್ಷ ಇರಬೇಕು ಎನ್ನುವ ಸಿದ್ದಾಂತ ಬೇಕಾ?ಇದು ಮೂಲಭೂತವಾದಿಗಳ ಸಿದ್ಧಾಂತ. ದೇಶದಲ್ಲಿ ಸರ್ವಾಧಿಕಾರಿ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜಿಪಿ ಮುಕ್ತ ಎಂದು ಕಾಂಗ್ರೆಸ್ ಎಂದೂ ಹೇಳಿಲ್ಲ. ಹೇಳುವುದೂ ಇಲ್ಲ ಎಂದು ಪ್ರತಿಪಾದಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಕ್ವಿಟ್ ಇಂಡಿಯಾ ಚಳವಳಿಯಂತೆ ಬಿಜೆಪಿಯವರೇ ಅಧಿಕಾರ ತ್ಯಜಿಸಿ ಎನ್ನುವ ಕರೆಯೊಂದಿಗೆ ಹೋರಾಟ ನಡೆಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
“ಬಡತನ ತೊಲಗಬೇಕು’: ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ ಆದರೂ ಕ್ವಿಟ್ ಇಂಡಿಯಾ ಚಳವಳಿ ಅಗತ್ಯವಿದೆ. ಬಡತನ ಭಾರತ ಬಿಟ್ಟು ತೊಲಗಬೇಕಿದೆ ಎಂದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ವಿ ಮಂಜುನಾಥ್ ಹೇಳಿದರು.
ಇಂದಿರಾಗಾಂಧಿ ಗರೀಬಿ ಹಠಾವೋ ಕರೆ ನೀಡಿದರು. ಅವರ ಹತ್ಯೆ ನಡೆಯದಿದ್ದರೆ ಗರೀಬಿ ಹಠಾವೋ ಘೋಷಣೆ ಜಾರಿಗೆ ತರುತ್ತಿದ್ದರು. ಆದರೆ ಅವರ ಹತ್ಯೆಯಾದ ಕಾರಣ ಗರೀಬಿ ಹಠಾವೋ ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಡತನ ನಿವಾವರಣೆಗೆ ಸರ್ಕಾರಗಳು ಮುಂದಾಗಬೇಕು, ಪಕ್ಷಬೇಧವಿಲ್ಲದೆ ಸರ್ಕಾರಗಳು ಆ ಪ್ರಯತ್ನ ನಡೆಸಬೇಕು. ದನದ ಕೊಟ್ಟಿಗೆಯಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬಡತನ ನಿರ್ಮೂಲನೆ ಕಾರ್ಯ ಅಭಿಯಾನದ ಮೂಲಕ ಮಾಡಿ ಎಂದು ಪ್ರಧಾನಿಗಳಿಗೆ ಪತ್ರ ಬರೆದಿ¨ªೆ ಆದರೆ ಅವರು ಏನು ಕ್ರಮ ಕೈಗೊಂಡರೋ ಗೊತ್ತಿಲ್ಲ ಎಂದರು.