Advertisement

ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್‌. ಪಿ. ಶೆಣೈ

01:48 PM Apr 16, 2021 | Team Udayavani |

ಮುಂಬಯಿ: ವಿದ್ಯಾರ್ಥಿ ಗಳ ಅಧ್ಯಯನ ಸಂದರ್ಭ ವಾರ್ಷಿ ಕೋತ್ಸವವು ಮಹತ್ತರ ಸ್ಥಾನ ಪಡೆದು ಕೊಂಡಿದ್ದು, ಶೈಕ್ಷಣಿಕ ವರ್ಷದ ಸಮಗ್ರ ಚಿತ್ರಣವನ್ನು ಪ್ರದರ್ಶಿಸುತ್ತದೆ. ವಿದ್ಯಾರ್ಥಿಗಳ ಸಮಗ್ರ ಪ್ರಗತಿಯ ಅನಾವರಣ ಒಂದೆಡೆಯಾದರೆ, ಮತ್ತೂಂ ದೆಡೆ ಜ್ಞಾನಾಭಿವೃದ್ಧಿಗಾಗಿ, ವ್ಯಕ್ತಿತ್ವ ವಿಕಾಸಕ್ಕಾಗಿ ಶಾಲಾ – ಕಾಲೇಜುಗಳು ಮಾಡಿಕೊಂಡು ಬಂದಂತಹ ಯೋಜನೆಗಳ ಪ್ರಾಮುಖ್ಯತೆ ಒಳಗೊಂಡಿರುತ್ತದೆ. ಎನ್‌.ಬಿ. ಎಚ್‌. ಕುಲಕರ್ಣಿಯವರ ಮನೆಯಿಂದ ಪ್ರಾರಂಭವಾದ ವಿದ್ಯಾ ಪ್ರಸಾರಕ ಮಂಡಳವು ಕಳೆದ 60 ವರ್ಷಗಳಿಂದ ನಿರಂತರ ಸೇವೆ ನೀಡುತ್ತಿದೆ.

Advertisement

ಇಂದು ಉತ್ತುಂಗ ಕ್ಷೇತ್ರದಲ್ಲಿ ಮಂಡಳವು ಗುರುತಿಸಿಕೊಳ್ಳುವಲ್ಲಿ ಪ್ರಯತ್ನ, ಪ್ರಾಮಾಣಿಕತೆ, ಶಿಸ್ತು, ಅವಿಶ್ರಾಂತ ನಾಯಕತ್ವ, ಅಹರ್ನಿಶಿ ಕಾರ್ಯ, ನಿಸ್ವಾರ್ಥ ಮನೋಭಾವನೆ, ದಾನಿಗಳ ಉದಾರ ಗುಣ, ಶಿಕ್ಷಕರ ಶ್ರಮ ಶ್ಲಾಘನೀಯ. ನಿರಂತರವಾದ ಚಿಂತನ – ಮಂಥನದಿಂದ ಶ್ರೇಷ್ಠ ಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ಬದಲಾವಣೆ ತರಲು ಶ್ರಮಿಸುತ್ತಿರುವ ಕಾರ್ಯಕಾರಿ ಮಂಡಳಿ ಹಾಗೂ ತಮ್ಮ ಜ್ಞಾನವೆಂಬ ಪ್ರಕಾಶದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ನಕ್ಷತ್ರದಂತೆ ಹೊಳೆಯಲು ಸದಾ ಕಾರ್ಯೋನ್ಮುಖರಾದ ಅಧ್ಯಾಪಕರ ಸೇವೆ ಅವಿಸ್ಮರಣೀಯ ಎಂದು ಎಸ್‌. ಪಿ. ಶೆಣೈ ತಿಳಿಸಿದರು.

ವಿದ್ಯಾ ಪ್ರಸಾರಕ ಮಂಡಳದ ಜೂನಿಯರ್‌ ಕಾಲೇಜಿನ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ದೀಪ ಪ್ರಜ್ವಲಿಸಿ, ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಡಾ| ಪಿ.ಎಂ. ಕಾಮತ್‌ ಅವರು ಅತಿಥಿ ಗಳಿಗೆ ಪುಷ್ಪಗುತ್ಛ ನೀಡಿ ಗೌರವಿಸಿ ದರು.

ಜೂನಿಯರ್‌ ಕಾಲೇಜಿನ ಆರಂಭದ ದಿನಗಳನ್ನು, ಶಿಕ್ಷಣ ವಿಭಾಗದ ಅಧಿಕಾರಿಗಳ ಸ್ನೇಹ ಸಂಬಂಧ ಮತ್ತು ಸಹಕಾರವನ್ನು ಸ್ಮರಿಸಿದ ಅವರು ಅನುದಾನರಹಿತ ಕಾಲೇಜ್‌ ಅನ್ನು ಅನುದಾನಕ್ಕೆ ಮಾನ್ಯತೆ ಪಡೆಯಲು ಪಟ್ಟ ಶ್ರಮದ ಕುರಿತು ಹಂಚಿಕೊಂಡರು. ಏಂಟು ವರ್ಗ ವಿಭಾಗಗಳನ್ನು ಒಳಗೊಂಡ ಜೂನಿಯರ್‌ ಕಾಲೇಜ್‌ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಒಳಗೊಂಡಿದ್ದು, ಕಲಾ ವಿಭಾಗವನ್ನು ಸೇರ್ಪಡೆಗೊಳಿಸಲು ಪ್ರಯತ್ನ ಮಾ ಡುತ್ತಿದ್ದು, ಶೀಘ್ರದಲ್ಲಿ ನೆರವೇರಲಿದೆ ಎಂದು ತಿಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಕೋರಿದರು.

ಪ್ರಾಂಶುಪಾಲೆ ಅರ್ಚನಾ ಬಿರಾಜದಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಸಮಗ್ರ ವರದಿ ತಿಳಿಸಿದರು, ಅತಿಥಿ -ಅಧ್ಯಕ್ಷರ ಪರಿಚಯವನ್ನು ಮತ್ತು ಸ್ವಾಗತವನ್ನು ರಾಖೀ ಖೇಣಿ ಮತ್ತು ವಂದನಾ ರಾಹುತ್‌ ಮಾಡಿದರೆ, ಶಾಮಾದೇವಿ ಯಾದವ್‌ ಅವರ ಸಾಧನೆಯನ್ನು ಕವಿತೆ ಮೂಲಕ ಪ್ರಶಂಸಿಸಿದರು.

Advertisement

ವಿN°àಶ್ವರನ ಶ್ಲೋಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ ಮುಳಗುಂದ, ಕಾರ್ಯದ ರ್ಶಿಗಳಾದ ಬಿ. ಎಚ್‌. ಕಟ್ಟಿ, ನ್ಯಾಯ ವಾದಿ ವಿಜಯ ಕುಲಕರ್ಣಿ, ಎನ್‌. ಎಂ. ಗುಡಿ, ಪ್ರಸನ್ನ ಪಂಡಿತ ಮತ್ತಿತರ ಪದಾಧಿಕಾರಿಗಳು, ನಿವೃತ್ತ ಪ್ರಾಂಶುಪಾಲೆ ನಿರುಪಾ ಜೊರಾಪುರ, ಉಪ ಪ್ರಾಂಶುಪಾಲರಾದ ಎ. ಕೆ.
ಜಾಧವ್‌, ಶಿಕ್ಷಕರು, ಶಿಕ್ಷಕೇತರ ಸಿಬಂ ದಿ, ಪಾಲಕರು ಉಪಸ್ಥಿತರಿದ್ದರು.

ಶೈಕ್ಷಣಿಕ ವರ್ಷದ ಹಾಗೂ ದತ್ತಿ ಬಹುಮಾನ ವಿಜೇತರ ಯಾದಿ ಯನ್ನು ಅಪರ್ಣಾ ಲೋನಕಡೆ ಮತ್ತು ಮನೋಜ್‌ ಪಾಟಕ್‌ ಓದಿದರು. ಸಚಿನ್‌ ಕೋಟ್ಯಾನ್‌, ಶೇರಿಗಾರ ಸುಪ್ರೀತಾ ಆದರ್ಶ ವಿದ್ಯಾರ್ಥಿ
ಗಳ ಕೀರ್ತಿಗೆ ಪಾತ್ರರಾದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚೇತನಾ ಬೋಸ್ಲೆ ನಡೆಸಿಕೊಟ್ಟರು. ತಾಂತ್ರಿಕ ಸಲಹೆಗಾರರಾಗಿ ರಜನಿ ಕಾರ್ಯನಿರ್ವಹಿಸಿದರು. ರಾಷ್ಟ್ರಗೀತೆ ಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next